»   » ಬೆಳ್ಳಿತೆರೆಗೆ ಮತ್ತೊಂದು ಬೆಳ್ಳಕ್ಕಿ ಶಗುನ್ ಪನ್ನು

ಬೆಳ್ಳಿತೆರೆಗೆ ಮತ್ತೊಂದು ಬೆಳ್ಳಕ್ಕಿ ಶಗುನ್ ಪನ್ನು

Posted By:
Subscribe to Filmibeat Kannada

ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ ಎಂಬಂತೆ, ಅಕ್ಕ ಬಂದ ಮೇಲೆ ತಂಗಿ ಬರ್ದೇ ಇರ್ತಾಳಾ ಎಂಬ ಹೊಸ ಗಾದೆ ಚಿತ್ರರಂಗಲ್ಲಿ ಹುಟ್ಟಿಕೊಂಡಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ವಲ್ಲಾ. ತಾಪಸಿ ಅಕ್ಕ ಬಂದ ಮೇಲೆ ತಂಗಿಯೂ ಈಗ ಎಂಟ್ರಿ ಕೊಡುತ್ತಿದ್ದಾರೆ.

ಬೆಳ್ಳಿತೆರೆಯ ಮೇಲೆ ಈಗಾಗಲೆ ತಾಪಸಿ ಪನ್ನು ತಮ್ಮದೇ ಆದಂತಹ ಮೈಮಾಟದ ಖದರ್ ತೋರಿದ್ದಾರೆ. ಈಗವರ ತಂಗಿ ಶಗುನ್ ಪನ್ನು ಬೆಳ್ಳಿತೆರೆ ಮೇಲೆ ವಿಹರಿಸಲು ಸಿದ್ಧವಾಗಿದ್ದಾರೆ. ಇತ್ತೀಚೆಗಷ್ಟೇ ಆಕೆ ಪದವಿ ಮುಗಿಸಿಕೊಂಡರಂತೆ.

Tapasi with Shagun

ಅಕ್ಕನ ಹೆಜ್ಜೆ ಹಾದಿಯಲ್ಲೇ ತಂಗಿಯೂ ಪಯಣಿಸಲಿದ್ದಾರೆ. ಶಗುನಿಗೆ ತಾಪಸಿಯೇ ಮಾರ್ಗದರ್ಶಿಯಂತೆ. ಆಕೆಯೇ ಈಗ ತಂಗಿಗೆ ದಾರಿ ತೋರಿಸುತ್ತಿದ್ದಾರೆ. ಕಥೆ, ಪಾತ್ರಗಳ ಆಯ್ಕೆಯಲ್ಲಿ ಅಕ್ಕನ ಸಹಕಾರ ಇರುತ್ತದಂತೆ.

ನೋಡಲು ಅಕ್ಕನಷ್ಟು ಅಂದಚೆಂದ ಇಲ್ಲದಿದ್ದರೂ, ಸಿನಿಮಾಗೆ ಹೇಳಿಮಾಡಿಸಿದ ಮುಖವಂತೂ ಹೌದು. ಆರಂಭದಲ್ಲಿ ತಾನೇ ತಂಗಿ ಬಗ್ಗೆ ಕೇರ್ ತಗೊಳ್ತೇನೆ. ಬರುಬರುತ್ತಾ ಅವಳ ಕಾಲ ಮೇಲೆ ಅವಳೇ ನಿಲ್ಲುತ್ತಾಳೆ ಎಂದಿದ್ದಾರೆ ತಾಪಸಿ.

ತೆಲುಗು, ತಮಿಳಿನಲ್ಲಿ ಅಭಿನಯಿಸಿರುವ ತಾಪಸಿ ಈಗ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ದಕ್ಷಿಣದಲ್ಲಿ ತೆರವಾಗಿರುವ ತಮ್ಮ ಸ್ಥಾನದಲ್ಲಿ ತಂಗಿಯನ್ನೇ ಕೂರಿಸುವಷ್ಟು ಚಾಲಾಕಿತನ ತೋರಿದ್ದಾರೆ ಈ ಅಪ್ಸರೆ.

ಸದ್ಯಕ್ಕೆ ತಾಪಸಿ 'ಚಸ್ಮೆ ಬದ್ದೂರ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿದ್ಧಾರ್ಥ್ ನಾಯಕ ನಟನಾಗಿರುವ ಈ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಅಲ್ಲೂ ತಾಪಸಿ ಒಂಚೂರು ಮ್ಯಾಜಿಕ್ ಮಾಡಿದರು. ಅದೇನಪ್ಪಾ ಅಂದ್ರೆ...(ಏಜೆನ್ಸೀಸ್)

English summary
Tapsee Pannu's sister Shagun Pannu is set to enter film industry. Taapsee showing route by guiding her sister by selecting appropriate films for her.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada