For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ನಡುವೆ ಮದ್ಯ ಮಾರಿದ ನಟನ ಬಂಧನ: ಎಣ್ಣೆ ಸಿಕ್ಕಿದ್ದೆಲ್ಲಿಂದ?!

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳಾದ, ದಿನಸಿ, ತರಕಾರಿ, ಹಾಲು, ಔಷಧಗಳು ಹೊರತಾಗಿ ಇನ್ನೇನೂ ಲಭ್ಯವಿಲ್ಲ. ಕುಡುಕರಂತು ಮದ್ಯದ ರುಚಿ ನೋಡಿ ತಿಂಗಳಾಗುತ್ತಾ ಬಂತು.

  ಅಲ್ಲಲ್ಲಿ ಈಗಲೂ ಮದ್ಯ ದೊರೆಯುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಒಂದಕ್ಕೆ ಹತ್ತರಷ್ಟು ಪಟ್ಟು ಹಣಕ್ಕೆ ಮದ್ಯ ಅಲ್ಲಲ್ಲಿ ಮಾರಾಟವಾಗುತ್ತಿದೆ, ಆದರೆ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಈ ಕಾಳವ್ಯಾಪಾರ ಸಾಗಿದೆ.

  ಇಂದು ಸಿನಿಮಾ ನಟನೊಬ್ಬ ಅಧಿಕ ಹಣ ಮಾಡುವ ಆಸೆಯಿಂದಾಗಿ ತನ್ನಲ್ಲಿದ್ದ ಮದ್ಯವನ್ನು ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಕೊಂಡು ಜೈಲು ಪಾಲಾಗಿದ್ದಾನೆ.

  ತಮಿಳಿನ ವಿವಾದಾತ್ಮಕ ಸಿನಿಮಾ 'ದ್ರೌಪದಿ' ಸಿನಿಮಾದಲ್ಲಿ ನಟಿಸಿದ್ದ ರಿಜ್ವಾನ್ ಎಂಬಾತ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವಾದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನೊಂದಿಗೆ ಆತನ ಇಬ್ಬರು ಗೆಳೆಯರನ್ನೂ ಪೊಲೀಸರು ಬಂಧಿಸಿದ್ದಾರೆ.

  ಸಿನಿಮಾ ಮಂದಿಗೆ ದುಬಾರಿ ಮೊತ್ತಕ್ಕೆ ಮದ್ಯ ಮಾರಾಟ

  ಸಿನಿಮಾ ಮಂದಿಗೆ ದುಬಾರಿ ಮೊತ್ತಕ್ಕೆ ಮದ್ಯ ಮಾರಾಟ

  ರಿಜ್ವಾನ್ ಬಳಿ 180 ಎಂಎಲ್‌ನ 60 ಬಾಟಲಿ ಮದ್ಯ ದೊರೆತಿದೆ. ಇದಕ್ಕೆ ಹೊರತಾಗಿ 12 ಬಾಟಲಿ ಬಿಯರ್ ಸಹ ದೊರೆತಿದೆ. ಇದೆಲ್ಲವನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತಾನು ಮದ್ಯವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದುದಾಗಿ ರಿಜ್ವಾನ್ ಒಪ್ಪಿಕೊಂಡಿದ್ದಾನೆ ಸಹ.

  ಬೇರೊಬ್ಬನಿಂದ ಕೊಂಡು ಭಾರಿ ಮೊತ್ತಕ್ಕೆ ಮಾರಾಟ

  ಬೇರೊಬ್ಬನಿಂದ ಕೊಂಡು ಭಾರಿ ಮೊತ್ತಕ್ಕೆ ಮಾರಾಟ

  ನಾನು ಸಿನಿಮಾ ಪ್ರೊಡಕ್ಷನ್ ತಂಡಕ್ಕೆ ಸಂಬಂಧಿಸಿದ ಪ್ರದೀಪ್ ಎಂಬಾತನಿಂದ ಇವೆಲ್ಲಾ ಮದ್ಯವನ್ನು ಖರೀದಿಸಿ ದುಬಾರಿ ಮೊತ್ತಕ್ಕೆ ಸಿನಿಮಾ ಗೆಳೆಯರಿಗೆ ಮಾರಾಟ ಮಾಡುತ್ತಿದ್ದುದಾಗಿ ರಿಜ್ವಾನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ.

  ದ್ರೌಪದಿ ನಿರ್ದೇಶಕ ಮೋಹನ್ ಟ್ವೀಟ್ಸ

  ದ್ರೌಪದಿ ನಿರ್ದೇಶಕ ಮೋಹನ್ ಟ್ವೀಟ್ಸ

  ಪ್ರಕರಣದ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಸಿನಿಮಾ ನಿರ್ದೇಶಕ ಮೋಹನ್, ನನ್ನ ಗೆಳೆಯ ಇಂಥಹಾ ಕೆಲಸದಲ್ಲಿ ತೊಡಗಿಕೊಂಡಿದ್ದಾನೆಂದರೆ ನಂಬಲಸಾಧ್ಯ. ತಪ್ಪು ಯಾರೇ ಮಾಡಿರಲಿ ಶಿಕ್ಷೆ ಆಗಲೇಬೇಕು ಎಂದು ಟ್ವೀಟ್ ಮಾಡಿದ್ದಾರೆ.

  English summary
  Tamil actor Rizwan arrested for selling liquor in this corona crisis. He selling liquor to his movie friends for very high rate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X