For Quick Alerts
  ALLOW NOTIFICATIONS  
  For Daily Alerts

  ಕೊಡಗಿನ ಬಗ್ಗೆ ಯೋಚನೆ ಮಾಡಲಿಲ್ಲ ಈ 'ಸ್ಟಾರ್'ಗಳು ಯಾಕೆ.?

  By Bharath Kumar
  |
  ಸಿನಿಮಾ ರಿಲೀಸ್‌ಗೆ ನಮ್ಮ ನಾಡು ಬೇಕು, ಆದ್ರೆ ಕಷ್ಟದಲ್ಲಿ ಸಹಾಯ ಮಾಡದ ಸ್ಟಾರ್ಸ್ ಇವ್ರು..! | Filmibeat Kannada

  ತೆಲುಗು, ತಮಿಳು, ಹಿಂದಿ ಚಿತ್ರರಂಗದ ಸ್ಟಾರ್ ಗಳಿಗೆ ನಮ್ಮ ಕರ್ನಾಟಕ ಫೆವರೇಟ್. ಅದರಲ್ಲೂ ಬೆಂಗಳೂರು ನಗರ ಅಚ್ಚುಮೆಚ್ಚು. ಶಾಪಿಂಗ್, ಟೈಂ ಪಾಸ್, ಕಾರ್ಯಕ್ರಮಗಳಿಗೆ, ಅದು, ಇದು ಅಂತ ಇಲ್ಲಿಗೆ ಬರ್ತಾರೆ.

  ಬಂದಾಗೆಲ್ಲಾ ಬರಿ ಬಿಲ್ಡಪ್ ಕೊಡ್ತಾರೆ. 'ನಮಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ. ಐ ಲವ್ ಕರ್ನಾಟಕ, ಇಲ್ಲಿ ಜನ ಸೂಪರ್ ಅಂತೆಲ್ಲಾ' ಬೊಬ್ಬೆ ಹೊಡಿತಾರೆ. ಆದ್ರೆ, ನಮ್ಮ ರಾಜ್ಯಕ್ಕೆ, ನಮ್ಮ ಜನಕ್ಕೆ ಸಂಕಷ್ಟ ಬಂದಾದ ಯಾರೊಬ್ಬರು ಮಾತನಾಡಲ್ಲ. ಯಾರು ಕೂಡ ಸಹಾಯ ಮಾಡಲ್ಲ.

  ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.? ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?

  ಅದೇ ಕೇರಳದಲ್ಲಿ ಪ್ರವಾಹ ಉಂಟಾಗಿದ್ದಕ್ಕೆ ಇಡೀ ಭಾರತೀಯ ಚಿತ್ರರಂಗ ತಮಿಳು, ತೆಲುಗು, ಬಾಲಿವುಡ್ ಅಷ್ಟೇ ಯಾಕೆ ನಮ್ಮ ಸ್ಯಾಂಡಲ್ ವುಡ್ ಮಂದಿ ಕೂಡ ನೆರವು ನೀಡಿದ್ದಾರೆ. ಬಿಸಿನೆಸ್, ಎಂಜಾಯ್ ಮಾಡೋಕೆ ಕರ್ನಾಟಕ ಬೇಕು, ಆದ್ರೆ, ಇಲ್ಲಿನ ಜನರಿಗೆ ಮಾತ್ರ ಸಹಾಯ ಮಾಡಲ್ಲ. ಇದನ್ನೇ ಹೇಳೋದು ಅಲ್ವಾ, ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅಂತ. ಈ ಬಗ್ಗೆ ಮತ್ತಷ್ಟು ವಿವರಣೆಯನ್ನ ಉದಾಹರಣೆ ಸಮೇತ ಮುಂದೆ ನೀಡಲಾಗಿದೆ ಓದಿ.....

  ಕೇರಳಗೆ ಕೊಟ್ರು, ಕೊಡಗಿಗೆ ಕೊಟ್ಟಿಲ್ಲ ಯಾಕೆ.?

  ಕೇರಳಗೆ ಕೊಟ್ರು, ಕೊಡಗಿಗೆ ಕೊಟ್ಟಿಲ್ಲ ಯಾಕೆ.?

  ಕೇರಳಗೆ ಹೋಲಿಸಿಕೊಂಡ್ರೆ ಕೊಡಗು ಜಿಲ್ಲೆಯಲ್ಲಿ ಉಂಟಾದ ನಷ್ಟ ಕಮ್ಮಿನೇ ಇರಬಹುದು. ಆದ್ರೆ, ಇಲ್ಲಿಯೂ ಜನರಿಗೆ ಅಷ್ಟೇ ತೊಂದರೆಯಾಗಿದೆ. ಕೇರಳಗೆ ಎಲ್ಲ ಕಲಾವಿದರು ತಮ್ಮ ಕೈಲಾದ ಸಹಾಯವನ್ನ ಮಾಡಿದ್ರು. ಕೊಡಗಿಗೂ ಒಂದು ಸಣ್ಣದ ಮಟ್ಟದ ನೆರವು ನೀಡಿದ್ದರೇ ಅವರೆಲ್ಲಾ ರಿಯಲ್ ಹೀರೋಗಳು ಆಗಿಬಿಡ್ತಿದ್ರು.

  ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್

  ತಮಿಳು, ತೆಲುಗು, ಹಿಂದಿ ಸಿನಿಮಾ ನೋಡೋರು ಹೆಚ್ಚಿದ್ದಾರೆ

  ತಮಿಳು, ತೆಲುಗು, ಹಿಂದಿ ಸಿನಿಮಾ ನೋಡೋರು ಹೆಚ್ಚಿದ್ದಾರೆ

  ಅಂದ್ಹಾಗೆ, ಕರ್ನಾಟಕದಲ್ಲಿ ಮುಖ್ಯವಾಗಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ಸೇರಿದಂತೆ, ಹೃದಯಭಾಗ ಬೆಂಗಳೂರಿನಲ್ಲಿ ಪರಭಾಷೆ ಸಿನಿಮಾಗಳನ್ನ ನೋಡುವವರ ಸಂಖ್ಯೆ ಹೆಚ್ಚಿದೆ. ತಮಿಳು ನಟ ವಿಜಯ್, ರಜನಿಕಾಂತ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಎನ್.ಟಿ.ಆರ್, ಶಾರೂಕ್ ಖಾನ್ ಅವರಿಗೆಲ್ಲಾ ಇಲ್ಲಿ ಅಭಿಮಾನಿಗಳು ಮತ್ತು ಸಂಘಟನೆಗಳು ಇವೆ. ಅವರ ಸಿನಿಮಾ ಬಂದ್ರೆ, ಕನ್ನಡ ಚಿತ್ರಗಳನ್ನ ಬಿಟ್ಟು ಆ ಚಿತ್ರಗಳನ್ನ ನೋಡುವಷ್ಟು ಅಭಿಮಾನ ಹೊಂದಿದ್ದಾರೆ. ಆದ್ರೆ, ಇಂತಹ ಸಂದರ್ಭದಲ್ಲಿ ಕರ್ನಾಟಕ ನೆನಪಾಗುವುದೇ ಇಲ್ಲ.

  ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

  ನಮ್ಮ ಇಂಡಸ್ಟ್ರಿಯಿಂದ ಕೊಟ್ಟರು

  ನಮ್ಮ ಇಂಡಸ್ಟ್ರಿಯಿಂದ ಕೊಟ್ಟರು

  ಕೊಡಗು ಜನರು ಸಂಕಷ್ಟದಲ್ಲಿದ್ದಾಗ ನಮ್ಮ ಕರ್ನಾಟಕ ವಾಣಿಜ್ಯ ಮಂಡಳಿ ಅವರು 20 ಲಕ್ಷ ಹಣ ನೀಡಿ ನೆರವಾದರು. ಅದೇ ರೀತಿ ಕೇರಳ ರಾಜ್ಯಕ್ಕೂ 5 ಲಕ್ಷ ಹಣ ನೀಡಿ ಮಾನವೀಯತೆ ಮೆರೆದರು. ಹೀಗೆ, ತಮಿಳು ಹಾಗೂ ತೆಲುಗು ಚಿತ್ರರಂಗಳು ಕೊಡಗಿಗೂ ಒಂದಿಷ್ಟು ಅಂತ ಸಹಾಯ ಮಾಡಬಹುದಿತ್ತು.

  ಕೊಡಗು ಮತ್ತು ಕೇರಳ ಜನತೆಗೆ ನೆರವಾದ ಕನ್ನಡ ಫಿಲ್ಮ್ ಚೇಂಬರ್ಕೊಡಗು ಮತ್ತು ಕೇರಳ ಜನತೆಗೆ ನೆರವಾದ ಕನ್ನಡ ಫಿಲ್ಮ್ ಚೇಂಬರ್

  ಯಾವ ಸಂಘಟನೆಗಳು ಕಾಣಿಸಿಲ್ಲ

  ಯಾವ ಸಂಘಟನೆಗಳು ಕಾಣಿಸಿಲ್ಲ

  ಪರಭಾಷೆ ಚಿತ್ರಗಳು ಬಿಡುಗಡೆಯಾದಾಗ ಥಿಯೇಟರ್ ಬಳಿ ಸಂಘಟನೆಗಳ ಪೋಸ್ಟರ್ ರಾರಾಜಿಸುತ್ತೆ. ಆದ್ರೆ, ಕೊಡಗಿನಲ್ಲಿ ಸಮಸ್ಯೆಯಾದಾಗ ಯಾವ ಪರಭಾಷೆ ನಟರ ಸಂಘಟನೆಗಳು ನೆರವು ನೀಡಲು ಮುಂದಾಗಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಬಹುಶಃ ಅವರ ನೆಚ್ಚಿನ ನಟರ ಹೆಸರಲ್ಲಿ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಿದ್ದರೇ ಇಂದು ಅವರು ತುಂಬಾ ಎತ್ತರದ ಸ್ಥಾನ ಪಡೆದುಕೊಳ್ಳುತ್ತಿದ್ದರು.

  ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್

  ಸಂಕಷ್ಟ ಬಂದಾಗ ಕರ್ನಾಟಕ ಸಹಾಯ ಮಾಡಿದೆ

  ಸಂಕಷ್ಟ ಬಂದಾಗ ಕರ್ನಾಟಕ ಸಹಾಯ ಮಾಡಿದೆ

  ಅದೇ ಚೆನ್ನೈನಲ್ಲಿ ಪ್ರವಾಹ ಆದಾಗ, ಅಷ್ಟೇ ಯಾಕೆ ಕೇರಳದಲ್ಲಿ ಪ್ರವಾಹದ ವೇಳೆಯೂ ಕರ್ನಾಟಕದಿಂದ ಸಹಾಯವಾಗಿದೆ. ಈಗಲೂ ಕೊಡಗಿಗೆ ನೀಡಿದಂತೆ ಕೇರಳಕ್ಕೂ ನಮ್ಮ ಜನರು ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ. ಆದ್ರೆ, ಕರ್ನಾಟಕದಿಂದ ದೊಡ್ಡ ಗಳಿಕೆ ಕಾಣುವ ಸಿನಿಮಾ ಮಂದಿ ಮಾತ್ರ ಇತ್ತ ಗಮನ ಹರಿಸಲೇ ಇಲ್ಲ.

  ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರುಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು

  ಬಹುಶಃ ಯಾರ ಗಮನಕ್ಕೂ ಬಂದೆ ಇಲ್ಲ ಅನಿಸುತ್ತೆ

  ಬಹುಶಃ ಯಾರ ಗಮನಕ್ಕೂ ಬಂದೆ ಇಲ್ಲ ಅನಿಸುತ್ತೆ

  ಬಹುಶಃ ಕರ್ನಾಟಕದಲ್ಲಿ ಕೊಡಗು ಎಂಬ ಜಿಲ್ಲೆ ಇದೆ. ಅಲ್ಲಿ ಭೂಕುಸಿತವಾಗಿ ಭಾರಿ ಅನಾಹುತವಾಗಿದೆ ಎಂಬುದು ಪರಭಾಷೆ ನಟರಿಗೆ ಗೊತ್ತೇ ಆಗಿಲ್ಲ ಅನಿಸುತ್ತೆ. ಇಂದಿನ ಸೋಶಿಯಲ್ ಮೀಡಿಯಾದ ಪ್ರಭಾವದ ನಡುವೆಯೂ ಯಾರೊಬ್ಬರ ಗಮನಕ್ಕೂ ಬಂದೇ ಇಲ್ಲ ಅನಿಸುತ್ತೆ. ಸುದ್ದಿವಾಹಿನಗಳನ್ನ, ಸುದ್ದಿ ಪತ್ರಿಕೆಗಳನ್ನ ಕೂಡ ನೋಡಿಲ್ಲ ಎನಿಸುತ್ತೆ.

  ಎಲ್ಲರಿಗಿಂತ ವಿಭಿನ್ನವಾಗಿ ಕೇರಳಗೆ ನೆರವಾದ ಅನುಷ್ಕಾ-ಕೊಹ್ಲಿ ದಂಪತಿಎಲ್ಲರಿಗಿಂತ ವಿಭಿನ್ನವಾಗಿ ಕೇರಳಗೆ ನೆರವಾದ ಅನುಷ್ಕಾ-ಕೊಹ್ಲಿ ದಂಪತಿ

  ಕನ್ನಡಿಗರು ವಿಶಾಲ ಹೃದಯವಂತರು

  ಕನ್ನಡಿಗರು ವಿಶಾಲ ಹೃದಯವಂತರು

  ಎಲ್ಲದಕ್ಕೂ ಕಾರಣ ಕರ್ನಾಟಕದವರು ವಿಶಾಲ ಹೃದಯವರು. ಯಾವುದೇ ಭೇದ-ಭಾವವಿಲ್ಲದೇ ಎಲ್ಲಾ ಭಾಷೆಯ ಸಿನಿಮಾಗಳನ್ನ ಮೊದಲ ದಿನವೇ ಹೋಗಿ ನೋಡ್ತಾರೆ. ತೆಲುಗು, ತಮಿಳು ಹಾಗೂ ಹಿಂದಿ ಸ್ಟಾರ್ ಸಿನಿಮಾಗಳಿಗೆ ಆಲ್ ಮೋಸ್ಟ್ ಕಲೆಕ್ಷನ್ ಹೆಚ್ಚಾಗೋದೇ ಬೆಂಗಳೂರಿನಲ್ಲಿ. ಅಷ್ಟಕ್ಕೂ, ಪರಭಾಷೆ ಸಿನಿಮಾ ತಾರೆಯರು ಕೊಡಗಿಗೆ ಏನು ಸಹಾಯ ಮಾಡಿಲ್ಲ ಎಂಬ ಬೇಸರವೇನಿಲ್ಲ. ಆದ್ರೆ, ಒಂದು ಸಂತಾಪವಾದರೂ ಸೂಚಿಸಬಹುದಿತ್ತು ಎಂಬ ನಿರೀಕ್ಷೆ ಇತ್ತು.

  English summary
  Tamil, Telugu and Hindi actors Did not Helps to Kodagu. But, they want to karnataka for their films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X