»   » 'ಕೊಲವೆರಿಡಿ' ಸಂಗೀತ ನಿರ್ದೇಶಕನ, ಕನ್ನಡ ಹಾಡು ಬಿಡುಗಡೆ

'ಕೊಲವೆರಿಡಿ' ಸಂಗೀತ ನಿರ್ದೇಶಕನ, ಕನ್ನಡ ಹಾಡು ಬಿಡುಗಡೆ

Posted By:
Subscribe to Filmibeat Kannada

'ಕೊಲವೆರಿ ಡಿ' ಹಾಡಿನ ಮೂಲಕ ಇಡೀ ವಿಶ್ವದಾದ್ಯಂತ ಫೇಮಸ್ ಆದ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ನಮ್ಮ ಕನ್ನಡ ಸಿನಿಮಾ 'ಜ್ವಲಂತಂ' ಚಿತ್ರದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಪಡೆದಿದ್ದಾರೆ.

ಇದೀಗ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡಿರುವ 'ಜ್ವಲಂತಂ' ಚಿತ್ರದ ಹಾಡು ಅಕ್ಟೋಬರ್ 16 ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಜ್ವಲಂತಂ' ನವೆಂಬರ್ ಗೆ ತೆರೆಗೆ ಬರಲು ತಯಾರಾಗುತ್ತಿದೆ.

Tamil music director Anirudh Ravichander sings for kannada movie Jwalantham

ಯುವ ಪ್ರತಿಭೆ ಹಾಗು ಚೊಚ್ಚಲ ನಿರ್ದೇಶಕ ಅಂಬರೀಶ್ ಅವರು ಆಕ್ಷನ್-ಕಟ್ ಹೇಳಿರುವ 'ಜ್ವಲಂತಂ' ನ ಹೀರೋ ಎಂಟ್ರಿಯಾಗುವ ಸಂದರ್ಭದಲ್ಲಿ ಬರುವ 'ಮನೆಗೊಬ್ಬ ಮಗ ಅಲ್ಲ ಊರಿಗೊಬ್ಬ ಮಗ ಕಳ್ಳ' ಅನ್ನೋ ಖಡಕ್ ಟಮಟೆ ಟ್ರಾಕ್‌ ಗೆ ಅನಿರುದ್ಧ್ ಹಾಡಿದ್ದು, ಯುವಕರಿಗೆ ಮತ್ತಷ್ಟು ಕಿಕ್ ಏರಿಸಿದ್ದಾರೆ.[ಸ್ಯಾಂಡಲ್ ವುಡ್ಡಿಗೆ 'ಕೊಲವೆರಿಡಿ' ಸಂಗೀತ ನಿರ್ದೇಶಕ]

ಅಕ್ಟೋಬರ್ 16 ರಂದು ಸಂಗೀತ ನಿರ್ದೇಶಕ ಅನಿರುದ್ಧ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಆ ದಿನದಂದು 'ಜ್ವಲಂತಂ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಲು ಚಿತ್ರತಂಡ ನಿರ್ಧರಿಸಿದೆ.

Tamil music director Anirudh Ravichander sings for kannada movie Jwalantham

ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ 'ಜ್ವಲಂತಂ' ಚಿತ್ರದಲ್ಲಿ ನಾಯಕ ನಟನಾಗಿ ಜ್ವಾಲಾ ಕಾಣಿಸಿಕೊಂಡಿದ್ದು, ನಾಯಕಿಯರಾಗಿ ದೀಪ್ತಿ ಮತ್ತು ದೀಪಾಗೌಡ ಮಿಂಚಿದ್ದಾರೆ. ಸಂಗೀತ ನಿರ್ದೇಶಕ ವಿಕ್ರಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಒಟ್ನಲ್ಲಿ ಇತ್ತೀಚೆಗೆ ಸ್ಯಾಂಡಲ್ ವುಡ್ ಕ್ಷೇತ್ರ, ಇತ್ತೀಚೆಗೆ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿದೆ. ಇದೀಗ ಹೊಸಬರ ವಿಭಿನ್ನ ಪ್ರಯತ್ನವಾದ ಸಸ್ಪೆನ್ಸ್-ಥ್ರಿಲ್ಲರ್ 'ಜ್ವಲಂತಂ'ಕ್ಕೆ ಕನ್ನಡ ಸಿನಿರಸಿಕರು ಥ್ರಿಲ್ಲ್ ಆಗ್ತಾರಾ ಅಂತ ಕಾದು ನೋಡಬೇಕು.

English summary
Chart Buster song 'Kolaveri Di' music director Anirudh Ravichander has made Sandalwood entry by singing song for Kannada movie Jwalantham. 'Jwalantham' audio launch tomorrow. The movie starrer is Kannada Actor Jwala, Actress Deepti Kapse, Actress Deepa Gowda lead role, directed by AM Ambarish.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada