Don't Miss!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Technology
ನಿಮ್ಮ ಸ್ಮಾರ್ಟ್ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವುದು ಹೇಗೆ?
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಾನ್ ಜಯರಾಜ್ ಬಯೋಪಿಕ್‌ಗೆ ಎಂಟ್ರಿಕೊಟ್ಟ ತಮಿಳು ಕಲಾವಿದ
ಬೆಂಗಳೂರಿನ ಡಾನ್ ಎನಿಸಿಕೊಂಡಿದ್ದ ದಿವಂಗತ ರಾಜಕಾರಣಿ ಜಯರಾಜ್ ಅವರ ಕುರಿತು ಬಯೋಪಿಕ್ ತಯಾರಾಗುತ್ತಿದೆ. ಡಾಲಿ ಧನಂಜಯ್ ಈ ಚಿತ್ರದಲ್ಲಿ ಡಾನ್ ಪಾತ್ರ ಮಾಡ್ತಿದ್ದಾರೆ. ಈ ಸಿನಿಮಾಗೆ ಹೆಡ್‌ಬುಷ್ ಎಂದು ಹೆಸರಿಡಲಾಗಿದೆ.
ಇದೀಗ, ಹೆಡ್‌ಬುಷ್ ಚಿತ್ರಕ್ಕೆ ತಮಿಳು ಕಲಾವಿದನೊಬ್ಬನ ಪ್ರವೇಶವಾಗಿದೆ. ಕಾಲಿವುಡ್ ಇಂಡಸ್ಟ್ರಿಯ ಖ್ಯಾತ ನೃತ್ಯ ಸಂಯೋಜಕ ಸ್ಯಾಂಡಿ ಡಾನ್ ಜಯರಾಜ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಆರು
ಭಾಷೆಯಲ್ಲಿ
ಬರಲಿದೆ
ಧನಂಜಯ್-ಅಗ್ನಿ
ಶ್ರೀಧರ್
'ಹೆಡ್
ಬುಷ್'
ವರದಿಯ ಪ್ರಕಾರ, ಡಾನ್ ಜಯರಾಜ್ ಅವರ ಬಲಗೈ ಬಂಟನಾಗಿ ಸ್ಯಾಂಡಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ನಟನನ್ನು ಹುಡುಕುವ ಸಂದರ್ಭದಲ್ಲಿ ಸ್ಯಾಂಡಿ ಚಿತ್ರತಂಡದ ಕಣ್ಣಿಗೆ ಬಿದ್ದಿದ್ದಾರೆ. ಈ ಪಾತ್ರಕ್ಕೆ ಇವರೇ ಸೂಕ್ತ ಎಂದು ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ.
ನವ ನಿರ್ದೇಶಕ ಶೂನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಆಶು ಬೇದ್ರೆ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಮಾಡ್ತಿದ್ದಾರೆ. ಸ್ಯಾಂಡಿ ನೋಡಲು ಡಾನ್ ಜಯರಾಜ್ ಜೊತೆಯಿದ್ದ ಸ್ಯಾಮ್‌ಸನ್ ಅವರಂತೆ ಕಾಣಿಸುತ್ತಾರೆ. ಹಾಗಾಗಿಯೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಸ್ಯಾಂಡಿ ಕುರಿತು ಹೇಳುವುದಾದರೇ, ರಜನಿಕಾಂತ್ ನಟನೆಯ ಕಾಲಾ, ಸಿಂಬು ನಟನೆಯ ವಾಲು, ಗೀತು, ಸಾಗಸಂ ಅಂತಹ ಸಿನಿಮಾಗಳಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಳೆದ ವರ್ಷ ತಮಿಳಿನ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು.
ಇನ್ನು ಹಡ್‌ಬುಷ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ಒದಗಿಸಲಿದ್ದಾರೆ.