»   » ಏಪ್ರಿಲ್ 11 ರಂದು ಸಿಂಬು ಹೇಳಿದಂತೆ ನೀವು ಮಾಡ್ತೀರಾ? ತಮಿಳರಿಗೆ ನೀರು ಕೊಡ್ತೀರಾ?

ಏಪ್ರಿಲ್ 11 ರಂದು ಸಿಂಬು ಹೇಳಿದಂತೆ ನೀವು ಮಾಡ್ತೀರಾ? ತಮಿಳರಿಗೆ ನೀರು ಕೊಡ್ತೀರಾ?

Posted By:
Subscribe to Filmibeat Kannada
ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

ಸೋಷಿಯಲ್ ಮೀಡಿಯಾದಲ್ಲಂತೂ ಈಗ ಎಲ್ಲೆಲ್ಲೂ ಸಿಂಬು ವಿಡಿಯೋದ್ದೇ ಸದ್ದು. ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ತಮಿಳು ನಟ ಸಿಂಬು ಪತ್ರಿಕಾಗೋಷ್ಟಿಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ.

ತಮಿಳರ ಪರ ವಹಿಸಲು ಹೋಗಿ ಕನ್ನಡಿಗರ ವಿರುದ್ಧ ಮಾತನಾಡದೆ, ಪರಿಸ್ಥಿತಿಯನ್ನ ಅರಿತು ಸಿಂಬು ಅಡಿರುವ ಮಾತುಗಳನ್ನು ಕೇಳಿ ಕನ್ನಡಿಗರು ಶಿಳ್ಳೆ ಹೊಡೆದಿದ್ದಾರೆ. ''ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ'' ಎಂದಿರುವ ಸಿಂಬು ಕನ್ನಡಿಗರ ಮನ ಮುಟ್ಟಿದ್ದಾರೆ.

''ನಾವೆಲ್ಲರೂ ಮನುಷ್ಯರು... ನಮಗೆ ಮನುಷ್ಯತ್ವ ಮುಖ್ಯ'' ಅಂತ ಹೇಳಿರುವ ಸಿಂಬು, ಎಲ್ಲ ಕನ್ನಡಿಗರಿಗೂ ಏಪ್ರಿಲ್ 11 ರಂದು ಒಂದು ಕೆಲಸ ಮಾಡಲು ಹೇಳಿದ್ದಾರೆ. ಏನು ಆ ಕೆಲಸ ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಕನ್ನಡಿಗರಿಗೆ ಸಿಂಬು ಕೊಟ್ಟ ಕೆಲಸ...

''ಹನ್ನೊಂದನೇ ತಾರೀಖು, ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ಒಳಗೆ ಕರ್ನಾಟಕದಲ್ಲಿರೋಂಥ ನಮ್ಮ ತಾಯಿ, ತಂದೆ, ನಾನು ತಮ್ಮ ಅಂತ ಭಾವಿಸೋ, ನಾನು ಅಣ್ಣ ಅಂತ ಭಾವಿಸೋ, ನಾನು ಸ್ನೇಹಿತ ಅಂತ ಭಾವಿಸೋ...ಕರ್ನಾಟಕದ ಅಷ್ಟೂ ಜನ... "ನೀವು...ಒಂದು ಲೋಟದಲ್ಲಿ ನೀರು ತುಂಬಿ ಹಿಡಿದು...ನಾವು ತಮಿಳರಿಗೆ ನೀರು ಕೊಡ್ತೀವಿ ಅಂತ ವಿಡಿಯೋ ಮಾಡಿ #UniteForHumanity ಹಾಕಿ ತೋರಿಸಿ" ಎಂದು ನಟ ಸಿಂಬು ಹೇಳಿದ್ದಾರೆ.

ಕಾವೇರಿ ಬಗ್ಗೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣದಲ್ಲೇನಿದೆ? ಇಲ್ಲಿದೆ ಅನುವಾದ

ಸಿಂಬು ಹೇಳಿದಂತೆ ನೀವು ಮಾಡ್ತೀರಾ.?

ಸಿಂಬು ಹೇಳಿದಂತೆ ನಾಳಿದ್ದು (ಬುಧವಾರ) ತಮಿಳುನಾಡಿಗೆ ನೀರು ಕೊಡಲು ಸಮ್ಮತಿ ಸೂಚಿಸುವಂತೆ ನೀವೆಲ್ಲ ಕೈಯಲ್ಲಿ ನೀರು ತುಂಬಿದ ಒಂದು ಲೋಟ ಹಿಡಿದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀರಾ.?

''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

ಒಂದ್ವೇಳೆ ಮಾಡ್ಲಿಲ್ಲ ಅಂದ್ರೆ.?

''ನೀವು ಹಾಗೆ ಮಾಡಿ ತೋರಿಸ್ಲಿಲ್ಲವಾ...ಆಗ ನೀವು ನೀರು ಕೊಡೋದಿಲ್ಲ ಅಂತ ನಾವೇ ತಿಳ್ಕೊಳ್ತೀವಿ... ಆದರೆ ಜಗಳ ಮಾಡೋದಿಲ್ಲ. ಯಾಕೆ ಗೊತ್ತಾ? ಮನುಷ್ಯತ್ವ ಇರೋ ಮನುಷ್ಯ...ಮನುಷ್ಯನ್ನ ಮನುಷ್ಯನ ಥರಾನೇ ನಡೆಸ್ಕೊಳ್ತಾನೆ'' ಎಂದು ಸಿಂಬು ಹೇಳಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?

ಪತ್ರಿಕಾಗೋಷ್ಟಿಯಲ್ಲಿ ಸಿಂಬು ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ಸಿಂಬು ಹೇಳಿದಂತೆ ನೀವು ವಿಡಿಯೋ ಮಾಡ್ತೀರಾ.? ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Tamil Actor Simbu has asked Kannadigas to do a video on April 11th by holding a glass full of Water and posting it on Social Media under #UniteForHumanity.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X