For Quick Alerts
  ALLOW NOTIFICATIONS  
  For Daily Alerts

  ಕನ್ನಡನಾಡಿನ ಬಗ್ಗೆ ಮನಬಿಚ್ಚಿ ಮಾತನಾಡಿದ ತಮಿಳು ನಟ ವಿಶಾಲ್

  By Bharath Kumar
  |

  ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಒಂದಲ್ಲ ಒಂದು ವಿಷ್ಯದಲ್ಲಿ ಸಮಸ್ಯೆಗಳು ಉದ್ಭವವಾಗುತ್ತಲೇ ಇರುತ್ತೆ. ಕಾವೇರಿ ನೀರಿನ ವಿಚಾರ, ಹೊಗೆನಕಲ್ ಯೋಜನೆ, ಅಥವಾ ಬೇರೆ ಏನಾದರೂ ವಿವಾದಗಳು ಸುದ್ದಿ ಮಾಡುತ್ತಲೇ ಇರುತ್ತೆ.

  ಹೀಗಿರುವಾಗ, ತಮಿಳು ನಟ ವಿಶಾಲ್ ಕನ್ನಡ ಚಿತ್ರರಂಗದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ರಾಜಾಹುಲಿ ಖ್ಯಾತಿಯ ಹರ್ಷ ಅಭಿನಯದ 'ರಘುವೀರ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ವಿಶಾಲ್, ಕನಾರ್ಟಕ ಮತ್ತು ಕನ್ನಡ ಸಿನಿಮಾಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ತಮಿಳು ನಟ ವಿಶಾಲ್

  ಅಷ್ಟೆ ಅಲ್ಲದೇ, ಕನ್ನಡ ಇಂಡಸ್ಟ್ರಿ ಮತ್ತು ತಮಿಳು ಇಂಡಸ್ಟ್ರಿ ಬಾಂಧವ್ಯ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ......

  ರಾಜಕೀಯ ಬೇರೆ, ಸಿನಿಮಾನೇ ಬೇರೆ

  ರಾಜಕೀಯ ಬೇರೆ, ಸಿನಿಮಾನೇ ಬೇರೆ

  ''ಸಮಸ್ಯೆಗಳು ಎನ್ನುವುದು ಇದ್ದೇ ಇರುತ್ತೆ. ನಾವು ಮೊದಲ ಭಾರತೀಯರು. ಹೌದು, ಅಭಿಮಾನ ಇರುತ್ತೆ. ಒಬ್ಬ ತಮಿಳಿಗನಾಗಿ ಕಾವೇರಿ ನೀರು ಬೇಕು ಎಂದು ಕೇಳುವುದು ನಮ್ಮ ಹಕ್ಕು. ರಾಜಕೀಯ ಬೇರೆ, ಸಿನಿಮಾನೇ ಬೇರೆ. ಸಿನಿಮಾದಲ್ಲಿ ಎಲ್ಲರೂ ಒಂದೇ ಕುಟುಂಬ ಕಲಾಕುಟುಂಬ''- ವಿಶಾಲ್, ತಮಿಳು ನಟ

  ತಮಿಳಿನಾಡಿನಲ್ಲಿ ಕನ್ನಡ ಚಿತ್ರಗಳಿಗೆ ನಮ್ಮ ಸಹಕಾರವಿದೆ

  ತಮಿಳಿನಾಡಿನಲ್ಲಿ ಕನ್ನಡ ಚಿತ್ರಗಳಿಗೆ ನಮ್ಮ ಸಹಕಾರವಿದೆ

  ''ತಮಿಳು ಚಿತ್ರಗಳನ್ನ ಕರ್ನಾಟಕದಲ್ಲಿ ಹೇಗೆ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೋ, ಅದೇ ರೀತಿ ತಮಿಳುನಾಡಿನಲ್ಲೂ ಕನ್ನಡ ಚಿತ್ರಗಳನ್ನ ಪ್ರದರ್ಶನ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಅದನ್ನ ನಾವು ಮಾಡುತ್ತೇವೆ. ಒಬ್ಬ ನಿರ್ಮಾಪಕ ಸಂಘದ ಅಧ್ಯಕ್ಷನಾಗಿ ಈ ಮಾತು ಹೇಳುತ್ತಿಲ್ಲ. ಒಬ್ಬ ಕನ್ನಡ ಚಿತ್ರಗಳ ಅಭಿಮಾನಿಯಾಗಿ ಹೇಳುತ್ತಿದ್ದೇನೆ'' - ವಿಶಾಲ್, ತಮಿಳು ನಟ

  ತಮಿಳು ಚಿತ್ರಗಳ ಕಾರ್ಯಕ್ರಮಕ್ಕೆ ಕನ್ನಡ ನಟರು ಬರಬೇಕು

  ತಮಿಳು ಚಿತ್ರಗಳ ಕಾರ್ಯಕ್ರಮಕ್ಕೆ ಕನ್ನಡ ನಟರು ಬರಬೇಕು

  ''ನಾನು ಹೇಗೆ ಕರ್ನಾಟಕಕ್ಕೆ ಬಂದು ಕನ್ನಡ ಸಿನಿಮಾಗಳ ಆಡಿಯೋ ಬಿಡುಗಡೆ ಮಾಡುತ್ತಿದ್ದೇನೋ ಅದೇ ರೀತಿ, ನನ್ನ ಕನ್ನಡ ಕಲಾವಿದ ಸ್ನೇಹಿತರು ಕೂಡ ತಮಿಳುನಾಡಿಗೆ ಬಂದ ತಮಿಳು ಚಿತ್ರಗಳ ಆಡಿಯೋ ರಿಲೀಸ್ ಮಾಡಿಕೊಡಬೇಕು. ಇದೊಂದು ಆರೋಗ್ಯಕರವಾದ ಬೆಳವಣಿಗೆ'' - ವಿಶಾಲ್, ತಮಿಳು ನಟ

  ಪೈರಸಿ ತಡೆಯಲು ಸಹಕರಿಸಿ

  ಪೈರಸಿ ತಡೆಯಲು ಸಹಕರಿಸಿ

  ''ಕನಾರ್ಟಕದಲ್ಲಿ ಕನ್ನಡ ಸಿನಿಮಾಗಳ ಪೈರಸಿ ಕಮ್ಮಿಯಿದೆ. ಇಲ್ಲಿ ಅಭಿಮಾನಿಗಳೇ ಪೈರಸಿಯನ್ನ ವಿರೋಧಿಸುತ್ತಾರೆ ಎಂದು ಕೇಳಿದ್ದೆ. ದಯವಿಟ್ಟು ತಮಿಳು ಸಿನಿಮಾಗಳಿಗೂ ಸಪೋರ್ಟ್ ಮಾಡಿ, ಪೈರಸಿ ಮಾಡಬೇಡಿ'' - ವಿಶಾಲ್, ತಮಿಳು ನಟ

  English summary
  Tamil Actor Vishal Speaks About Kannada Film Industry And Karnataka. Actor Vishal Came To Banglore For Audio Release of Kannada Movie Raghuveera on Yesterday (June 28th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X