For Quick Alerts
  ALLOW NOTIFICATIONS  
  For Daily Alerts

  ಕನ್ನಡಿಗರ ಮುಂದೆ ಮಂಡಿಯೂರಿದ ಕಟ್ಟಪ್ಪ: ಸಾ.ರಾ.ಗೋವಿಂದು ಪ್ರತಿಕ್ರಿಯೆ ಏನು.?

  By Harshitha
  |

  ಕಡೆಗೂ ಕನ್ನಡಿಗರ ಆಕ್ರೋಶ ತಮಿಳು ನಟ ಸತ್ಯರಾಜ್ ರವರಿಗೆ ಕೇಳಿಸಿದೆ. ಕನ್ನಡಗರ ಹೃದಯದಲ್ಲಿ ಹೊತ್ತಿ ಉರಿಯುತ್ತಿದ್ದ ರೋಷಾಗ್ನಿ ಕಟ್ಟಪ್ಪನಿಗೆ ತಾಗಿದೆ. ಹೀಗಾಗಿ ಇಂದು ಕನ್ನಡಿಗರಿಗೆ ಸತ್ಯರಾಜ್ ಒಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ.

  ''ಒಂಬತ್ತು ವರ್ಷಗಳ ಹಿಂದೆ ಆವೇಶದಲ್ಲಿ ನಾನು ಕನ್ನಡಿಗರ ವಿರುದ್ಧ ಮಾತನಾಡಿದ್ದೇನೆ. ಆದ್ರೆ, ನಾನು ಕನ್ನಡ ಮತ್ತು ಕರ್ನಾಟಕದ ವಿರೋಧಿ ಅಲ್ಲ. ಅಂದಿನ ಹೇಳಿಕೆಯನ್ನ ಇಟ್ಟುಕೊಂಡು ಇಂದು 'ಬಾಹುಬಲಿ-2' ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಬೇಡಿ'' ಎಂದು ಸತ್ಯರಾಜ್ ತಮಿಳಿನಲ್ಲಿ ಕನ್ನಡಿಗರನ್ನ ಕೇಳಿಕೊಂಡಿದ್ದಾರೆ.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

  ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಆಡಿರುವ ಮಾತುಗಳನ್ನ ಕನ್ನಡ ಪರ ಹೋರಾಟಗಾರ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಇನ್ನೂ ಕೇಳಿಲ್ಲ. ಆದ್ರೆ, ''ಸತ್ಯರಾಜ್ ಕ್ಷಮೆ ಕೇಳಿದ್ದಾರೆ'' ಎಂದು ಮಾಧ್ಯಮಗಳಲ್ಲಿ ಬಿತ್ತರವಾದ ಬ್ರೇಕಿಂಗ್ ನ್ಯೂಸ್ ನೋಡಿ ಸಾ.ರಾ.ಗೋವಿಂದು ನೀಡಿರುವ ಪ್ರತಿಕ್ರಿಯೆ ಇದು... ಓದಿರಿ....

  ಮಾಧ್ಯಮಗಳ ಮೂಲಕ ಗೊತ್ತಾಗಿದೆ.!

  ಮಾಧ್ಯಮಗಳ ಮೂಲಕ ಗೊತ್ತಾಗಿದೆ.!

  ''ಕನ್ನಡಿಗರನ್ನ ನಿಂದಿಸಿರುವ ಸತ್ಯರಾಜ್ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ವಿ. ಇವತ್ತು ಸತ್ಯರಾಜ್ ಕ್ಷಮೆ ಕೇಳಿದ್ದಾರೆ ಎಂದು ಮಾಧ್ಯಮಗಳ ಮೂಲಕ ನನಗೆ ತಿಳಿದು ಬಂತು. ಕನ್ನಡಿಗರ ವಿರುದ್ಧ ಆವೇಶದಲ್ಲಿ ಮಾತನಾಡಿರುವುದನ್ನ ಅವರು ಒಪ್ಪಿಕೊಂಡಿದ್ದಾರೆ ಎಂದು ಗೊತ್ತಾಯ್ತು'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

  ಊರಲ್ಲಿ ಇಲ್ಲ. ಬೆಂಗಳೂರಿಗೆ ಬಂದ್ಮೇಲೆ ಬಾಕಿ ಮಾತು

  ಊರಲ್ಲಿ ಇಲ್ಲ. ಬೆಂಗಳೂರಿಗೆ ಬಂದ್ಮೇಲೆ ಬಾಕಿ ಮಾತು

  ''ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಬೀದರ್ ನಲ್ಲಿ ಇದ್ದೇನೆ. ನಾನು ಬೆಂಗಳೂರಿಗೆ ವಾಪಸ್ ಬಂದ್ಮೇಲೆ ಎಲ್ಲರ ಜೊತೆ ಕೂತು ಚರ್ಚೆ ಮಾಡುತ್ತೇನೆ. ನಮಗೆ ಸಮಾಧಾನ ಆದ್ರೆ, ಖಂಡಿತ 'ಬಾಹುಬಲಿ-2' ಬಿಡುಗಡೆಗೆ ಅನುವು ಮಾಡಿಕೊಡುತ್ತೇವೆ. ನಾವು ಏನು ಹೇಳಿದ್ದೇವೋ, ಆ ರೀತಿ ಅವರು ಕ್ಷಮೆ ಕೇಳಿದ್ರೆ ನಮಗೆ ಯಾವುದೇ ಅಭ್ಯಂತರ ಇಲ್ಲ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

  ಈ ರೀತಿ ಮುಂದೆ ಆಗಬಾರದು

  ಈ ರೀತಿ ಮುಂದೆ ಆಗಬಾರದು

  ''ಮುಂದೆ ಯಾರೂ ಕೂಡ ಇಂತಹ ಪದಗಳನ್ನ ಬಳಸಬಾರದು. ಒಂದು ರಾಜ್ಯದ ಬಗ್ಗೆ ಮಾತನಾಡುವಾಗ ಯಾರೇ ಆಗಲಿ, ನಿಗಾ ಇಟ್ಟುಕೊಂಡು ಮಾತನಾಡಬೇಕು'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [ಡಾ.ರಾಜ್ ಕುಮಾರ್ ಪುತ್ರ ಪುನೀತ್ ಗೆ ತಮಿಳರಿಂದ ಅಪಮಾನ.. ಅಗೌರವ.!]

  ಚಪ್ಪಾಳೆಗಾಗಿ ಹೀಗೆಲ್ಲ ಮಾಡಬಾರದು

  ಚಪ್ಪಾಳೆಗಾಗಿ ಹೀಗೆಲ್ಲ ಮಾಡಬಾರದು

  ''ಸತ್ಯರಾಜ್ ಅವರು ತಮಿಳುನಾಡಿನಲ್ಲಿ ತಮಿಳರ ಪರ ಇರಲಿ. ನಾವು ಕರ್ನಾಟಕದಲ್ಲಿ ಕನ್ನಡಿಗರ ಪರ ಹೋರಾಟ ಮಾಡುತ್ತೇವೆ. ಆದ್ರೆ, ಮಾತನಾಡುವಾಗ ಚಪ್ಪಾಳೆ ತಟ್ಟಿಸಿಕೊಳ್ಳಲು, ಪಕ್ಕದ ರಾಜ್ಯವನ್ನ ನಿಂದನೆ ಮಾಡುವುದು ಶೋಭೆ ತರುವುದಿಲ್ಲ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  'ಕ್ಷಮಿಸುವುದು' ನಾಳಿನ ಸಭೆ ನಂತರ

  'ಕ್ಷಮಿಸುವುದು' ನಾಳಿನ ಸಭೆ ನಂತರ

  ''ಕನ್ನಡಿಗರಿಗೆ ಒಪ್ಪಿಗೆ ಆಗುವ ಹಾಗೆ ಕ್ಷಮೆ ಕೇಳಿದ್ದರೆ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಅವರನ್ನ ಕ್ಷಮಿಸುವುದು ನಾಳಿನ ಸಭೆ ಆದ್ಮೇಲೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  English summary
  Tamil Actor Satyaraj requests Kannadigas to allow 'Baahubali-2' release in Karnataka. KFFC President Sa.Ra.Govindu reacts over Satyaraj's video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X