Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರ್ಜುನ್ ಗುರೂಜಿಯ ಪವಾಡದ ಬಗ್ಗೆ ತಾರಾ ಅಚ್ಚರಿ
ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ನಮ್ಮ ವ್ಯವಸ್ಥೆಯಲ್ಲಿ ಬಹಳ ಶಕ್ತಿಶಾಲಿ, ಪ್ರಭಾವ ಶಾಲಿ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ. ಆದರೆ ಇವರೆಲ್ಲರಿಗಿಂತಲೂ ಪ್ರಭಾವಶಾಲಿಗಳೆಂದರೆ ಸ್ವಾಮೀಜಿಗಳು.
ಕಾವಿ ತೊಟ್ಟ ಸ್ವಾಮೀಜಿ ಮುಂದೆ, ರಾಜಕಾರಣಿ, ಸಿನಿಮಾ ಸ್ಟಾರ್, ಐಎಎಸ್, ಐಪಿಎಸ್‌ಗಳು ತಲೆ ಬಾಗುತ್ತಾರೆ, ಕಾಲಿಗೂ ಎರಗುತ್ತಾರೆ. ಹಲವು ಸ್ವಾಮೀಜಿಗಳು ರಾಜಕೀಯ, ಸಿನಿಮಾ ಉದ್ಯಮ, ಸರ್ಕಾರಿ ಆಡಳಿತಗಳಲ್ಲಿ ಮೂಗು ತೂರಿಸುವುದು ಸಹ ನಡೆದು ಬಂದಿದೆ.
Recommended Video
ಆದರೆ ಕೆಲವು ಸ್ವಾಮೀಜಿಗಳು ಸತ್ಯವಂತರಾಗಿ ನಡೆದುಕೊಳ್ಳುತ್ತಾರೆ. ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಸ್ವಾಮೀಜಿಗಳನ್ನು ಅಪಾರವಾಗಿ ನಂಬುತ್ತಾರೆ. ನಟಿ ತಾರಾ ತಾವು ನಂಬಿರುವ, ಗೌರವಿಸುವ ಅರ್ಜುನ್ ಗುರೂಜಿ ಅವರ ಬಗ್ಗೆ ಇತ್ತೀಚಿಗೆ ಸಿನಿಮಾ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದಾರೆ. ಅವರು ಮಾಡಿದ ಪವಾಡಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಎಲ್ರ ಕಾಲೆಳಿತದೆ ಕಾಲ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ತಾರಾ, ತಾವು ಅರ್ಜುನ್ ಗುರೂಜಿಯನ್ನು ಬಹುವಾಗಿ ನಂಬುವುದಾಗಿಯೂ, ಗೌರವಿಸುವುದಾಗಿಯೂ ಹೇಳಿದರು. ಅರ್ಜುನ್ ಗುರೂಜಿ ಸಹ ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಅರ್ಜುನ್ ಗುರೂಜಿ ಬಗ್ಗೆ ನಟಿ, ರಾಜಕಾರಣಿ ತಾರಾ ಮಾತು
''ನಾನು ನನ್ನ ಗೆಳೆಯರ ಮೂಲಕ ಮೊದಲ ಬಾರಿಗೆ ಅರ್ಜುನ್ ಗುರೂಜಿ ಅವರನ್ನು ಮೈಸೂರಿನಲ್ಲಿ ಭೇಟಿಯಾದೆ. ಹಲವು ವರ್ಷಗಳ ಹಿಂದೆ ನಾನವರನ್ನು ಭೇಟಿಯಾದಾಗ ನಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂಬ ಆಲೋಚನೆ ಸಹ ಇರಲಿಲ್ಲ. ಆದರೆ ಅಂದು ಅರ್ಜುನ್ ಗುರೂಜಿಯವರು ನೀವು ರಾಜಕೀಯ ಸೇರುತ್ತೀರಿ ಎಂದರು. ನಾನು ಸಾಧ್ಯವಿಲ್ಲ ಗುರೂಜಿ, ನನಗೆ ಆ ಆಲೋಚನೆಯೇ ಇಲ್ಲ ಎಂದಿದ್ದೆ. ಆದರೆ ಕಾಲಾನಂತರ ನಾನು ಬಿಜೆಪಿ ಸೇರಿ ಸಕ್ರಿಯ ರಾಜಕಾರಣಿಯಾದೆ'' ಎಂದರು ತಾರಾ.

ನೀರಿನಿಂದ ದೀಪ ಹೊತ್ತಿಸಿದರು ಅರ್ಜುನ್ ಗುರೂಜಿ: ತಾರಾ
ತಾವು ಆಶ್ಚರ್ಯಪಡುವಂತೆ ಮಾಡಿದ ಅರ್ಜುನ್ ಗುರೂಜಿ ಅವರ ಪವಾಡವೊಂದರ ಬಗ್ಗೆ ವಿವರಿಸಿದ ನಟಿ ತಾರಾ, ''ಅರ್ಜುನ್ ಗುರೂಜಿ ಅವರ ಮನೆಯ ಕೆಳಗಡೆ ಭಾಗದಲ್ಲಿ ಸುಮಾರು ಐದು ಅಡಿ ಎತ್ತರದ ಬಾಬಾರ ವಿಗ್ರಹ ಇದೆ. ನಾವು ಅವರೊಟ್ಟಿಗೆ ಮಾತನಾಡುತ್ತಿರುವಾಗಲೇ ಯಾರೋ ಇಬ್ಬರು ದೀಪ ತಂದು ಇಟ್ಟರು. ಒಂದು ಬಿಸ್ಲೆರಿ ಬಾಟಲಿಯಲ್ಲಿ ನೀರನ್ನು ಆ ದೀಪಗಳಿಗೆ ಬಗ್ಗಿಸಿದ ಅರ್ಜುನ್ ಗುರೂಜಿ ದೀಪ ಹಚ್ಚಿಬಿಟ್ಟರು. ನನಗೆ ಆಶ್ಚರ್ಯವಾಗಿಬಿಟ್ಟಿತು. ಮೊದಲಿಗೆ ನಾನು ಅದು ಬಿಳಿಯ ಎಣ್ಣೆ ಎಂದುಕೊಂಡಿದ್ದೆ. ಆದರೆ ನಂತರ ಅವರೇ ಹೇಳಿದರು ಅದು ಎಣ್ಣೆಯಲ್ಲ, ನೀರು ಎಂದು. ಅವರ ಆ ಪವಾಡ ನೋಡಿ ನಾನು ಅವಾಕ್ಕಾಗಿಬಿಟ್ಟೆ'' ಎಂದಿದ್ದಾರೆ ತಾರಾ.

ಮೋದಿ ಅವರೇ ಬಂದು ಉಡುಗೊರೆ ಪಡೆದುಕೊಂಡರು: ತಾರಾ
ಅವಧೂತರು ಎಂದು ಕೆಲವರನ್ನು ಕರೆಯುತ್ತಾರೆ. ಮುಂದೆ ಆಗುವುದನ್ನು ಹೇಳಬಲ್ಲವರಾಗಿರುತ್ತಾರೆ. ಅರ್ಜುನ್ ಗುರೂಜಿ ನನಗೆ ಒಮ್ಮೆ ಬೆಳ್ಳಿ ಗಣಪತಿ ಕೊಟ್ಟಿದ್ದರು. ಅದನ್ನು ಮೋದಿ ಅವರಿಗೆ ಕೊಡುವಂತೆ ಹೇಳಿದ್ದರು. ಶಶಿಕಲಾ ಜೊಲ್ಲೆ ಅವರ ಪತಿಯವರ ಕಾರ್ಯಕ್ರಮದಲ್ಲಿ ನಾನು ಅವರಿಗೆ ಅದನ್ನು ಕೊಟ್ಟೆ. ಮೋದಿ ಅವರಿಗೆ ಉಡುಗೊರೆ ಕೊಡಲು ಸಾಧ್ಯವಾಗುವುದಿಲ್ಲ ಎಂದು ನಾನು ಅರ್ಜುನ್ ಗುರೂಜಿ ಬಳಿ ಹೇಳಿದ್ದೆ. ಆಗಲೂ ಅವರೇ ಹೇಳಿದ್ದರು, ನೀವು ತೆಗೆದುಕೊಂಡು ಹೋಗಿ, ಅವರೇ ಬಂದು ಪಡೆದುಕೊಳ್ಳುತ್ತಾರೆ ಎಂದು. ಅಂದು ಹಾಗೆಯೇ ಆಯಿತು. ನಾನು ಕೊಡಲು ಪ್ರಯತ್ನಿಸಲಿಲ್ಲ ಮೋದಿ ಅವರೇ ಬಂದು ಉಡುಗೊರೆ ಪಡೆದುಕೊಂಡು ಹೋದರು. ನನಗಿಂತ ಮುಂಚೆ ಹಲವರು ಇದ್ದರೂ ಸಹ ಮೋದಿ ಅವರು ನನ್ನ ಬಳಿಯೇ ಬಂದು ಉಡುಗೊರೆ ತೆಗೆದುಕೊಂಡರು'' ಎಂದು ನೆನಪು ಮಾಡಿಕೊಂಡರು ತಾರಾ.

ಅವರು ಹೇಳಿದ್ದೆಲ್ಲವೂ ಪವಾಡದಂತೆ ನಡೆಯಿತು: ತಾರಾ
ಅದಾದ ಮೇಲೆ ಹಲವು ಬಾರಿ ಅರ್ಜುನ್ ಗುರೂಜಿಯವರನ್ನು ಮೈಸೂರಿನಲ್ಲಿ ನಾನು ಭೇಟಿಯಾದೆ. ರಾಜಕೀಯಕ್ಕೆ ಸೇರಿದ ಬಳಿಕವೂ ನನ್ನ ಜೀವನದ ಬಗ್ಗೆ ಹಲವು ವಿಷಯಗಳನ್ನು ಅರ್ಜುನ್ ಗುರೂಜಿ ಹೇಳಿದರು. ಅವೆಲ್ಲವೂ ಪವಾಡದಂತೆ ಹಾಗೆಯೇ ನಡೆಯಿತು. ಅಂಥಹಾ ಗುರುಗಳು ನಮ್ಮ ಸುಜಯ್ ಮೇಲೆ ರಾಜ್ ಗುರು ಮೇಲೆ (ಎಲ್ರ ಕಾಲೆಳಿತದೆ ಕಾಲ ಸಿನಿಮಾ ತಂಡ) ಪ್ರೀತಿ ಇಟ್ಟು ಇಲ್ಲಿವರೆಗು ಬಂದಿರುವುದು ನಮ್ಮ ಪುಣ್ಯ'' ಎಂದರು ನಟಿ ತಾರಾ. ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಎಲ್ರ ಕಾಲೆಳಿತದೆ ಕಾಲ' ಸಿನಿಮಾದ ಕಾರ್ಯಕ್ರಮದಲ್ಲಿ ಅರ್ಜುನ್ ಗುರೂಜಿ ಭಾಗಹಿಸಿದ್ದರು. ತಾರಾ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರ್ಜುನ್ ಗುರೂಜಿ ಅವರ ಗುಣಗಾನ ಮಾಡಿದರು.