»   » 'ಹೆಬ್ಬುಲಿ' ರೀಮೇಕ್ ನಲ್ಲಿ ದಕ್ಷಿಣದ ಸೂಪರ್ ಸ್ಟಾರ್!

'ಹೆಬ್ಬುಲಿ' ರೀಮೇಕ್ ನಲ್ಲಿ ದಕ್ಷಿಣದ ಸೂಪರ್ ಸ್ಟಾರ್!

Posted By:
Subscribe to Filmibeat Kannada

ಸುದೀಪ್ ಅಭಿನಯದ 'ಹೆಬ್ಬುಲಿ' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ 'ಹೆಬ್ಬುಲಿ' ಚಿತ್ರದ ರೀಮೇಕ್ ಗಾಗಿ ಪರಭಾಷಾ ನಿರ್ಮಾಪಕರು ಪೈಪೋಟಿ ನಡೆಸುತ್ತಿದ್ದಾರೆ ಎಂಬುದನ್ನ ಸ್ವತಃ ಚಿತ್ರದ ನಿರ್ದೇಶಕರೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.[ತಮಿಳು, ತೆಲುಗಿಗೆ 'ಹೆಬ್ಬುಲಿ' ರಿಮೇಕ್?]

ಇದೀಗ, 'ಹೆಬ್ಬುಲಿ' ಚಿತ್ರವನ್ನ ರೀಮೇಕ್ ಮಾಡಲು ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟರೊಬ್ಬರು ಮುಂದೆ ಬಂದಿದ್ದಾರಂತೆ. ಈಗಾಗಲೇ ಸಿನಿಮಾ ನೋಡಿರುವ ಈ ನಟ ಗ್ರೀನ್ ಸಿಗ್ನಲ್ ಕೊಡುವುದೊಂದೆ ಬಾಕಿ ಎನ್ನಲಾಗುತ್ತಿದೆ. ಅಷ್ಟಕ್ಕೂ ಸೌತ್ ಇಂಡಸ್ಟ್ರಿಯ ಈ ನಟ ಯಾರು? ಮುಂದೆ ಓದಿ....


'ಹೆಬ್ಬುಲಿ' ರೀಮೇಕ್ ನಲ್ಲಿ ಸೌತ್ ಸ್ಟಾರ್!

ಚಿತ್ರತಂಡದ ಮೂಲಗಳ ಪ್ರಕಾರ ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ, 'ಹೆಬ್ಬುಲಿ' ಚಿತ್ರದ ರೀಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]


'ಹೆಬ್ಬುಲಿ' ಚಿತ್ರ ನೋಡಿದ ಸೂರ್ಯ

ನಟ ಸೂರ್ಯಗಾಗಿ ಚೆನ್ನೈನಲ್ಲಿ 'ಹೆಬ್ಬುಲಿ' ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತಂತೆ. ಈಗಾಗಲೆ 'ಹೆಬ್ಬುಲಿ' ಚಿತ್ರವನ್ನ ಸೂರ್ಯ ನೋಡಿ ಸೂರ್ಯ ಮೆಚ್ಚಿಕೊಂಡಿದ್ದಾರಂತೆ. ಇದಕ್ಕೂ ಮುಂಚೆ ಸೂರ್ಯ ಹೆಬ್ಬುಲಿ ಚಿತ್ರವನ್ನ ನೋಡಲಿದ್ದಾರೆ ಎಂದು ಚಿತ್ರದ ನಿರ್ಮಾಪಕ ಉಮಾಪತಿ ಅವರು, ಖಾಸಗಿ ಮಾಧ್ಯಮದ ಜೊತೆ ಹೇಳಿಕೊಂಡಿದ್ದರು.['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]


ತಮಿಳು-ತೆಲುಗುನಲ್ಲೂ ಸೂರ್ಯ ಸಾಧ್ಯತೆ!

ಅಂದ್ಹಾಗೆ, ನಟ ಸೂರ್ಯ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಹೀಗಾಗಿ, ಎರಡೂ ಭಾಷೆಯಲ್ಲೂ ಸೂರ್ಯ ಅವರೇ 'ಹೆಬ್ಬುಲಿ' ರೀಮೇಕ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.[ಕೊನೆಗೂ 'ಹೆಬ್ಬುಲಿ' ಒಟ್ಟು ಕಲೆಕ್ಷನ್ ಬಹಿರಂಗ: ಈ ಸಂಸ್ಕೃತಿ ಬಗ್ಗೆ ಸುದೀಪ್ ಬೇಸರ!]


ತೆಲುಗು ನಟರು ಸಿನಿಮಾ ನೋಡಿದ್ದಾರಂತೆ!

ಇನ್ನೂ 'ಹೆಬ್ಬುಲಿ' ಚಿತ್ರವನ್ನ ನಟ ಸೂರ್ಯ ಹೊರತುಪಡಿಸಿ, ಮತ್ತೊಬ್ಬ ತಮಿಳಿನ ಸ್ಟಾರ್ ನಟ ಹಾಗೂ ತೆಲುಗಿನಲ್ಲಿ ಇಬ್ಬರು ನಟರು ನೋಡಿದ್ದಾರಂತೆ. ಆದ್ರೆ, ಸೂರ್ಯ ಸೇರಿದಂತೆ ಇವರಲ್ಲಿ ಇನ್ನೂ ಯಾರು ಖಚಿತವಾಗಿಲ್ಲ ಎನ್ನುವುದು ನಿರ್ದೇಶಕರು ಸ್ವಷ್ಟಪಡಿಸಿದ್ದರು.


'ಸಿಂಗಂ' ರೀಮೇಕ್ ಮಾಡಿದ್ದ ಸುದೀಪ್

ಅಂದ್ಹಾಗೆ, ಸೂರ್ಯ ತಮಿಳಿನಲ್ಲಿ ಅಭಿನಯದ 'ಸಿಂಗಂ' ಚಿತ್ರವನ್ನ, ಕಿಚ್ಚ ಸುದೀಪ್ ಕನ್ನಡದಲ್ಲಿ 'ಕೆಂಪೇಗೌಡ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಿ ಯಶಸ್ಸು ಕಂಡಿದ್ದರು. ಹೀಗಾಗಿ, ಈ ಬಾರಿ ಸುದೀಪ್ ಚಿತ್ರವನ್ನ ಸೂರ್ಯ ಅವರು ರೀಮೇಕ್ ಮಾಡುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.['ಹೆಬ್ಬುಲಿ' ಗೆದ್ದಿದ್ದಕ್ಕೆ 'ಕಿಚ್ಚ'ನ ಮನೆಯಲ್ಲಿ ಸಕ್ಸಸ್ ಪಾರ್ಟಿ!]


ರೀಮೇಕ್ ಬಗ್ಗೆ ಹೆಚ್ಚಿದ ಕುತೂಹಲ!

ದಕ್ಷಿಣದ ದೊಡ್ಡ ದೊಡ್ಡ ನಟರು 'ಹೆಬ್ಬುಲಿ' ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದಾರಂತೆ. ಆದ್ರೆ, ಅಂತಿಮವಾಗಿ ಯಾರು 'ಹೆಬ್ಬುಲಿ' ರೀಮೇಕ್ ನಲ್ಲಿ ಕಾಣಿಸಿಕೊಳ್ತಾರೆ ಎಂಬುದರ ಬಗ್ಗೆ ಖಚಿತವಾಗಿಲ್ಲವಾದರೂ, ಕುತೂಹಲ ಮಾತ್ರ ಹೆಚ್ಚಾಗಿದೆ.


English summary
According to Source, Kannada Actor Sudeep Starrer Hebbuli Movie Remade in Telugu and Tamil and Actor Surya Will Play Lead Role in 2 Lunguages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada