»   » ಹಾಟ್ ಬ್ಯೂಟಿ ತಮನ್ನಾ ಲಕ ಲಕ ಫೋಟೋಗಳು

ಹಾಟ್ ಬ್ಯೂಟಿ ತಮನ್ನಾ ಲಕ ಲಕ ಫೋಟೋಗಳು

By: ಉದಯರವಿ
Subscribe to Filmibeat Kannada

ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಈ ಬೆಡಗಿಗೆ ತಮಿಳುನಾಡಿನಲ್ಲಿ ಗುಡಿಕಟ್ಟಿಸುವ ಅಭಿಮಾನಿಗಳಿಗೂ ಬರವಿಲ್ಲ. ದಕ್ಷಿಣದಲ್ಲಿ ಕುಂಟಾಬಿಲ್ಲೆ ಆಡುತ್ತಾ ಹಿಂದಿಗೂ ಲಗ್ಗೆ ಹಾಕಿದ ತಾರೆ. 'ಹಿಮ್ಮತ್ ವಾಲಾ' ಎಂಬ ಚಿತ್ರದ ಮೂಲಕ ತಮನ್ನಾ ಬಾಲಿವುಡ್ ಅಂಗಳಕ್ಕೂ ಅಡಿಯಿಟ್ಟಿದ್ದಾರೆ.

ಅಜಯ್ ದೇವಗನ್ ನಾಯಕನಾಗಿರುವ 'ಹಿಮ್ಮತ್‌ವಾಲಾ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ರು.70ರಿಂದ 80 ಲಕ್ಷ ಸಂಭಾವನೆ ಎಣಿಸುತ್ತಿರುವ ಈ ತಾರೆಗೆ ಹಿಂದಿಯಲ್ಲೂ ಭರ್ಜರಿ ಆಫರ್ ಸಿಕ್ಕಿದೆಯಂತೆ.

ತಮನ್ನಾ ಭಾಟಿಯಾ ಸೆಕ್ಸಿ ಸ್ಪಾಟ್ ಯಾವುದು?

ಒಬ್ಬೊಬ್ಬ ತಾರೆಗೆ ಒಂದೊಂದು ಆಕರ್ಷಕ ಭಾಗ ಇರುವಂತೆ ತಮನ್ನಾಗೂ ಒಂದು ಸೆಕ್ಸಿ ಸ್ಪಾಟ್ ಇದೆ. ಆಕೆಯ ಮುಗುಳ್ನಗೆಯೇ ಆಕೆಯ ಸೆಕ್ಸಿ ಸ್ಪಾಟ್ ಎಂಬುದು ವಿಶೇಷ. ಐದು ಅಡಿ ಎರಡು ಇಂಚು ಎತ್ತರದ ಈ ಬೆಡಗಿಗೆ ಕ್ರಿಕೆಟ್ ಎಂದರೆ ಸಖತ್ ಇಷ್ಟ.

ಪ್ರೀತಿ ಜಿಂಟಾ ಎಂದರೆ ತಮನ್ನಾಗೆ ಬಲು ಅಕ್ಕರೆ

ದಕ್ಷಿಣದಲ್ಲಿ ಬಹಳ ಎತ್ತರಕ್ಕೆ ಏರಬೇಕೆಂದಿರುವ ತಮನ್ನಾಗೆ ಬಾಲಿವುಡ್ ತಾರೆ ಪ್ರೀತಿ ಜಿಂಟಾ ಎಂದರೆ ಬಲು ಅಕ್ಕರೆ. ತನ್ನ ತಂದೆಯೇ ತನಗೆ ರೋಲ್ ಮಾಡಲ್ ಎನ್ನುತ್ತಾರೆ ತಮನ್ನಾ.

ಮೆಚ್ಚಿನ ಪಾನೀಯ ಬಿಯರ್, ಸಾಫ್ಟ್ ಡ್ರಿಂಕ್ಸ್

ಸಾಫ್ಟ್ ಡ್ರಿಂಕ್ಸ್ ಹಾಗೂ ಬಿಯರ್ ಎಂದರೆ ತಮನ್ನಾಗೆ ಇಷ್ಟವಂತೆ. ಹಾಗೆಯೇ ಜೀನ್ಸ್, ಟಿ-ಶರ್ಟ್, ಸೀರೆಗೂ ಮನಸೋಲುತ್ತಾರೆ. ಒಮ್ಮೆ ಜೀನ್ಸ್ ಪ್ಯಾಂಟಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದು ವಿವಾದಕ್ಕೆ ಗುರಿಯಾಗಿದ್ದರು.

ತಮನ್ನಾಗೆ ಐದು ಭಾಷೆಗಳು ಗೊತ್ತಂತೆ

ಈಕೆಗೆ ಕನ್ನಡ ಭಾಷೆ ಗೊತ್ತಿದ್ದಿದ್ದರೆ ಇಷ್ಟೊತ್ತಿಗೆ ಗಾಂಧಿನಗರಲ್ಲೂ ಒಂದು ಸುತ್ತು ಹಾಕುತ್ತಿದ್ದರೇನೋ. ಆದರೆ ತಮನ್ನಾಗೆ ಗೊತ್ತಿರುವುದು ಇಂಗ್ಲಿಷ್, ಹಿಂದಿ, ತೆಲುಗು ಹಾಗೂ ತಮಿಳು ಮಾತ್ರ. ಪಂಜಾಬಿ ಈಕೆಯ ಮಾತೃಭಾಷೆ.

ಮಿಲ್ಕಿ ಬ್ಯೂಟಿ ತಮನ್ನಾ ಹವ್ಯಾಸಗಳು

ಸಂಗೀತ, ಡಾನ್ಸ್ ಹಾಗೂ ಚಿತ್ರಗಳ ವೀಕ್ಷಣೆ. ನೀಲಿ ಮತ್ತು ಕೆಂಪು ನೆಚ್ಚಿನ ಬಣ್ಣಗಳು. ಪಂಜಾಬಿ ಶೈಲಿಯ ತಿಂಡಿಗಳೆಂದರೆ ಬಾಯಿ ಚಪ್ಪರಿಸುತ್ತಾರೆ. ಕೇರಳ ಹಾಗೂ ಗೋವಾ ಇಷ್ಟದ ತಾಣಗಳು.

ತಂಪು ತಂಪು ಕೂಲ್ ಕೂಲ್ ಪಾಂಟಾ ರಾಯಭಾರಿ

ತಂಪು ಪಾನೀಯ ಪಾಂಟಾ ರಾಯಭಾರಿಯಾಗಿ ತಮನ್ನಾ ಕಾಣಿಸುತ್ತಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ರಾಯಭಾರಿಯಾಗಿ ಅವರು ವ್ಯವಹರಿಸುತ್ತಿದ್ದಾರೆ. ಈ ಹಿಂದೆ ಸೆಲ್ ಕಾನ್ ಮೊಬೈಲ್ ಹಾಗೂ ಚಂದ್ರಿಕಾ ಆಯುರ್ವೇದಿಕ್ ಸೋಪ್ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ.

ತಮನ್ನಾ ಸೊಂಟ ಸೂಪರ್ ಆದ್ರೆ ಭಾರಿ ಡೇಂಜರು

ತಮನ್ನಾ ಈ ಹಿಂದೊಮ್ಮೆ ಸುಂದರ ಸೊಂಟದ ಒಡತಿ ಎಂದು ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿದ್ದ ಶ್ರಿಯಾ ಸರನ್, ಅನುಷ್ಕಾ ಶೆಟ್ಟಿ ಅವರನ್ನೂ ಹಿಂದಿಕ್ಕಿ ಸೊಂಟದಲ್ಲಿ ಸೂಪರ್ ಅನ್ನಿಸಿಕೊಂಡಿದ್ದರು ತಮನ್ನಾ.

ತಮನ್ನಾ ಮೇಲೆ ತಮಿಳು ಚಿತ್ರರಂಗ ಗರಂ

ಮೊದಲೇ ಶ್ರೀಲಂಕಾಗೂ ತಮಿಳು ಚಿತ್ರರಂಗಕ್ಕೂ ಎಣ್ಣೆಸೀಗೆಕಾಯಿ ಸಂಬಂಧ. ಅಂಥದರಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ತಮನ್ನಾ ಶ್ರೀಲಂಕಾಗೆ ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ತಮನ್ನಾ ಶ್ರೀಲಂಕಾಗೆ ಹೋದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ನಿಷೇಧ ಹೇರಿತ್ತು.

ಟೂ ಪೀಸ್ ಬಿಕಿನಿಗೂ ಓಕೆ ಎಂದಿದ್ದ ತಮನ್ನಾ

ಬಿಕಿನಿಗೆ ತಮನ್ನಾ ದೇಹ ಹೇಳಿ ಮಾಡಿಸಿದಂತಿದೆ. ಹಾಗಾಗಿ ಈಕೆ ಟೂ ಪೀಸ್ ಬಿಕಿನಿ ಸನ್ನಿವೇಶಗಳಿಗೂ ಓಕೆ ಎಂದಿದ್ದರು. ಇದಕ್ಕಾಗಿ ಹೆಚ್ಚುವರಿ ಸಂಭಾವನೆಯನ್ನೂ ಕೇಳಿದ್ದರು ಬಿಡಿ.

ತಮನ್ನಾ ಕನ್ನಡಕ್ಕೂ ಬರುತ್ತಾರೆ ಎಂಬ ಸುದ್ದಿ

ಈ ರೀತಿಯ ಸುದ್ದಿ 'ಜೋಗಯ್ಯ' ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೇ ಹಬ್ಬಿತ್ತು. ಆದರೆ ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜೋಗಯ್ಯ ಚಿತ್ರ ಬಿಡುಗಡೆವರೆಗೂ ಈ ಸುದ್ದಿ ಜೀವಂತವಾಗಿಯೇ ಇತ್ತು.


ಇನ್ನು ಆಕೆಯ ಪರ್ಸನಲ್ ವಿಚಾರಕ್ಕೆ ಬರುವುದಾದರೆ, ಕ್ರಿಕೆಟಿಗ ವಿರಾಟ್ ಕೋಹ್ಲಿ ಜೊತೆ ಕಣ್ಣಾಮುಚ್ಚಾಲೆ ಹಾಡಿದ ಸುದ್ದಿ ಕೆಲದಿನಗಳ ಹಿಂದೆ ಬಯಲಾಗಿತ್ತು. ಸದ್ಯಕ್ಕೆ ನಂದಿನಿ ಹಾಲಿನಷ್ಟೆ ಬೆಳ್ಳಗಿರುವ ಈಕೆಯ 'ಮಿಲ್ಕಿ ಬ್ಯೂಟಿ' ಎಂಬ ಟೈಟಲನ್ನೂ ನೀಡಿದ್ದಾರೆ.

ಚಿತ್ರತಂಗಕ್ಕೆ ಅಡಿಯಿಟ್ಟಾಗ ದೂರಶಿಕ್ಷಣದಲ್ಲಿ ಬಿಎ ಪದವಿ ಓದುತ್ತಿದ್ದರು ತಮನ್ನಾ. ಕಡೆಗೆ ಅದನ್ನು ಮುಗಿಸಿದರೋ ಇಲ್ಲಾ ಇನ್ನೂ ದಂಡಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೋ ಗೊತ್ತಿಲ್ಲ. ತೆಲುಗಿನ 'ಶ್ರೀ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಈಕೆ ಬೆಳಕಿಗೆ ಬಂದಿದ್ದು ಹ್ಯಾಪಿ ಡೇಸ್ ಎಂಬ ಮತ್ತೊಂದು ಚಿತ್ರದ ಮೂಲಕ.

English summary
Actress Tamanna Bhatia is one heroine who has made up to the success ladder with her sheer dedication and hard work. I do not act for the sake of awards. I have been called a good actress. I am very happy says Tamanna.
Please Wait while comments are loading...