»   » ಕನ್ನಡಕ್ಕೂ ಅಪ್ಪಳಿಸಿದ ತಮಿಳಿನ 'ಕಾಷ್ಮೋರ'

ಕನ್ನಡಕ್ಕೂ ಅಪ್ಪಳಿಸಿದ ತಮಿಳಿನ 'ಕಾಷ್ಮೋರ'

Posted By:
Subscribe to Filmibeat Kannada

ಇತ್ತೀಚೆಗೆ ಪರಭಾಷೆಯ ಸಿನಿಮಾಗಳ ಪೋಸ್ಟರ್ ಗಳು ಕನ್ನಡದಲ್ಲಿ ತಯಾರಾಗೋದು ಒಂಥರಾ ಟ್ರೆಂಡ್ ಆದಂತಿದೆ. ಮೊನ್ನೆ-ಮೊನ್ನೆ 'ಕಬಾಲಿ' ಚಿತ್ರದ ಪೋಸ್ಟರ್ ಕನ್ನಡದಲ್ಲಿ ರಿಲೀಸ್ ಆಗಿತ್ತು. ಕರ್ನಾಟಕದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ 'ಕಬಾಲಿ' ಕನ್ನಡ ಪೋಸ್ಟರ್ ರಾರಾಜಿಸುತ್ತಿತ್ತು.

ಇದೀಗ ಇನ್ನೊಂದು ತಮಿಳು-ತೆಲುಗು ಸಿನಿಮಾ ಪೋಸ್ಟರ್ ಒಂದನ್ನು ಕನ್ನಡದಲ್ಲಿ ಡಿಸೈನ್ ಮಾಡಲಾಗಿದೆ. ತಮಿಳು ನಟ ಕಾರ್ತಿ ಶಿವಕುಮಾರ್ ಬರೋಬ್ಬರಿ ನಾಲ್ಕು ಶೇಡ್ ನಲ್ಲಿ ಕಾಣಿಸಿಕೊಂಡಿರುವ, 'ಕಾಷ್ಮೋರ' ಎಂಬ ಸಿನಿಮಾದ ಪೋಸ್ಟರ್ ಇದೀಗ ಕನ್ನಡದಲ್ಲಿ ಕಲರ್ ಫುಲ್ ಆಗಿ ಮೂಡಿಬಂದಿದೆ.[ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

ಇನ್ನೊಂದು ಮಾಹಿತಿ ಪ್ರಕಾರ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಜೊತೆಗೆ ಕನ್ನಡ ಚಲನಚಿತ್ರ ಮಂಡಳಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ ಅಂತಲೂ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ ಏರ್ಪಟ್ಟಿದೆ. ಮುಂದೆ ಓದಿ....

ಕನ್ನಡ ಸಿನಿ ರಸಿಕರ ಒತ್ತಾಯ

ಅಂದಹಾಗೆ ಕಾರ್ತಿ ಅಭಿನಯದ 'ಕಾಷ್ಮೋರ' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ಕನ್ನಡ ಸಿನಿ ರಸಿಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಕನ್ನಡ ಪೋಸ್ಟರ್ ರನ್ನು, ಸ್ವತಃ ಕನ್ನಡಿಗರೇ ಮುಂದೆ ನಿಂತು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ.[ಹೈದರಾಬಾದ್ ಹೋಟೆಲ್ ನಲ್ಲಿ ನಯನತಾರಾ ರಂಪ-ರಾಮಾಯಣ]

ನ್ಯಾಚುರಲ್ ನಟ ಕಾರ್ತಿ

ತಮಿಳು-ತೆಲುಗು ಚಿತ್ರರಂಗದಲ್ಲಿ ತುಂಬಾ ಸಹಜ ಅಭಿನಯದ ಮೂಲಕ ಮೆಚ್ಚುಗೆ ಗಳಿಸುವ ನಟ ಕಾರ್ತಿ ಶಿವಕುಮಾರ್ ಅವರೆಂದರೆ, ಎಲ್ಲರಿಗೂ ಅಚ್ಚುಮೆಚ್ಚು. ಅವರು ಇಲ್ಲಿಯವರೆಗೆ ಮಾಡಿರುವ ಹಲವು ಸಿನಿಮಾಗಳು ಕೂಡ ಬಹಳ ಸಹಜ ನಟನೆಯಲ್ಲಿ ಮೂಡಿಬಂದಿದೆ. ಜೊತೆಗೆ ಅವರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕೂಡ ಬಹಳ ವಿಭಿನ್ನವಾದ ವಿಷಯಗಳನ್ನೇ ಎತ್ತಿಕೊಳ್ಳುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ಅಂದರೆ ಈ 'ಕಾಷ್ಮೋರ' ಸಿನಿಮಾ.[ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ ಈಕೆಯೇ.!]

ಭಾರಿ ಕುತೂಹಲ ಹುಟ್ಟಿಸುವ ಪೋಸ್ಟರ್

'ಬಾಹುಬಲಿ' ಚಿತ್ರದಲ್ಲಿ ಕಟ್ಟಪ್ಪ ಹಾಕಿದ್ದ ರೀತಿಯಲ್ಲಿ ಕಾಸ್ಟ್ಯೂಮ್ ಹಾಕಿರುವ ನಟ ಕಾರ್ತಿ ಅವರ 'ಕಾಷ್ಮೋರ', ಬರೀ ಫಸ್ಟ್ ಲುಕ್ ಪೋಸ್ಟರ್ ಗಳ ಮೂಲಕಾನೇ ಭಾರಿ ಕುತೂಹಲ ಹುಟ್ಟಿಸಿದೆ. ಆದ್ದರಿಂದ ಕನ್ನಡಿಗರೂ ಕೂಡ ಈ ಸಿನಿಮಾವನ್ನು, ಕನ್ನಡದಲ್ಲೇ ನೋಡುವ ಇಚ್ಛೆ ಪಡಿಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ.

ಏನಂತಾರೆ ಡಬ್ಬಿಂಗ್ ಪರ-ವಿರೋಧಿಗಳು

ಅಂದಹಾಗೆ ಡಬ್ಬಿಂಗ್ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಆಗಾಗ ಭಯಂಕರ ಚರ್ಚೆಗಳಾಗುತ್ತಲೇ ಇರುತ್ತದೆ. ಇದೀಗ ಕಾರ್ತಿ ಅಭಿನಯದ 'ಕಾಷ್ಮೋರ' ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡುತ್ತಾರೆ ಅಂದ್ರೆ, ಡಬ್ಬಿಂಗ್ ಪರ-ವಿರೋಧಿಗಳು ಅದ್ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ.

ಚಿತ್ರದ ತಾರಾಗಣ

ಈ ಚಿತ್ರದಲ್ಲಿ ನಟ ಕಾರ್ತಿ ಅವರು 'ಕಾಷ್ಮೋರ', 'ರಾಜ್ ನಾಯಕ್' ಮತ್ತು 'ಮಿಸ್ಟರಿ ಮೆನ್' ಹೀಗೆ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ನಟಿ ನಯನತಾರಾ ಮತ್ತು ನಟಿ ಶ್ರೀ ದಿವ್ಯ ಅವರು ಡ್ಯುಯೆಟ್ ಹಾಡುತ್ತಿದ್ದಾರೆ. ಚಿತ್ರಕ್ಕೆ ಗೋಕುಲ್ ಆಕ್ಷನ್-ಕಟ್ ಹೇಳುತ್ತಿದ್ದು, ಡ್ರಿಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.[ಗುಪ್ತವಾಗಿ ನಡೆದೇ ಹೋಯಿತಂತೆ ನಯನತಾರ ಮದುವೆ]

ಏನಿದು 'ಕಾಷ್ಮೋರ'.?

ಪ್ರಾಣಾಂತಿಕ ಆತ್ಮ (ದೆವ್ವ) ಎನ್ನುವ ಅರ್ಥ ಬರುವ 'ಕಾಷ್ಮೋರ' ಚಿತ್ರ ಸಸ್ಪೆನ್ಸ್, ಹಾರರ್, ಕಾಮಿಡಿ ಜೊತೆಗೆ ಸಖತ್ ಥ್ರಿಲ್ಲಿಂಗ್ ಕಥೆಯನ್ನಾಧರಿಸಿದೆ. ಸುಮಾರು ನಾಲ್ಕು ವರ್ಷಗಳ ಮೊದಲೇ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಇದೀಗ ಫಸ್ಟ್ ಲುಕ್ ಪೋಸ್ಟರ್ ಗಳು ರಿಲೀಸ್ ಆಗಿವೆ.

ಯಾವಾಗ ರಿಲೀಸ್

ನಾಲ್ಕು ಭಾಷೆಗಳಲ್ಲಿ ಮೂಡಿಬರಲಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದೆ.

English summary
Kollywood Actor Karthi's upcoming movie 'Kaashmora' first look poster released Yesterday (August 18th). After 'Oopiri' Successs Actor Karthi Going To Entertain Telugu , Tamil Audience From This horror, comedy, action. The Film is Directed by Gokul and The feature is Actress Nayantara and Actress Sri Divya in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada