»   » ವಿದೇಶದಿಂದ ಬಂದು 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದ ಅಜಿತ್

ವಿದೇಶದಿಂದ ಬಂದು 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದ ಅಜಿತ್

Posted By:
Subscribe to Filmibeat Kannada

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯ ಸಂಸ್ಕಾರ ನಿನ್ನೆ (ಡಿಸೆಂಬರ್ 6) ರಂದು ಚೆನ್ನೈನ ಮರೀನಾ ಬೀಚ್ ನಲ್ಲಿ ನೆರೆವೇರಿತು. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಶರತ್ ಕುಮಾರ್, ವಿಜಯ್, ಧನುಷ್, ನಯನತಾರ, ಸೇರಿದಂತೆ ಬಹುತೇಕ ತಮಿಳು ಚಿತ್ರರಂಗ 'ಪುರಚ್ಚಿ ತಲೈವಿ'ಯ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಆದ್ರೆ, ತಮಿಳು ನಟ ಅಜಿತ್ ಕುಮಾರ್ ಮಾತ್ರ ಜಯಲಲಿತಾ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಅಜಿತ್ ಎಲ್ಲಿದ್ದಾರೆ ? ಯಾಕೆ ಬರಲಿಲ್ಲ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡಿದವು. ಯಾಕಂದ್ರೆ, ಜಯಲಲಿತಾ ಅವರ ನಂತರ ತಲಾ ಅಜಿತ್ ಮುಂದಿನ ವಾರುಸ್ದಾರ ಎಂಬ ಸುದ್ದಿಗಳು ಈ ಹಿಂದಿನಿಂದ ತಮಿಳು ರಾಜಕೀಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಜಯಲಲಿತಾ ಅವರು ಕೂಡ ಇದರ ಬಗ್ಗೆ ವಿಲ್ ಬರೆದಿದ್ದಾರೆ ಎಂಬ ಸುದ್ದಿಗಳು ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗಾಗಿ, ಅಜಿತ್ ಆಗಮನದ ಮೇಲೆ ನಿರೀಕ್ಷೆಯಿತ್ತು.[ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ]

ಇಂದು 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದ ಅಜಿತ್

ನಿನ್ನೆ ಜಯಲಲಿತಾ ಅವರ ಅಂತಿಮ ಯಾತ್ರೆಯಲ್ಲಿ ಭಾಗಿಯಾಗದ ಅಜಿತ್, ಇಂದು ಬೆಳ್ಳಂಬೆಳಗ್ಗೆಯೇ ಪತ್ನಿ ಶಾಲಿನಿ ಜೊತೆ ಮರೀನಾ ಬೀಚ್ ಗೆ ಭೇಟಿ ನೀಡಿ 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದರು.['ಅಮ್ಮ'ನ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು]

ನಿನ್ನೆ ಅಜಿತ್ ಯಾಕೆ ಬರಲಿಲ್ಲ?

ತಮ್ಮ 57ನೇ ಚಿತ್ರದ ಶೂಟಿಂಗ್ ಗಾಗಿ ಅಜಿತ್ ಬಲ್ಗೇರಿಯಾಗೆ ತೆರಳಿದ್ದರು. ಜಯಲಲಿತಾ ಅವರ ನಿಧನದ ಸುದ್ದಿ ಕೇಳಿದ ತಕ್ಷಣ, ಶೂಟಿಂಗ್ ನ ಅರ್ಧಕ್ಕೆ ಬಿಟ್ಟು ಚೆನ್ನೈಗೆ ಪ್ರಯಾಣ ಬೆಳೆಸಿದರು. ಆದ್ರೆ, ಪ್ರಯಾಣ ತಡವಾದ ಕಾರಣ ನಿನ್ನೆ (ಮಂಗಳವಾರ) ಅಂತಿಮ ಸಂಸ್ಕಾರದಲ್ಲಿ ಅಜಿತ್ ಪಾಲ್ಗೊಳ್ಳು ಆಗಲಿಲ್ಲ.[ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ ]

ಚೆನ್ನೈಗೆ ಬಂದ ತಕ್ಷಣ ಮರೀನಾ ಬೀಚ್ ಕಡೆ ಪಯಣ

ಮುಂಜಾನೆ ಏರ್ ಪೋರ್ಟ್ ಗೆ ಬಂದಿಳಿದ ಅಜಿತ್ ಹಾಗೂ ಪತ್ನಿ, ನೇರವಾಗಿ ಜಯಲಲಿತಾ ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಭೇಟಿ ನೀಡಿ 'ಅಮ್ಮ'ನಿಗೆ ನಮನ ಸಲ್ಲಿಸಿದರು.

ಅಜಿತ್ ರಾಜಕೀಯ ಪ್ರವೇಶ?

ಸದ್ಯ, ಜಯಲಲಿತಾ ಅವರ ನಿಧನದಿಂದ ಅಜಿತ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಗಳು ಮತ್ತೆ ತಮಿಳುನಾಡಿನಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಸೂಪರ್‌ ಸ್ಟಾರ್ ರಜನಿಕಾಂತ್ ಅವರು ಕೂಡ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ. ಅಮ್ಮನಿಲ್ಲದ ತಮಿಳುನಾಡು ರಾಜಕಾರಣ ಮುಂದೇನಾಗುತ್ತೆ ಎಂಬುದನ್ನ ಕಾದುನೋಡಬೇಕಿದೆ.

English summary
Tamil Actor Ajith Kumar who reached Chennai early morning today, 7th December directly went to Jayalalithaa's cemetery from the airport. Shalini Ajith joined him there. They paid their final respect to the departed soul.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada