ಕನ್ನಡದಲ್ಲೇ ಡಬ್ಬಿಂಗ್ ಹೇಳಿದ ತಮಿಳು ಹಾಸ್ಯ ನಟ ವಿವೇಕ್
ಸದ್ಯಕ್ಕೆ ಸಿಂಗಂ 2 ಚಿತ್ರೀಕರಣದಲ್ಲಿರುವ ವಿವೇಕ್ ಶೀಘ್ರದಲ್ಲೇ ಬೆಂಗಳೂರಿಗೆ ಬರಲ್ಲಿದ್ದಾರೆ. ಚಂದ್ರ ಚಿತ್ರದ ಡಬ್ಬಿಂಗ್ ಹೇಳುವ ಸಲುವಾಗಿ ಅವರು ನಗರಕ್ಕೆ ಆಗಮಿಸುತ್ತಿದ್ದಾರೆ. "ಜನ ನನ್ನ ಧ್ವನಿಯನ್ನು ಗುರಿತಿಸಿದ್ದಾರೆ. ಈಗ ನನ್ನ ಪಾತ್ರಕ್ಕೆ ಬೇರೆಯವರೆ ಧ್ವನಿ ಅಷ್ಟಾಗಿ ಸರಿಹೊಂದಲ್ಲ. ಹಾಗಾಗಿ ತಾನೇ ಡಬ್ಬಿಂಗ್ ಹೇಳಲು ನಿರ್ಧರಿಸಿರುವುದಾಗಿ" ವಿವೇಕ್ ಹೇಳಿದ್ದಾರೆ.
ಒಟ್ಟಿನಲ್ಲಿ ಇದೊಂಥರಾ ಚಾಲೆಂಜಿಂಗ್ ಕೆಲಸ. ಆದರೂ ತಮ್ಮ ತುಟಿ ಚಲನೆಗೆ ಅನುಗುಣವಾಗಿ ಕನ್ನಡದಲ್ಲಿ ಡಬ್ ಹೇಳುತ್ತೇನೆ ಎಂಬ ಆಶಾಭಾವವನ್ನು ವಿವೇಕ್ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವಿವೇಕ್ ಕನ್ನಡದಲ್ಲೂ ಕ್ಲಿಕ್ ಆದರೆ ಗಾಂಧಿನಗರಕ್ಕೆ ಮತ್ತೊಬ್ಬ ಕಾಮಿಡಿ ಸ್ಟಾರ್ ಸಿಕ್ಕಂತಾಗುತ್ತದೆ.
ರೂಪಾ ಅವರು ಈ ಬಾರಿ ವಿಭಿನ್ನ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಮೊದಲಿಂದಲೂ ವಿಶಿಷ್ಟತೆಗೆ ಹಾತೊರೆಯುವವರು. ಪ್ರೀತಿ ಪ್ರೇಮದ ಚೌಕಟ್ಟಿನಲ್ಲಿ ರಾಜಮನೆತನಗಳ ಪ್ರಸ್ತುತ ಸ್ಥಿತಿಯನ್ನು ತೋರಿಸುವುದೇ ಚಿತ್ರದ ಉದ್ದೇಶ. ಇದಕ್ಕಾಗಿ ಅವರು ರಾಜಸ್ತಾನ, ತಿರುವಾಂಕೂರು, ಕೊಡಗು, ಮೈಸೂರಿನ ರಾಜಮನೆತನಗಳ ಯುವತಿಯರನ್ನು ಕಂಡು ಮಾತನಾಡಿಸಿ ವಿವರಗಳನ್ನು ಕಲೆಹಾಕಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications












