Just In
Don't Miss!
- News
20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ HCL
- Automobiles
ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ತರಲು ಪ್ರಧಾನಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಣಯ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಎಫ್ಸಿ vs ಕೇರಳ ಬ್ಲಾಸ್ಟರ್ಸ್, Live ಸ್ಕೋರ್
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Education
BECIL Recruitment 2021: 11 ರೇಡಿಯೋಗ್ರಾಫರ್ ಅಥವಾ ಎಕ್ಸ್-ರೇ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರರಂಗ ಒಳ್ಳೆಯದಾ-ಕೆಟ್ಟದ್ದಾ: ತಮನ್ನಾ ಕೊಟ್ಟರು ಉತ್ತರ
ಚಿತ್ರರಂಗದ ಪಾಲಿಗೆ ಅಷ್ಟೇನೂ ಒಳ್ಳೆಯ ವರ್ಷವಲ್ಲ 2020. ಡ್ರಗ್ಸ್ ಪ್ರಕರಣ, ಕೆಲವು ನಟ-ನಟಿಯರ ಆತ್ಮಹತ್ಯೆ, ಮುಂದುವರೆದ ಪುರುಷ ಪ್ರಾಬಲ್ಯ, ಲೈಂಗಿಕ ಸೋಷಣೆ ಪ್ರಕರಣಗಳು ಎಲ್ಲವೂ ಈ ವರ್ಷ ಭಾರತೀಯ ಚಿತ್ರರಂಗವನ್ನು ಕಾಡಿವೆ. ಹಾಗಾದರೆ ಚಿತ್ರರಂಗ ಎಂಬುದು ಒಳ್ಳೆಯಾ-ಕೆಟ್ಟದ್ದಾ?
ನಟಿ ತಮನ್ನಾ ಸಹ ಇಂಥಹುದೇ ಪ್ರಶ್ನೆಯನ್ನು ಇತ್ತೀಚಿನ ಸಂದರ್ಶನದಲ್ಲಿ ಎದುರಿಸಿದ್ದಾರೆ. ಕಾಸ್ಟಿಂಗ್ ಕೌಚ್, ಪುರುಷ ಕೇಂದ್ರಿತ ಉದ್ಯಮ, ಡ್ರಗ್ಸ್ ಪ್ರಕರಣ ಹಲವು ವಿಷಯಗಳ ಬಗ್ಗೆ ಮಿಲ್ಕಿ ಬ್ಯೂಟಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ
'ಎಲ್ಲಾ ಉದ್ಯಮಗಳಲ್ಲಿಯೂ ಸಮಸ್ಯೆಗಳಿವೆ. ವಿವಿಧ ಕ್ಷೇತ್ರದ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರು, ಸಿಬ್ಬಂದಿಗಳು ಸಹ ಸಮಸ್ಯೆಗಳನ್ನು ಹೊಂದಿರುತ್ತಾರೆ' ಎಂದು ಸಿನಿಮಾ ಉದ್ಯಮವನ್ನು ಮೆದುವಾಗಿ ಸಮರ್ಥಿಸಿಕೊಂಡಿದ್ದಾರೆ ತಮನ್ನಾ.

ನಟ-ನಟಿಯರು ಜವಾಬ್ದಾರಿಯಿಂದ ವರ್ತಿಸುತ್ತಾರೆ: ತಮನ್ನಾ
'ಚಿತ್ರರಂಗ ಎಲ್ಲರ ಕಣ್ಣಿಗೆ ಸುಲಭಕ್ಕೆ ಬೀಳುವ, ಸೆಳೆಯುವ ಉದ್ಯಮ ಹಾಗಾಗಿ ಎಲ್ಲರ ಕಣ್ಣು ಇದರ ಮೇಲೆ ಬೀಳುತ್ತದೆ, ಇಲ್ಲಿನ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ನಟ-ನಟಿಯರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆಯಾದ್ದರಿಂದ ಅವರು ಹೆಚ್ಚು ಜಾಗೃತರಾಗಿ, ಜವಾಬ್ದಾರಿಯುತ ವರ್ತಿಸುತ್ತಾರೆ' ಎಂದಿದ್ದಾರೆ ತಮನ್ನಾ.

ಸಾಮಾಜಿಕ ಜಾಲತಾಣಗಳ ಬಗ್ಗೆ ತಮನ್ನಾ ಮಾತು
ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿರುವ ತಮನ್ನಾ, 'ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಾಗೂ ಅದನ್ನು ಹಂಚಿಕೊಳ್ಳುವ ಸರ್ವ ಸ್ವಾತಂತ್ರ್ಯವಿದೆ. ಒಬ್ಬರು ಮತ್ತೊಬ್ಬರ ಅಭಿಪ್ರಾಯವನ್ನು ಒಪ್ಪಲೇ ಬೇಕು ಎಂದೇನಿಲ್ಲ, ಆದರೆ ಮತ್ತೊಬ್ಬರ ದೂಷಣೆ ಮಾಡುವುದು ಅಕ್ಷಮ್ಯ' ಎಂದಿದ್ದಾರೆ ತಮನ್ನಾ.
ತಮನ್ನಾ ಜೊತೆ 'ಲವ್ ಮಾಕ್ ಟೇಲ್' ಚಿತ್ರೀಕರಣ ಆರಂಭಿಸಿದ ನಿರ್ದೇಶಕ ನಾಗಶೇಖರ್

ಜನರ ಪ್ರೀತಿಗೆ ಸದಾ ಋಣಿ: ತಮನ್ನಾ
ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿರುವ ತಮನ್ನಾ, 'ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ಯಾವುದೇ ಗಾಡ್‌ಫಾದರ್ ಇಲ್ಲದೆ, ಮೆಂಟರ್‌ಗಳಿಲ್ಲದೆ ಇಲ್ಲಿದೆ ಬಂದಿದ್ದೇನೆ. ನನಗೆ ಯಾವುದೇ ಕೆಟ್ಟ್ ಅನುಭವಗಳಾಗಿಲ್ಲ. ಜನರು ಸಾಕಷ್ಟು ಪ್ರೀತಿ ತೋರಿಸಿದ್ದಾರೆ' ಎಂದಿದ್ದಾರೆ ತಮನ್ನಾ.

ಕವಿತೆ ಬರೆಯುವ ಹವ್ಯಾಸ ಇದೆಯಂತೆ ತಮನ್ನಾಗೆ
ನಟಿ ತಮನ್ನಾ ಕೆಲವು ದಿನಗಳ ಹಿಂದಷ್ಟೆ ಸಮಂತಾ ಜೊತೆ, ಸ್ಯಾಮ್-ಜ್ಯಾಮ್ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು, ತಮ್ಮ ಭಗ್ನ ಪ್ರೇಮ, ಕವಿತೆ ಬರೆಯುವ ಹವ್ಯಾಸ ಇನ್ನೂ ಹಲವು ವಿಷಯಗಳ ಬಗ್ಗೆ ತಮನ್ನಾ ಮಾತನಾಡಿದ್ದಾರೆ. ತಮನ್ನಾ-ಸಮಂತಾ ರ ಶೋ ಸಖತ್ ಹಿಟ್ ಆಗಿದೆ.