twitter
    For Quick Alerts
    ALLOW NOTIFICATIONS  
    For Daily Alerts

    ''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

    By Naveen
    |

    Recommended Video

    ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

    ಕಾವೇರಿ ಗಲಾಟೆಗೆ ದೊಡ್ಡ ಇತಿಹಾಸ ಇದೆ. ಪ್ರತಿ ವರ್ಷ ಕೂಡ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಹೋರಾಟ ನಡೆಸುತ್ತಿದೆ. ನೀರಿನ ವಿಷಯ ಬಂದರೆ ಒಂದೇ ದೇಶದ ಅಕ್ಕ ಪಕ್ಕದ ರಾಜ್ಯದವರು ಎಂಬುದನ್ನೂ ಮರೆತು ಎರಡು ರಾಜ್ಯಗಳ ಜನರು ಹೊಡೆದಾಡುತ್ತಾರೆ.

    ಕಾವೇರಿ ಹೋರಾಟಗಳಲ್ಲಿ ಕನ್ನಡ ಮತ್ತು ತಮಿಳು ಚಿತ್ರರಂಗಗಳು ಅವರವರ ರಾಜ್ಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಾ ಬಂದಿವೆ. ಎರಡು ಚಿತ್ರರಂಗದ ಅನೇಕ ದೊಡ್ಡ ದೊಡ್ಡ ಕಲಾವಿದರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಅದರೊಂದಿಗೆ ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಅನೇಕರು ತಾವೇ ಹೊಸ ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದೂ ಇದೆ. ಕೆಲವು ನಟರಂತೂ ಕರ್ನಾಟಕದಿಂದ ಹೆಸರು ಮಾಡಿ ತಮಿಳುನಾಡಿಗೆ ಹೋದರೂ, ಕಾವೇರಿ ವಿಷಯ ಬಂದಾಗ ಏನೂ ಮಾತನಾಡುವುದಿಲ್ಲ. ಆದರೆ, ಇದೀಗ ತಮಿಳಿನ ಖ್ಯಾತ ನಟ ಸಿಂಬು ಕಾವೇರಿ ಹೋರಾಟದ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.

    ಕಮಲ್ ನಂತರ ಕಾವೇರಿ ಬಗ್ಗೆ ರಜನಿಕಾಂತ್ ಟ್ವೀಟ್!

    ಸಿಂಬು ಕರ್ನಾಟಕಕ್ಕೆ ಅಷ್ಟೊಂದು ಆಪ್ತರೇನೂ ಅಲ್ಲ. ಆದರೆ ಈ ನಟ ಕಾವೇರಿ ಬಗ್ಗೆ, ಕರ್ನಾಟಕದ ಬಗ್ಗೆ ಹೇಳಿರುವ ಮಾತು ಕನ್ನಡಿಗರ ಮನಸ್ಸು ಮುಟ್ಟಿದೆ. ಮುಂದಿದೆ ಓದಿ...

    ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ

    ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ

    ''ಕಾವೇರಿ ಹೋರಾಟ ನಡೆಯುತ್ತಲೇ ಇದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ. ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದವರೇನಾದರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ದಾರಾ?'' ಎಂದು ಸಿಂಬು ಮಾತನಾಡಿದ್ದಾರೆ.

    ಕರ್ನಾಟಕದಲ್ಲಿರುವಂತಹ ತಾಯಿಗೆ ಕೇಳ್ತಾ ಇದ್ದೀನಿ

    ಕರ್ನಾಟಕದಲ್ಲಿರುವಂತಹ ತಾಯಿಗೆ ಕೇಳ್ತಾ ಇದ್ದೀನಿ

    ''ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುತ್ತಿಲ್ಲ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯ ಮಾಡೋದಿಕ್ಕೋಸ್ಕರ ನಾನಿಲ್ಲಿಗೆ ಬಂದಿಲ್ಲ. ಆ ಕೆಲಸ ಮಾಡೋದಕ್ಕೆ ಬಹಳಷ್ಟು ಜನ ಇದ್ದಾರೆ. ನಾನು ಹೆತ್ತ ಮಗ ಅಲ್ಲದೇ ಇದ್ರೂ, ಕರ್ನಾಟಕದಲ್ಲಿರುವಂತ ತಾಯಿಗೆ ಕೇಳ್ತಾ ಇದ್ದೀನಿ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮಗೆ ಕೊಡ್ತೀರಾ ಅಮ್ಮ'' - ಸಿಂಬು

    ಯಾರೋ ಅಧಿಕಾರಕ್ಕೆ ಬರುವುದಕೋಸ್ಕರ

    ಯಾರೋ ಅಧಿಕಾರಕ್ಕೆ ಬರುವುದಕೋಸ್ಕರ

    ''ಈ ಭೂಮಿ ಅಂತ ಅಂದರೆ ಅದು ಭಾರತ ಆಗಿರಬಹುದು, ಕರ್ನಾಟಕ ಆಗಿರಬಹುದು, ತಮಿಳುನಾಡು ಆಗಿರಬಹುದು ಮೊದಲಿಗೆ ನಾವು ಈ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿದ್ದೀವಿ. ಈಗ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕು. ಇನ್ನೂ ಎಷ್ಟು ದಿನ ಈ ಜಾತಿ, ಧರ್ಮ, ಪಂಗಡ ಅನ್ನೋ ಹೆಸರಿನಲ್ಲಿ ಬೇರೆ ಮಾಡ್ತಾ ಇರ್ತೀರಿ? ಯಾರೋ ಅಧಿಕಾರಕ್ಕೆ ಬರುವುದಕ್ಕೋಸ್ಕರ ನಮ್ಮನ್ನು ನಾನಾ ಕಾರಣಕ್ಕೆ ಹೀಗೆ ಒಡೆದು ಬೇರೇ ಬೇರೆ ಮಾಡಿ ಆಳುತ್ತಿದ್ದಾರೆ'' - ಸಿಂಬು

    ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ನೀಡಿ

    ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ನೀಡಿ

    ''ನಾವು ಹೋಗಿ ಈ ಹೋರಾಟ, ರಾಡಿ ರಂಪಾಟ ಇದೆಲ್ಲ ಮಾಡಲು ಸಾಧ್ಯ ಆಗ್ತಿಲ್ಲ. ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ಕೊಡಿ. ನೀವು ಅಣೆಕಟ್ಟು ಕಟ್ಟಿ ನೀರನ್ನು ತಡೀಬಹುದು, ಆದರೆ ಅಣೆಕಟ್ಟು ಅಳತೆ ಮೀರಿ ನೀರು ಬಂತು ಅಂದರೆ ಅದನ್ನ ನೀವು ಹೇಗೆ ತಡೆಯಲು ಸಾದ್ಯ. ಆ ನೀರನ್ನು ಬಿಡಲೇ ಬೇಕಾಗುತ್ತದೆ ಅಲ್ವಾ. ಅಲ್ಲಿರುವ ಎಲ್ಲ ತಾಯಂದಿರೂ 'ಅಯ್ಯೋ, ನೀರು ಕೊಡೋದಿಕ್ಕಾಗ್ತಿಲ್ಲವಲ್ಲ ಅಂತ ನೊಂದು ಕಣ್ಣೀರು ಹಾಕಿದರು ಅಂದರೆ, ಆ ತಾಯಂದಿರ ಪ್ರೀತಿಯ ಅಣೆಕಟ್ಟು ಒಡೀತು ಅಂತ. ತಮಿಳು ನಾಡಿನ ಜನರಿಗೆ ಆ ದೇವರು ನೀರು ಕೊಡ್ತಾನೋ ಇಲ್ವೋ ಅಂತ ನೀವೇ ನೋಡಿ ಬೇಕಾದರೆ'' - ಸಿಂಬು

    ಕರ್ನಾಟಕದ ಅಷ್ಟೂ ಜನ ಒಂದು ಲೋಟ ನೀರು ಕೋಡಿ

    ಕರ್ನಾಟಕದ ಅಷ್ಟೂ ಜನ ಒಂದು ಲೋಟ ನೀರು ಕೋಡಿ

    ಕರ್ನಾಟಕದಲ್ಲಿರುವ ನಮ್ಮ ತಾಯಿ, ತಂದೆ, ತಮ್ಮ ಅಣ್ಣ ಸ್ನೇಹಿತರೆಂದು ಭಾವಿಸುವ ಕರ್ನಾಟಕದ ಅಷ್ಟೂ ಜನರಿಗೆ ಹೇಳುತ್ತಿದ್ದೇನೆ ಬರುವ ಹನ್ನೊಂದನೇ ತಾರೀಖು ಬುಧವಾರ, ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆ ಒಳಗೆ 'ನೀವು...ಒಂದು ಲೋಟದಲ್ಲಿ ನೀರು ತುಂಬಿ ಹಿಡಿದು, ನಾವು ತಮಿಳರಿಗೆ ನೀರು ಕೊಡ್ತೀವಿ ಅಂತ ಅದನ್ನ ವಿಡಿಯೋ ಮಾಡಿ ತೋರಿಸಿ' ನೀವು ಹಾಗೆ ಮಾಡಿ ತೋರಿಸಿಲ್ಲ ಅಂದರೆ ಆಗ ನೀವು ನೀರು ಕೊಡೋದಿಲ್ಲ ಅಂತ ನಾವೇ ತಿಳ್ಕೊಳ್ತೀವಿ ಅಮ್ಮ. ಕರ್ನಾಟಕದಲ್ಲಿ ಇರುವವರು ಯಾರು? ಯಾಕೆ ನಾವು ಈ ಹೋರಾಟ ಮಾಡಬೇಕು? ಯಾಕೆ ನಾವು ನಾವೇ ಜಗಳ ಮಾಡಬೇಕು? ನಮ್ಮ ತಮ್ಮನ ಹತ್ತಿರ, ನಮ್ಮ ತಂಗಿ ಹತ್ತಿರ ಕೇಳುವುದಕ್ಕೆ ನಾವು ಜಗಳ ಮಾಡಬೇಕಾ'' - ಸಿಂಬು

    #UniteForHumanity

    #UniteForHumanity

    ''#UniteForHumanity ಅಂತ ಒಂದು ಹ್ಯಾಶ್ ಟ್ಯಾಗ್ ಹಾಕಿ ದಯವಿಟ್ಟು ನಾನು ಹೇಳಿದ ವಿಷಯವನ್ನು ಕರ್ನಾಟಕದಲ್ಲಿರುವ ತಮಿಳು ಜನ, ಕನ್ನಡ ಗೊತ್ತಿರುವ ತಮಿಳು ಜನ, ಅಲ್ಲಿರುವ ಕನ್ನಡಿಗರಿಗೆ ಅರ್ಥ ಮಾಡಿಸಿ. ನಾನು ಈ ಮಾತನ್ನ ಕರ್ನಾಟಕದಲ್ಲಿರುವ ಎಲ್ಲ ಜನರಿಗೆ ಮಾತ್ರ ಹೇಳ್ತಾ ಇಲ್ಲ. ನಮ್ಮ ಜನರಿಗೆ ಮಾತ್ರ ಹೇಳ್ತಾ ಇಲ್ಲ. ಈ ಹ್ಯಾಶ್ ಟ್ಯಾಗ್ ಅನ್ನು ಭಾರತದಾದ್ಯಂತ ಇರುವ ಜನ, ವಿಶ್ವದಾದ್ಯಂತ ಇರುವವರಿಗೆ ತಲುಪಿಸಿ'' - ಸಿಂಬು

    ರಾಜ್ಯ ಬಂದ್: ವಾಟಾಳ್ ನಾಗರಾಜರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ

    English summary
    During a recent press meet, Tamil actor Simbu spoke about Cauvery water dispute.
    Thursday, April 12, 2018, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X