»   » ಶಿವಣ್ಣ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ಶಿವಣ್ಣ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

By: ಉದಯರವಿ
Subscribe to Filmibeat Kannada

ತೆಲುಗು, ತಮಿಳು ಚಿತ್ರಗಳ ಬಲು ಬೇಡಿಕೆಯ ತಾರೆ ತಮನ್ನಾ ಭಾಟಿಯಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಬಲಗಾಲಿಟ್ಟು ಕನ್ನಡಕ್ಕೆ ಬರುತ್ತಿರುವುದು ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರದ ಮೂಲಕ.

ಇನ್ನೂ ಹೆಸರಿಡದ ಶಿವರಾಜ್ ಕುಮಾರ್ ಅವರ ಚಿತ್ರದಲ್ಲಿ ಈ ಮಿಲ್ಕಿ ಬ್ಯೂಟಿ ಅಭಿನಯಿಸಲಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಕಥೆ ಎನ್ನುತ್ತವೆ ಮೂಲಗಳು. 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ಮೂಲಕ ಹಳಿತಪ್ಪಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಮತ್ತೆ ಟ್ರ್ಯಾಕ್ ಗೆ ತಂದ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. [ಹಾಟ್ ಬ್ಯೂಟಿ ತಮನ್ನಾ ಲಕ ಲಕ ಫೋಟೋಗಳು]

ಕೆಎ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಶಿವಣ್ಣ ಹಾಗೂ ಮಂಜು ಸ್ವರಾಜ್ ಕೈಜೋಡಿಸುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಸೆಟ್ಟೇರಲಿರುವ ಈ ಚಿತ್ರ ಹಾರರ್ ಅಂಶಗಳಿಂದ ಕೂಡಿರುತ್ತದಂತೆ. ಈ ಚಿತ್ರಕ್ಕೆ ನಾಯಕಿಯಾಗಿ ತಮನ್ನಾ ಭಾಟಿಯಾ ಎಂಟ್ರಿಕೊಡುತ್ತಿದ್ದಾರೆ.

ಕಥೆ ಕೇಳಿ ಥ್ರಿಲ್ ಆದ ತಮನ್ನಾ ಭಾಟಿಯಾ

ಮಂಜು ಸ್ವರಾಜ್ ಅವರು ಈಗಾಗಲೆ ತಮನ್ನಾ ಅವರನ್ನು ಸಂಪರ್ಕಿಸಿದ್ದು ಚಿತ್ರದ ಕಥೆ ಕೇಳಿ ಸಖತ್ ಥ್ರಿಲ್ ಆದರಂತೆ. ಯಾವಾಗ ಚಿತ್ರೀಕರಣ ಎಂದೂ ಕೇಳಿದರಂತೆ.

ಪವರ್ ಸ್ಟಾರ್ ಚಿತ್ರಕ್ಕೇ ಬರಬೇಕಾಗಿತ್ತು

ಬಹಳ ವರ್ಷಗಳಿಂದ ಸ್ಯಾಂಡಲ್ ವುಡ್ ಗೆ ಅಡಿಯಿಡಲು ತಮನ್ನಾ ಪ್ರಯತ್ನಿಸುತ್ತಿದ್ದರು. ಅದು ಈಗ ಶಿವಣ್ಣ ಚಿತ್ರದ ಮೂಲಕ ನೆರವೇರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು ತಮನ್ನಾ. ಆದರೆ ಡೇಟ್ಸ್ ಹೊಂದಾಣಿಕೆ ಆಗದೆ ಅದು ಸಾಧ್ಯವಾಗಿರಲಿಲ್ಲ.

ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ಅಭಿನಯ

ಸದ್ಯಕ್ಕೆ ತಮನ್ನಾ ಅವರು ತೆಲುಗಿನಲ್ಲಿ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯಲ್ಲಿ ಹಮ್ ಷಕಲ್ಸ್ ಎಂಬ ಚಿತ್ರದಲ್ಲಿ ಹಾಗೂ ತಮಿಳಿನಲ್ಲಿ ಬಾಸ್ ಎಂಗಿರಾ ಭಾಸ್ಕರನ್ 2 ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಕನ್ನಡದಲ್ಲಿ ಎಷ್ಟು ಸಂಭಾವನೆ ಪಡೆದಿದ್ದಾರೋ

ಕೇವಲ ಎರಡೇ ಎರಡು ಗಂಟೆಯ ಅತಿಥಿ ಪಾತ್ರಕ್ಕೆ ತಮನ್ನಾ ರು.20 ಲಕ್ಷ ಕೇಳಿದ್ದರಂತೆ. ಇದೀಗ ಪೂರ್ಣ ಪ್ರಮಾಣದ ನಾಯಕಿ ಪಾತ್ರಕ್ಕೆ ಇನ್ನೆಷ್ಟು ಕೇಳಿದ್ದಾರೋ ಏನೋ ಎಂಬ ಪ್ರಶ್ನೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಕಾಡುತ್ತಿದೆ.

ಕನ್ನಡದಲ್ಲೂ ಅದೇ ವರಸೆ ತೋರಿಸುತ್ತಾರೋ

ತೆಲುಗು ಚಿತ್ರರಂಗದಲ್ಲಿ ಪಕ್ಕದ ಮನೆ ಹುಡುಗಿ ಪಾತ್ರಗಳಿಗೆ ಹೇಳಿ ಮಾಡಿಸಿದ ತಾರೆ ತಮನ್ನಾ. ಇದೀಗ ಕನ್ನಡದಲ್ಲೂ ಅದೇ ವರಸೆ ತೋರಿಸುತ್ತಾರೋ ಏನೋ ಕಾದುನೋಡಬೇಕು.

English summary
South beauty Tamanna Bhatia, who is presently the busy bee of Telugu film industry is all set to make her Sandalwood debut. The actress will be paired opposite Hattrick Hero Shivaraj Kumar in Kannada's upcoming untitled movie, which is touted to be a horror thriller.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada