For Quick Alerts
  ALLOW NOTIFICATIONS  
  For Daily Alerts

  ರಾಜ್‌ ಕುಟುಂಬದ ಬಳಿ ಶಕ್ತಿಧಾಮದ ಜವಾಬ್ದಾರಿ ಕೇಳಿದ ನಟ ವಿಶಾಲ್!

  |

  ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ನಿಧನದ ನಂತರ ಅವರು ಮಾಡುತ್ತಿದ್ದ ಹತ್ತು ಹಲವು ಸಮಾಜಮುಖಿ ಕಾರ್ಯಗಳು ಬೆಳಕಿಗೆ ಬಂದಿವೆ. ಅವರ ಕೈಗೊಂಡ ಒಳ್ಳೆಯ ಕಾರ್ಯಗಳ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಸರಳ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಪ್ರತಿಯೊಬ್ಬರೂ ಪ್ರಶಂಸೆ ವ್ಯಕ್ತ ಪಡಿಸುತ್ತಾ ಇದ್ದಾರೆ.

  ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳಲ್ಲಿ ಶಕ್ತಿಧಾಮದ ಜವಾಬ್ದಾರಿ ಕೂಡ ಒಂದು. ಶಕ್ತಿ ಧಾಮವನ್ನು ಅಪ್ಪು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಎಲ್ಲೂ ಪ್ರಚಾರ ಮಾಡದೇ ಅಲ್ಲಿನ ಮಕ್ಕಳಿಗೆ ಅಪ್ಪು ದಾರಿ ದೀಪ ಆಗಿದ್ದಾರೆ.

  ಈಗ ಅಪ್ಪು ಅಗಲಿಕೆಯ ಬಳಿಕ ಪುನೀತ್‌ ರಾಜ್‌ಕುಮಾರ್‌ ಸ್ನೇಹಿತ ತಮಿಳು ನಟ ವಿಶಾಲ್ ಈ ಜವಾಬ್ದಾರಿಯನ್ನು ಹೊತ್ತು ಕೊಳ್ಳಲು ಮುಂದೆ ಬಂದಿದ್ದಾರೆ. ಆದರೆ ಅವರ ಈ ಯೋಚನೆಗೆ ರಾಜ್‌ ಕುಟುಂಬ ಅಸ್ತು ಎನ್ನ ಬೇಕು ಅಷ್ಟೇ.

  ಅಶ್ವಿನಿ ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡಿದ ವಿಶಾಲ್

  ಅಶ್ವಿನಿ ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡಿದ ವಿಶಾಲ್

  ಈ ಹಿಂದೆ ಕಾರ್ಯಕ್ರಮ ಒಂದರಲ್ಲಿ ನಟ ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ವಿಶಾಲ್‌ ಹೇಳಿ ಕೊಂಡಿದ್ದರು. ಆದರೆ ಅವರ ಈ ಕಾರ್ಯಕ್ಕೆ ಪುನೀತ್ ರಾಜಕುಮಾರ್ ಅವರ ಕುಟುಂಬದ ಒಪ್ಪಿಗೆ ಬೇಕಾಗಿದೆ. ಇದೇ ವಿಚಾರವಾಗಿ ಇಂದು(ನವೆಂಬರ್ 17) ನಟ ವಿಶಾಲ್ ಪುನೀತ್‌ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

  ನಿರ್ಧಾರ ತೆಗೆದು ಕೊಳ್ಳಲು 3 ತಿಂಗಳು ಸಮಯ ಕೇಳಿದ ಅಶ್ವಿನಿ ಪುನೀತ್‌!

  ನಿರ್ಧಾರ ತೆಗೆದು ಕೊಳ್ಳಲು 3 ತಿಂಗಳು ಸಮಯ ಕೇಳಿದ ಅಶ್ವಿನಿ ಪುನೀತ್‌!

  ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರುವ ಕುರಿತು ನಟ ವಿಶಾಲ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಎರಡರಿಂದ ಮೂರು ತಿಂಗಳು ಸಮಯ ಕೇಳಿದ್ದಾರಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್. ಆ ಬಳಿಕ ಅಪ್ಪು ಅವರ ಈ ಯೋಜನೆಯನ್ನು ಹೇಗೆ ಮುಂದುವರೆಸಿ ಕೊಂಡು ಹೋಗ ಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರಂತೆ.

  ಅಪ್ಪು ಇಲ್ಲ ಎಂದು ಕೊಳ್ಳಲು ಸಾಧ್ಯವಾಗುತ್ತಿಲ್ಲ: ವಿಶಾಲ್!

  ಅಪ್ಪು ಇಲ್ಲ ಎಂದು ಕೊಳ್ಳಲು ಸಾಧ್ಯವಾಗುತ್ತಿಲ್ಲ: ವಿಶಾಲ್!

  ಇನ್ನು ಮಾಧ್ಯಮಗಳ ಜೊತೆಗೆ ಮಾತನಾಡಿದ ನಟ ವಿಶಾಲ್ "ಪುನೀತ್ ರಾಜಕುಮಾರ್ ಇಲ್ಲ ಎಂದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಮುಖ ನನಗೆ ಇನ್ನೂ ಕಾಣಿಸುತ್ತಿದೆ. ಅವರ ನಿಧನ ಇಡೀ ಸಮಾಜಕ್ಕೆ ಮತ್ತು ಚಿತ್ರ ರಂಗಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಸಮಾಜಕ್ಕಾಗಿ ಅವರು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳು ಮುಂದುವರೆಯ ಬೇಕು. ಅಶ್ವಿನಿ ಮೇಡಂ ಮತ್ತು ಅವರ ಮಕ್ಕಳಿಗೆ ದೇವರು ಶಕ್ತಿ ನೀಡಲಿ ಅಂತ ಬೇಡಿ ಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

  ಅಪ್ಪು ಬಣ್ಣ ಹಚ್ಚಿದಾಗ ಮಾತ್ರ ಸೂಪರ್‌ ಸ್ಟಾರ್‌ ಎಂದ ವಿಶಾಲ್!

  ಅಪ್ಪು ಬಣ್ಣ ಹಚ್ಚಿದಾಗ ಮಾತ್ರ ಸೂಪರ್‌ ಸ್ಟಾರ್‌ ಎಂದ ವಿಶಾಲ್!

  ಪುನೀತ್‌ ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರು ಎಂದಿದ್ದಾರೆ ವಿಶಾಲ್. "ಪುನೀತ್ ಅವರು ಒಳ್ಳೆಯ ನಟ ಮಾತ್ರ ಅಲ್ಲ ಒಳ್ಳೆಯ ಮನುಷ್ಯ. ಅವರಂತ ವಿನಯವಂತ ವ್ಯಕ್ತಿಯನ್ನು ನಾನು ನೋಡಿಲ್ಲ. ತಾನೊಬ್ಬ ಸೂಪರ್ ಸ್ಟಾರ್ ಎಂಬ ಭಾವನೆ ಅವರಿಗೆ ಇರಲಿಲ್ಲ. ಮೇಕಪ್ ಹಚ್ಚಿದಾಗ ಮಾತ್ರ ಅವರು ಸೂಪರ್ ಸ್ಟಾರ್. ಮಿಕ್ಕಿದ ಸಮಯದಲ್ಲಿ ಜನ ಸಾಮಾನ್ಯರಂತೆ ಅವರು ಇರುತ್ತಿದ್ದರು. ಎಲ್ಲರನ್ನು ಸಮನಾಗಿ ನೋಡುತ್ತಿದ್ದರು. 15 ವರ್ಷಗಳಿಗೂ ಹೆಚ್ಚು ಸಮಯ ನಾವು ಅವರನ್ನು ನೋಡುತ್ತಿದ್ದೇವೆ. ಆಗಿನಿಂದಲೂ ಒಂದೇ ರೀತಿ ಇದ್ದಾರೆ. ಇಂಥ ಒಳ್ಳೆಯ ಜನರನ್ನು ದೇವರು ಯಾಕೆ ಕರೆದು ಕೊಳ್ಳುತ್ತಾನೆ ಎಂಬುವುದು ನನಗೆ ಅರ್ಥವಾಗುವುದಿಲ್ಲ". ಎಂದು ವಿಶಾಲ್ ಹೇಳಿದ್ದಾರೆ.ಅಪ್ಪು ಸಮಾಧಿಗೆ ವಿಶಾಲ್ ಭೇಟಿ
  ಡಾ. ರಾಜಕುಮಾರ್‌ಗೆ ಸಮಾಧಿ ನಮನ

  ಇನ್ನೂ ಇಂದು (ನವೆಂಬರ್ 17) ಕೂಡ ಅಪ್ಪು ಸಮಾಧಿಗೆ ವಿಶಾಲ್ ಭೇಟಿ ನೀಡಿದ್ದಾರೆ. ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಡಾ.ರಾಜಕುಮಾರ್, ಪಾರ್ವತಮ್ಮ ಮತ್ತು ಪುನೀತ್ ರಾಜಕುಮಾರ್ ಸಮಾಧಿ ನಮನ ಸಲ್ಲಿಸಿದ್ದಾರೆ.

  ಇನ್ನೂ ಪುನೀತ ನಮನ ಕಾರ್ಯಕ್ರಮದಲ್ಲು ವಿಶಾಲ್ ಭಾಗಿ ಆಗಿದ್ದರು. ಅಲ್ಲಿ ಕೂಡ ಅಪ್ಪು ಮಾತನಾಡಿದ್ದರು. ಶಕ್ತಿಧಾಮದ ಜವಾಬ್ದಾರಿ ಹೊರುವ ಬಗ್ಗೆಯೂ ಹೇಳಿಕೊಂಡಿದ್ದರು ನಟ ವಿಶಾಲ್.

  English summary
  Tamil Actor Vishal Meets Shivarajkumar And Ashwini Puneeth Rajkumar To Talk About Shakthi Dhaama.
  Wednesday, November 17, 2021, 16:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X