»   » ತಮನ್ನಾ ಮೊದಲ ಕನ್ನಡ ಸಿನಿಮಾಗೆ ಪುನೀತ್ ನಾಯಕ !

ತಮನ್ನಾ ಮೊದಲ ಕನ್ನಡ ಸಿನಿಮಾಗೆ ಪುನೀತ್ ನಾಯಕ !

Posted By:
Subscribe to Filmibeat Kannada
ಕನ್ನಡದ ಚಿತ್ರದಲ್ಲಿ ನಟಿಸಲು ತಮನ್ನಾ ಹಾಕಿದ ಷರತ್ತೇನು ಗೊತ್ತಾ...? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಿಲ್ಕಿ ಬ್ಯೂಟಿ ತಮನ್ನಾ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುವ ಸಮಯ ಹತ್ತಿರ ಬಂದಾಗಿದೆ. ಇತ್ತಿಚಿಗಷ್ಟೇ ಖಾಸಗಿ ಜಾಹೀರಾತಿಗಾಗಿ ಒಬ್ಬರು ಪೌರಾಣಿಕ ವೇಷದಲ್ಲಿ ಅಭಿನಯಿಸಿದ್ದರು.

ಬಟ್ಟೆ ಅಂಗಡಿಯ ಜಾಹೀರಾತಿನಲ್ಲಿ ಅಭಿನಯಿಸದ ನಂತರ ಇಂದು(ಫೆ 26) ಅದೇ ಬಟ್ಟೆ ಅಂಗಡಿಯ ಓಪನಿಂಗ್ ಗಾಗಿ ಮಿಲ್ಕಿ ಬ್ಯೂಟಿ ಸಿಲಿಕಾನ್ ಸಿಟಿಗೆ ಆಗಮಿಸಿದ್ದರು. ಇದೇ ವೇಳೆ ತಮನ್ನಾ ಕನ್ನಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರಗಳಲ್ಲಿ ತಮನ್ನಾ ಅವರನ್ನು ನೋಡಿದ ಕನ್ನಡಿಗರಿಗೆ ಸ್ಯಾಂಡಲ್ ವುಡ್ ಚಿತ್ರದಲ್ಲಿ ತಮನ್ನಾ ಅವರನ್ನ ನೋಡುವ ಅವಕಾಶ ಸಿಗುತ್ತಿದೆ.

ಅಂತೆ-ಕಂತೆಗೆಲ್ಲ ಬ್ರೇಕ್: ಸದ್ದಿಲ್ಲದೇ ಸೆಟ್ಟೇರಿತು ಪುನೀತ್ ಹೊಸ ಸಿನಿಮಾ

ತಮನ್ನಾ ಕನ್ನಡ ಸಿನಿಮಾದಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಆದರೆ ಆ ಚಿತ್ರದಲ್ಲಿ ಪವರ್ ಸ್ಟಾರ್ ನಾಯಕನಾಗಿ ಅಭಿನಯಿಸಬೇಕು. ಪುನೀತ್ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.

Tamannaah says she will act in Kannada cinema

ಪವರ್ ಸ್ಟಾರ್ ಕೂಡ ತಮನ್ನಾ ಕನ್ನಡ ಸಿನಿಮಾರಂಗಕ್ಕೆ ಬರುವುದಾದರೆ ತುಂಬು ಮನಸ್ಸಿನಿಂದ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ಈಗಾಗಲೇ ಪೌರಾಣಿಕ ವೇಷದಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ತಮನ್ನಾ ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಿದರೆ ಸಂತೋಷ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

English summary
Actress Tamanna says she will act in Kannada cinema.Tamannaah said that Puneet Rajkumar should be the hero of my first Kannada movie, Puneet and Tamannaah have recently acted in a private company advertisement

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada