For Quick Alerts
  ALLOW NOTIFICATIONS  
  For Daily Alerts

  ಯಜುವೇಂದ್ರ ಚಹಾಲ್ ಲವ್ ಸ್ಟೋರಿಗೆ ಬ್ರೇಕ್ ಹಾಕಿದ ತನಿಷ್ಕಾ

  By Pavithra
  |

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ನಟಿ ತನಿಷ್ಕಾ ಕಪೂರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಎಲ್ಲೆಡೆ ಹರಿದಾಡುತ್ತಿದೆ. ನಟಿ ತನಿಷ್ಕಾ "ರಾಜು ಕನ್ನಡ ಮೀಡಿಯಂ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದರು. ಮೊದಲ ಸಿನಿಮಾದಲ್ಲಿ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು.

  ಡೇಟಿಂಗ್ ಮಾತ್ರವಲ್ಲದೆ ಸದ್ಯದಲ್ಲೇ ಯಜುವೇಂದ್ರ ಚಾಹಲ್ ಹಾಗೂ ನಟಿ ತನಿಷ್ಕಾ ಕಪೂರ್ ಮದುವೆ ಆಗಲಿದ್ದಾರೆ. ಐಪಿಎಲ್ 2018 ಮುಗಿದ ನಂತರ ಯಜುವೇಂದ್ರ ಚಾಹಲ್-ತನಿಷ್ಕಾ ಕಪೂರ್ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಸುದ್ದಿ ಆಗಿತ್ತು.

  ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!

  ಆದರೆ ಈ ಬಗ್ಗೆ ಫಿಲ್ಮೀ ಬೀಟ್ ಪ್ರತಿಕ್ರಿಯೆ ನೀಡಿರುವ ತನಿಷ್ಕಾ ಕಪೂರ್ "ಸುಳ್ಳು ಸುದ್ದಿ ಹಬ್ಬಿಸಬೇಡಿ, ನನಗೂ ಚಾಹಲ್ ಗೂ ಯಾವುದೇ ಸಂಬಂಧವಿಲ್ಲ, ನಿಜ ಎಂದರೆ ವಯಕ್ತಿಕವಾಗಿ ನನಗೂ ಯುಜುವೇಂದ್ರ ಅವರಿಗೂ ಪರಿಚಯವೇ ಇಲ್ಲ. ನಾನು ಮದುವೆ ಆಗುತ್ತಿಲ್ಲ. ಸದ್ಯ ನಾನು ನನ್ನ ವಿದ್ಯಾಭ್ಯಾಸ ಮುಗಿಸುತ್ತಿದ್ದೇನೆ".

  "ಯಾವುದೇ ವಿಚಾರಗಳನ್ನ ಸುದ್ದಿ ಮಾಡುವ ಮುನ್ನ ಯೋಚನೆ ಮಾಡಬೇಕು" ಎಂದಿದ್ದಾರೆ. ಆದರೆ ಯಜುವೇಂದ್ರ ಚಾಹಲ್ ಜೊತೆ ತೆಗೆದುಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಇನ್‌ಸ್ಟಾಗ್ರಾಂ ನಲ್ಲಿ ತನಿಷ್ಕಾ ಫೋಟೋಗೆ ಚಾಹಲ್ ಕಮೆಂಟ್ ಮಾಡಿರೋ ಫೋಟೋ ಕೂಡ ವೈರಲ್ ಆಗಿದೆ. ಆದರೆ ತನಿಷ್ಕಾ ಮಾತ್ರ ಇದೆಲ್ಲಾ ಸುಳ್ಳು ಅಂತೀದ್ದಾರೆ.

  ಅದೇನೇ ಆಗಲಿ ನಿಜವಾದ ಪ್ರೀತಿಯನ್ನ ಹೆಚ್ಚುದಿನ ಮುಚ್ಚಿಡಲು ಸಾಧ್ಯವಿಲ್ಲ. ಇಬ್ಬರು ಕೂಡ ಅವರದ್ದೇ ಆದ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವುದರಿಂದ ಯಾವುದೇ ವಿಚಾರ ಆಗಲಿ ಹೊರಗಡೆ ಬರಲೇಬೇಕು.

  English summary
  Kannada actress Tanishka spoke about the wedding rumors, Please try spreading the word it’s not true, Neither are we seeing each other neither are we getting married

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X