For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥದ ಸಂಭ್ರಮದಲ್ಲಿ ತಮಿಳು ನಟ ವಿಶಾಲ್ ಮತ್ತು ಅನಿಶಾ

  |

  ತಮಿಳು ನಟ ವಿಶಾಲ್ ತಮ್ಮ ಲವ್ ರಿಲೇಶನ್ ಶಿಪ್ ಬಗ್ಗೆ ಇತ್ತೀಚಿಗಷ್ಟೆ ಬಹಿರಂಗ ಪಡಿಸಿದ್ದರು. ಅಲ್ಲದೆ ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಸದ್ಯದಲ್ಲೇ ಹಸೆಮಣೆ ಏರುವುದಾಗಿ ಹೇಳಿದ್ದ ವಿಶಾಲ್ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಇಂದು ನಡೆದ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್ ಪ್ರೇಯಸಿ ಅನಿಶಾ ಅಲ್ಲಾ ರೆಡ್ಡಿ ಜೊತೆ ಎಂಗೇಜ್ ಆಗಿದ್ದಾರೆ. ನಿಶ್ಚಿತಾರ್ಥ ಸಂಭ್ರಮಕ್ಕೆ ಸ್ನೇಹಿತರು, ಕುಟುಂಬದವರು ಮತ್ತು ಚಿತ್ರರಂಗದ ತೀರಾ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

  ಗುರು ಹಿರಿಯರ ಸಮ್ಮುಖದಲ್ಲಿ ವಿಶಾಲ್, ಅನಿಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶಾಲ್ ಮತ್ತು ಅನಿಶಾಗೆ ಶುಭ ಹಾರೈಸಲು ಸಾಕಷ್ಟು ಜನ ಗಣ್ಯರು ಸಂಭ್ರಮದಲ್ಲಿ ಭಾಗಿಯಾಗಿದ್ದರು. ತಮಿಳು ಮತ್ತು ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ಸಾಕಷ್ಟು ಮಂದಿ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಾಜರಾಗಿ ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇಬ್ಬರ ನಿಶ್ಚಿತಾರ್ಥದ ಸಂಭ್ರಮ ಹೇಗಿತ್ತು? ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ವಿವರ ಮುಂದೆ ಓದಿ..

  ''ದೇವರು ನನಗಾಗಿಯೇ ಕಳುಹಿಸಿದ ಹುಡುಗಿ ಅನೀಶಾ'' ಎಂದ ತಮಿಳು ನಟ ವಿಶಾಲ್.!

  ಹೈದರಾಬಾದ್ ನಲ್ಲಿ ಅನಿಶಾ ಜೊತೆ ವಿಶಾಲ್ ಎಂಗೇಜ್ ಮೆಂಟ್

  ಹೈದರಾಬಾದ್ ನಲ್ಲಿ ಅನಿಶಾ ಜೊತೆ ವಿಶಾಲ್ ಎಂಗೇಜ್ ಮೆಂಟ್

  ಇಂದು ಹೈದರಾಬಾದ್ ನ ಖಾಸಗಿ ಹೋಟೆಲ್ ಒಂದರಲ್ಲಿ ತಮಿಳು ನಟ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ವಿಶಾಲ್ ಬಹುದಿನಗಳ ಗೆಳತಿ ಅನಿಶಾ ಇಬ್ಬರು ರಿಂಗ್ ಬದಲಾಯಿಸಿ ಕೊಳ್ಳುವ ಮೂಲಕ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ಈ ಸಮಾರಂಭಕ್ಕೆ ಟಾಲಿವುಡ್ ಮತ್ತು ಕಾಲಿವುಡ್ ಗಣ್ಯರು ಸಹ ಭಾಗಿಯಾಗಿದ್ದರು. ನಟಿ ಖುಷ್ಬು ದಂಪತಿ, ನಟ ಪಶುಪತಿ, ಶ್ರೀಮನ್, ನಂದ ಹೀಗೆ ಸಾಕಷ್ಟು ಮಂದಿ ಸಮಾರಂಭಕ್ಕೆ ಹಾಜರಾಗಿ ಶುಭ ಹಾರೈಸಿದರು.

  ಅನಿಶಾ ಮತ್ತು ವಿಶಾಲ್ ಲವ್ ಸ್ಟೋರಿ

  ಅನಿಶಾ ಮತ್ತು ವಿಶಾಲ್ ಲವ್ ಸ್ಟೋರಿ

  ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟ ವಿಶಾಲ್ ತಮ್ಮ ಲವ್ ಸ್ಟೋರಿಯನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ವಿಶಾಲ್ ಮೊದಲು ಅನಿಶಾ ಅವರನ್ನು ಭೇಟಿಯಾಗಿದ್ದು, ಸಿನಿಮಾ ಸೆಟ್ ನಲ್ಲಿ ಅಂತೆ. ವಿಶಾಲ್ ಅಭಿನಯದ 'ಅಯೋಗ್ಯ' ಸಿನಿಮಾ ಚಿತ್ರೀಕರಣ ವೇಳೆ ಅನಿಶಾ ತಮ್ಮ ಮುಂದಿನ ಸಿನಿಮಾ ಲಾಂಚ್ ಮಾಡಿಕೊಡುವಂತೆ ಕೇಳಿಕೊಂಡಿದ್ದಂತೆ. ಹೀಗೆ ಪರಿಚಯವಾದ ಅನಿಶಾ, ವಿಶಾಲ್ ಹೃದಯ ಕದ್ದಿದ್ದಾರೆ. ಲವ್ ಅಟ್ ಫಸ್ಟ್ ಸೈಟ್ ಅನ್ನುವ ಹಾಗೆ ಅನಿಶಾ ನೋಡಿ ಲವಲ್ಲಿ ಬಿದ್ದ ವಿಶಾಲ್ ತಾವೇ ಮೊದಲು ಪ್ರಪೋಸ್ ಮಾಡಿದ್ದಾರೆ. ವಿಶಾಲ್ ಪ್ರೀತಿ ನಿವೇದನೆಯನ್ನು ಒಪ್ಪಿಕೊಂಡ ಅನಿಶಾ ನಂತರ ಮದುವೆಗೂ ಸೈ ಅಂದಿದ್ದಾರೆ.

  ಇಬ್ಬರ ಮದುವೆ ಯಾವಾಗ ಗೊತ್ತಾ?

  ಇಬ್ಬರ ಮದುವೆ ಯಾವಾಗ ಗೊತ್ತಾ?

  ಸದ್ಯ, ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಆಗಸ್ಟ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ. ಯಾಕೆಂದರೆ ವಿಶಾಲ್ ಬಳಿ ಸಾಕಷ್ಟು ಸಿನಿಮಾ ಪ್ರಾಜೆಕ್ಟ್ ಗಳಿವೆ. ಇವೆಲ್ಲ ಮುಗಿದ ಬಳಿಕ ವಿಶಾಲ್ ಹಾಗೂ ಅನಿಶಾ ಹಸೆಮಣೆ ಏರಲಿದ್ದಾರೆ.

  'ಅರ್ಜುನ್ ರೆಡ್ಡಿ' ನಟಿ ಜೊತೆ ತಮಿಳು ನಟ ವಿಶಾಲ್ ಮದುವೆ

  ಅನಿಶಾ ಯಾರು ಗೊತ್ತಾ?

  ಅನಿಶಾ ಯಾರು ಗೊತ್ತಾ?

  ಅನಿಶಾ ಮೂಲತಃ ತೆಲುಗಿನವರು. ಉದ್ಯಮಿ ವಿಜಯ್ ರೆಡ್ಡಿ ಮತ್ತು ಪದ್ಮಜಾ ದಂಪತಿಯ ಪುತ್ರಿ. ಅನಿಶಾ ನಟಿ ಕೂಡ ಹೌದು. ತೆಲುಗಿನ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ 'ಪೆಳ್ಳಿ ಚೂಪುಲು' ಮತ್ತು 'ಅರ್ಜುನ್ ರೆಡ್ಡಿ' ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತೆರೆಮೇಲೆ ಮಿಂಚಿದ್ದಾರೆ. ಅಭಿನಯದಲ್ಲೂ ಹೆಚ್ಚು ಆಸಕ್ತಿ ಹೊಂದಿರುವ ಅನಿಶಾಗೆ ಇನ್ನು ಮುಂದೆಯೂ ಬಣ್ಣ ಹಚ್ಚಲು ವಿಶಾಲ್ ಸಮ್ಮತಿ ಕೂಡ ಸಿಕ್ಕಿದೆ.

  ವಿಶಾಲ್- ಅನೀಶ್ ಅವರ ಕರ್ನಾಟಕದ ನಂಟು

  ವಿಶಾಲ್- ಅನೀಶ್ ಅವರ ಕರ್ನಾಟಕದ ನಂಟು

  ವಿಶಾಲ್- ಅನೀಶ್ ಇಬ್ಬರಿಗೂ ಕರ್ನಾಟಕದ ನಂಟು ಇದೆ. ವಿಶಾಲ್ ತಂದೆ ಜಿಕೆ ರೆಡ್ಡಿ ಕರ್ನಾಟಕ ಮೂಲದವರು. ಜೊತೆಗೆ ವಿಶಾಲ್ ಕೂಡ ಇತ್ತೀಚಿಗೆ ರಿಲೀಸ್ ಆದ ಕೆಜಿಎಫ್ ಚಿತ್ರದ ತಮಿಳು ವಿತರಣೆ ಹಕ್ಕನ್ನು ಖರೀದಿಸುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇನ್ನು ವಿಶೇಷ ಅಂದರೆ ಅನಿಶಾ ಹುಟ್ಟಿದ್ದು ಮತ್ತು ಬೆಳೆದ್ದಿದ್ದು ಬೆಂಗಳೂರಿನಲ್ಲಿ. ಓದಿದ್ದು ಮಾತ್ರ ಹೈದರಾಬಾದ್ ನಲ್ಲಿ.

  English summary
  Tamil actor Vishal got engaged with his girlfriend Anisha Alla Reddy. Vishal and Anisha Alla Reddy engagement held in a private ceremony at Hyderabad Today (March 16th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X