»   » ಸ್ಯಾಂಡಲ್ ವುಡ್ ತಾರೆಗಳಿಗೆ ಅದೃಷ್ಟ ಕೈ ಕೊಟ್ಟಾಗ...

ಸ್ಯಾಂಡಲ್ ವುಡ್ ತಾರೆಗಳಿಗೆ ಅದೃಷ್ಟ ಕೈ ಕೊಟ್ಟಾಗ...

By: ಜೀವನರಸಿಕ
Subscribe to Filmibeat Kannada

ಸಿನಿಮಾ ಅನ್ನೋ ಮಾಯಾಲೋಕದಲ್ಲಿ ಎಷ್ಟೇ ಟ್ಯಾಲೆಂಟ್ ಇದ್ರೂ ಕೊನೆಗೆ ಕೈ ಹಿಡಿಯೋದು ಅದೃಷ್ಟ ಮಾತ್ರ. ಆ ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತೆ ಅನ್ನೋದು ಗೊತ್ತಾಗಲ್ಲ. ತಾನೊಬ್ಬ ಹೀರೋ ಅಗ್ಬೇಕು. ಅದರಲ್ಲೂ ಮೊದಲು ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗ್ಬೇಕು ಅನ್ನೋ ಆಸೆ ಇರುತ್ತೆ.

ಆದರೆ ಅದೃಷ್ಟ ಅನ್ನೋದೊಂದು ಇದೆಯಲ್ಲ ಅದು ಯಾರ್ಯಾರನ್ನ ಎಲ್ಲೆಲ್ಲಿ ಕೈ ಹಿಡಿಬೇಕೋ ಅಲ್ಲಿ ಮಾತ್ರ ಕೈ ಹಿಡಿಯೋದು. ಹಾಗಾಗೀನೇ ಅದ್ಭುತವಾಗಿ ನಟಿಸಿದ್ರೂ ಸೋಲು ಕೆಲವರ ಮೈಮೇಲೆ ಬೇತಾಳನ ತರಹ ಹತ್ತಿ ಕುಳಿತಿರುತ್ತದೆ. ಕೆಲವರು Try & Try Until You Succeed ಅಂತ ಪ್ರಯತ್ನಿಸ್ತಿದ್ದಾರೆ. ['ಸಿದ್ದಾರ್ಥ'ನಾಗಿ ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ]

ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನಾಯಕ ನಟರಿಗೇನೂ ಕಮ್ಮಿ ಇಲ್ಲ. ಆದರೆ ಆ ನಂತರ ಅವರ ಕೆರಿಯರ್ ಗ್ರಾಫ್ ಫುಲ್ ಡೌನ್. ಅಚ್ಚರಿ ಅಂದ್ರೆ ಟ್ಯಾಲೆಂಟ್ ಇಲ್ಲದಿದ್ರೂ ಅದ್ಭುತ ಅನ್ನಿಸೋ ಅಭಿನಯ ನೀಡದಿದ್ರೂ ಮೊದಲ ಸಿನಿಮಾ ಗೆದ್ದ ಮಾತ್ರಕ್ಕೆ ಕೆಲವು ಹೀರೋಗಳು ಈಗಲೂ ಯಶಸ್ವಿ ಹೀರೋಗಳಾಗಿ ಮಿಂಚ್ತಿದ್ದಾರೆ. ಗೆದ್ದವರೂ ನಿಮ್ಗೆಲ್ಲಾ ಗೊತ್ತೆ ಇರ್ತಾರೆ. ಆದ್ರೆ ಸೋತವರನ್ನ ನೆನಪಿಸಿಕೊಡ್ತೀವಿ ಸ್ಲೈಡ್ ಸರಿಸಿ ನೋಡಿ.

ಒಲವೇ ಮಂದಾರ ಶ್ರೀಕಿ

ಮೊದಲ ಸಿನಿಮಾ 'ಒಲವೇ ಮಂದಾರ' ಚಿತ್ರದಲ್ಲಿ ಯಶಸ್ವಿ ನಾಯಕ ಅನ್ನಿಸಿಕೊಂಡ ಶ್ರೀಕಿ ಮೊದಲ ಸಿನಿಮಾದಲ್ಲೇ ದೊಡ್ಡ ಹೀರೋ ಆಗೋ ನಿರೀಕ್ಷೆ ಮೂಡಿಸಿದ ನಟ. ಆದರೆ ಅದಾದ ಎರಡು ವರ್ಷ ಶ್ರೀಕಿ ಸಿನಿಮಾಗಳು ರಿಲೀಸೇ ಆಗ್ಲಿಲ್ಲ. ಶ್ರೀಕಿಯನ್ನ ಚಿತ್ರಪ್ರೇಮಿಗಳು ಆಗಾಗ ಹಾಡು ಬಂದಾಗ ನೋಡಿ ನೆನಪಿಸಿಕೊಳ್ಳುವಂತಾಗಿದೆ.

ಪಟ್ರೆ ಲವ್ಸ್ ಪದ್ಮ ಅಜಿತ್

ಮೊದಲ ಸಿನಿಮಾ ಪಟ್ರೆ ಲವ್ಸ್ ಪದ್ಮದಲ್ಲಿ ಭರ್ಜರಿ ನಿರೀಕ್ಷೆ ಮೂಡಿಸಿದ ನಟ ಅಜಿತ್. ಮೊದಲ ಸಿನಿಮಾ ಹಿಟ್ಟಾಗಿದಿದ್ರೂ ಒಳ್ಳೆಯ ನಿರೀಕ್ಷೆ ತಂದಿಟ್ಟಿತ್ತು. ಹಾಡುಗಳು ಕೂಡ ಮೋಡಿ ಮಾಡಿದ್ವು. ಆದ್ರೆ ಈಗ ಅಜಿತ್ ಸಿನಿಮಾದಲ್ಲಿದ್ದಾರಾ ಅಂತ ಚಿತ್ರಪ್ರೇಮಿಗಳು ಕೇಳೋ ಹಾಗಾಗಿದೆ.

ಹ್ಯಾಂಡ್ಸಮ್ ತರುಣ್ ಚಂದ್ರ

ಸ್ಯಾಂಡಲ್ ವುಡ್ ಹ್ಯಾಂಡಸಮ್ ಹೀರೋ ತರುಣ್ ಚಂದ್ರ ಸಿನಿಮಾಗಳು ಬಂದಿದ್ದು ತೀರಾ ಕಡಿಮೆ. ಇತ್ತೀಚೆಗೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ತಿರೋ ತರುಣ್ ಚಂದ್ರ ಅಭಿನಯದ 'ಗೋವಾ' ಚಿತ್ರ ತೆರೆಗೆ ಬರ್ತಿದೆ. ಸದ್ಯ ತರುಣ್ ಚಂದ್ರ ವಿಭಿನ್ನವಾಗಿ ತೆರೆಗೆ ಬರೋ ತಯಾರಿಯಲ್ಲಿದ್ದಾರೆ.

ಪ್ರಜ್ವಲ್ ದೇವರಾಜ್ ಗೆಲುವಿನ ಮೆರವಣಿಗೆ ಇಲ್ಲ

ಪ್ರಜ್ವಲ್ ದೇವರಾಜ್ ಬ್ಯಾಕ್ ಟು ಬ್ಯಾಕ್ ಹಲವು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆದ್ರೆ ಗೆಲವು ಮಾತ್ರ ಪ್ರಜ್ವಲ್ ಗೂ ಮರೀಚಿಕೆ. ಎಂಟ್ರಿಯಲ್ಲೇ ಗೆಲುವಿನ ಸಿಕ್ಸರ್ ಹೊಡೆದ ಪ್ರಜ್ವಲ್ ಈಗ್ಯಾಕೋ ಮಂಕು.

ಡೆಡ್ಲಿ ಸೋಮನ ಲವ್ ಫೇಲ್

ಸ್ಯಾಂಡಲ್ ವುಡ್ ನ ಡೆಡ್ಲಿ ಸೋಮ ಆದಿತ್ಯ ಇತ್ತೀಚೆಗೆ ಅಭಿನಯಿಸ್ತಾ ಇಲ್ವೋ ಅಥವಾ ಆಫರ್ಗಳೇ ಇಲ್ವೋ ಗೊತ್ತಿಲ್ಲ. ಆದರೆ ಅದಿತ್ಯ ತೆರೆ ಮೇಲೆ ಕಾಣಿಸಿಕೊಳ್ಳೋ ಎದೆಗಾರಿಕೆ ತೋರಿಸ್ತಿಲ್ಲ. ಅವರ ಮುಂದಿನ ಸಿನಿಮಾ ರೆಬೆಲ್ ತೆರೆಗೆ ಬರೋದ್ಯಾವಾಗಾ ಅಂತಾನೂ ಗೊತ್ತಿಲ್ಲ.

ಹರೀಶ್ ರಾಜ್ ಅನ್ನೋ ಸೋಲೋ ಹೀರೋ

ಹರೀಶ್ ರಾಜ್ ಒಳ್ಳೆಯ ನಟ ಅಲ್ಲ ಅಂತ ಯಾರೂ ಹೇಳೋದಿಲ್ಲ. ಆದ್ರೆ ಸಿನಿಮಾಗಳು ಮಾತ್ರ ಗೆದ್ದಿಲ್ಲ. ಹರೀಶ್ ರಾಜ್ ರನ್ನ ಹೀರೋ ಆಗಿ ಮಾಡಿ ಸಿನಿಮಾ ಮಾಡೋಕೆ ನಿರ್ಮಾಪಕರಿಗೆ ಧೈರ್ಯ ಇಲ್ಲ. ಆದರೆ ಹರೀಶ್ ರಾಜ್ ಪ್ರತಿಭಾವಂತ ಅನ್ನೋದ್ರಲ್ಲಿ ಅನುಮಾನವಿಲ್ಲ.

ದಿಲೀಪ್ ರಾಜ್ ರಾಜನಾಗಲಿಲ್ಲ

ದಿಲೀಪ್ ರಾಜ್ ಅನ್ನೋ ನಟ ಕೂಡ ಹೀರೋ ಆಗಿ ಅದೃಷ್ಟ ಪರೀಕ್ಷೆ ಮಾಡಿದ ನಟ. ಆದ್ರೆ ಗೆಲವು ಬಂದು ದಿಲೀಪನನ್ನ ರಾಜನನ್ನಾಗಿ ಮಾಡಲಿಲ್ಲ. ದಿಲೀಪ್ ರಾಜ್ ಇತ್ತೀಚೆಗೆ ಧಾರಾವಾಹಿಯನ್ನೂ ಮಾಡ್ತಿದ್ದಾರೆ. ಎಫ್ ಎಂನಲ್ಲೂ ಸೌಂಡ್ ಮಾಡ್ತಿದ್ದಾರೆ. ಆದ್ರೆ ಗೆಲುವು ಮಾತ್ರ ಮಾರು ದೂರ.

English summary
Here is the list of Sandalwood stars, who are talented but unlucky for giving back to back hit movies. Young talented actors like Prajwal Devraj, Harish Raj, Patre Ajith, Sreeki are all fight a losing battle in Sandalwood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada