»   » ಕನ್ನಡಕ್ಕೆ ಬಲಗಾಲಿಟ್ಟು ಒಳಬಂದ ತಮಿಳಿನ ಮುದ್ದಾದ ಹೀರೋ

ಕನ್ನಡಕ್ಕೆ ಬಲಗಾಲಿಟ್ಟು ಒಳಬಂದ ತಮಿಳಿನ ಮುದ್ದಾದ ಹೀರೋ

Posted By:
Subscribe to Filmibeat Kannada

ಅತ್ಯಂತ ಸುಂದರ ಮೊಗದ ನಟಿ ಸ್ನೇಹಾ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇದೆ. ಇವರು ತಮಿಳು-ತೆಲುಗು ಸೇರಿದಂತೆ ಕನ್ನಡದಲ್ಲೂ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ 2006ರಲ್ಲಿ, 'ರವಿ ಶಾಸ್ತ್ರಿ' ಎಂಬ ಚಿತ್ರದಲ್ಲಿ ಮಿಂಚುವ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ತದನಂತರ ಪ್ರಕಾಶ್ ರಾಜ್ ಅವರ ಜೊತೆ 'ಒಗ್ಗರಣೆ' ಚಿತ್ರದಲ್ಲಿ ಮಿಂಚಿ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದರು. ಆದ್ರೆ ವಿಷ್ಯಾ ಇದಲ್ಲ, ನಟಿ ಸ್ನೇಹಾ ಅವರೇನು ಎರಡು ಬಾರಿ ಗಾಂಧಿನಗರಕ್ಕೆ ಬಂದು ಹೋಗಿದ್ದಾರೆ. ಅವರ ಪತಿದೇವ ಪ್ರಸನ್ನ ಅವರು ಹೆಚ್ಚಾಗಿ ತಮಿಳು-ತೆಲುಗಿನಲ್ಲೇ ಮಿಂಚಿದವರು.

ಇದೀಗ ವಿಶೇಷವಾಗಿ ನಟಿ ಸ್ನೇಹಾ ಅವರ ಪತಿ, ಖ್ಯಾತ ನಟ ಪ್ರಸನ್ನ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಪ್ರಸನ್ನ ಅವರು ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವುದರಿಂದ ಕೊಂಚ ಎಕ್ಸೈಟ್ ಆಗಿದ್ದಾರಂತೆ.['ವಿಸ್ಮಯ': ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ 'ಹೆಬ್ಬುಲಿ' ಸುದೀಪ್]

ಅಷ್ಟಕ್ಕೂ ಪ್ರಸನ್ನ ಅವರು ಯಾವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ, ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ಅರ್ಜುನ್ ಸರ್ಜಾ ಜೊತೆ

ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ಆಕ್ಷನ್-ಕಿಂಗ್ ಅರ್ಜುನ್ ಸರ್ಜಾ ಅವರ ಜೊತೆ ತಮಿಳು ನಟ ಪ್ರಸನ್ನ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

ವಿಸ್ಮಯದಲ್ಲಿ ಪ್ರಸನ್ನ

ನಿರ್ದೇಶಕ ಅರುಣ್ ವೈದ್ಯನಾಥನ್ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ 'ವಿಸ್ಮಯ' ಚಿತ್ರದಲ್ಲಿ ನಟ ಪ್ರಸನ್ನ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಮತ್ತು ಕನ್ನಡ ನಟಿ ಶ್ರುತಿ ಹರಿಹರನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ-ತಮಿಳಿನಲ್ಲಿ ಏಕಕಾಲಕ್ಕೆ

ಆಕ್ಷನ್-ಥ್ರಿಲ್ಲರ್ 'ವಿಸ್ಮಯ' ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿದೆ. ತಮಿಳಿನಲ್ಲಿ ಈ ಸಿನಿಮಾ 'ನಿಬುಣನ್' ಎಂಬ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಆದ್ದರಿಂದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೂ ನಟ ಪ್ರಸನ್ನ ಅವರು ಇದೇ ಮೊದಲ ಬಾರಿಗೆ ಗುರುತಿಸಿಕೊಳ್ಳುತ್ತಿದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್

ಖ್ಯಾತ ನಟ ಶರತ್ ಕುಮಾರ್ ಅವರ ಮಗಳು ನಟಿ ವರಲಕ್ಷ್ಮಿ ಅವರು ಕೂಡ 'ವಿಸ್ಮಯ' ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ಈ ಮೊದಲು ವರಲಕ್ಷ್ಮಿ ಅವರು ಸುದೀಪ್ ಅವರ 'ಮಾಣಿಕ್ಯ' ಚಿತ್ರದಲ್ಲಿ ಮಿಂಚಿದ್ದರು. ಇದೀಗ 'ವಿಸ್ಮಯ' ಚಿತ್ರದ ಮೂಲಕ ಎರಡನೇ ಬಾರಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಪೊಲೀಸ್ ಆದ ಅರ್ಜುನ್ ಸರ್ಜಾ

ಖಡಕ್ ಪೊಲೀಸ್ ಆಫೀಸರ್ ಪಾತ್ರಗಳಿಗೆ ಸರಿಯಾದ ಸೂಟ್ ಆಗುವ ಆಕ್ಷನ್-ಕಿಂಗ್ ಅರ್ಜುನ್ ಸರ್ಜಾ ಅವರು ಮತ್ತೆ ಈ ಚಿತ್ರದಲ್ಲಿ ಪೊಲೀಸ್ ಪಾತ್ರ ವಹಿಸಿದ್ದಾರೆ. ಆದರೆ ಈ ಬಾರಿ ಕೊಂಚ ವಿಶೇಷವಾಗಿ 'ಮಫ್ತಿ'ಯಲ್ಲಿರುವ ಪೊಲೀಸ್ ಅಧಿಕಾರಿ 'ರಂಜಿತ್ ಕಾಳಿದಾಸ್ ಆಗಿ ಮಿಂಚಿದ್ದಾರೆ. ಇವರ ಪತ್ನಿಯ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್ ಅವರು ನಟಿಸಿದ್ದಾರೆ.

English summary
Two years ago, Sneha made her debut with Prakash Rajs multi-lingual project Oggarane. Now, her husband Prasanna is all set to enter Sandalwood with Arun Vaidyanathan's Kannada-Tamil bilingual Vismaya. Kannada Actress Sruthi Hariharan, Actor Arjun Sarja in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada