»   » ಪರಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ನಂ1 ಸ್ಥಾನಕ್ಕೇರಿದ ದರ್ಶನ್ 'ತಾರಕ್' !

ಪರಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ನಂ1 ಸ್ಥಾನಕ್ಕೇರಿದ ದರ್ಶನ್ 'ತಾರಕ್' !

Posted By:
Subscribe to Filmibeat Kannada
Darshan Tarak Movie Is Top Rated Movie On Bookmyshow | Filmibeat Kannada

ದೊಡ್ಡ ಕ್ರೇಜ್ ಇರುವ ಒಬ್ಬ ಸ್ಟಾರ್ ನಟ.. ಪ್ರತಿಭಾವಂತ ನಿರ್ದೇಶಕ.. ಅತ್ಯುತ್ತಮ ಕಥೆ.. ಈ ಮೂರು ಅಂಶಗಳು ಸರಿಯಾಗಿ ಇದ್ದರೇ ಒಂದು ಸಿನಿಮಾ ಯಾವ ಮಟ್ಟಕ್ಕೆ ಬೇಕಾದರೂ ಗೆಲುವು ಸಾಧಿಸಿ ಬಿಡಬಹುದು. ಈಗ ಆ ರೀತಿ ಗೆಲುವು ಕಂಡಿರುವ ಸಿನಿಮಾ ಅಂದರೆ 'ತಾರಕ್'.

ಕೋಟಿ ಕೋಟಿ ಕಲೆಕ್ಷನ್ ಜೊತೆಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಸಿನಿಮಾ ಈಗ ದರ್ಶನ್ ಅವರ ಇಮೇಜ್ ಮತ್ತಷ್ಟು ಜಾಸ್ತಿಯಾಗುವಂತೆ ಮಾಡಿದೆ. ಜೊತೆಗೆ 'ತಾರಕ್' ಈಗ ಪರಭಾಷೆಯ ದೊಡ್ಡ ಸಿನಿಮಾಗಳಿಗೆ ಪೈಪೋಟಿ ನೀಡಿ ನಂ 1 ಸ್ಥಾನಕ್ಕೆ ಏರಿದೆ.

ಕಳೆದ ಶುಕ್ರವಾರ ತೆರೆಗೆ ಬಂದಿದ್ದ 'ತಾರಕ್' ಸಿನಿಮಾ ಈಗ ಬುಕ್ ಮೈ ಶೋ ನಲ್ಲಿ ನಂ1 ಸ್ಥಾನದಲ್ಲಿದೆ. ಮುಂದೆ ಓದಿ...

'ತಾರಕ್' ನಂ1

ಸದ್ಯ ಬುಕ್ ಮೈ ಶೋ ರೇಟಿಂಗ್ ನಲ್ಲಿ ದರ್ಶನ್ ಅವರ 'ತಾರಕ್' ಸಿನಿಮಾ ನಂ1 ಆಗಿ ಅಗ್ರ ಸ್ಥಾನದಲ್ಲಿದೆ.

83% ರೇಟಿಂಗ್

ಬುಕ್ ಮೈ ಶೋ ರೇಟಿಂಗ್ ನಲ್ಲಿ 'ತಾರಕ್' ಸಿನಿಮಾ 83% ಪಡೆದು ಮೊದಲ ಸ್ಥಾನದಲ್ಲಿದೆ. ಟಾಲಿವುಡ್ ನ ದೊಡ್ಡ ಸಿನಿಮಾಗಳಾದ 'ಸ್ಪೈಡರ್' 69% ಮತ್ತು 'ಜೈ ಲವಕುಶ' 76% ರೇಟಿಂಗ್ ಪಡೆದುಕೊಂಡಿದೆ.

ಧನ್ಯವಾದ ತಿಳಿಸಿದ ದರ್ಶನ್

ಸಿನಿಮಾ ಗೆದ್ದಿರುವ ಹಿನ್ನಲೆಯಲ್ಲಿ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ''ನಿಮ್ಮ ಪ್ರೀತಿ - ಅಭಿಮಾನ - ಪ್ರೋತ್ಸಾಹಕ್ಕೆ ಈ ನಿಮ್ಮ ದಾಸ ಯಾವಾಗ್ಲೂ ಚಿರಋಣಿ. ತಾರಕ್ ರಾಮ್, ಎಲ್ಲರೂ ಪ್ರೀತಿಯಿಂದ ‘ತಾರಕ್' ಅಂತ ಕರೀತಾರೆ'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

'ತಾರಕ್' ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಂಡ ದಾಸ ದರ್ಶನ್

ಭರ್ಜರಿ ಕಲೆಕ್ಷನ್

'ತಾರಕ್' ಮೊದಲ ದಿನ ಬರೋಬ್ಬರಿ 8.5 ಕೋಟಿ ಗಳಿಸಿದ್ದು, ಮೊದಲ ಮೂರು ದಿನದಲ್ಲಿ 25 ರಿಂದ 30 ಕೋಟಿವರೆಗೂ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು?

ಸಂತಸದಲ್ಲಿ ಚಿತ್ರತಂಡ

ಸಿನಿಮಾಗೆ ಸಿಕ್ಕಿರುವ ದೊಡ್ಡ ರೆಸ್ಪಾನ್ಸ್ ಚಿತ್ರತಂಡಕ್ಕೆ ಸಂತಸ ತರಿಸಿದೆ. ದರ್ಶನ್, ಶಾನ್ವಿ ಶ್ರೀವತ್ಸವ್, ಹಾಸ್ಯ ನಟ ಕುರಿ ಪ್ರತಾಪ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ಸಿನಿಮಾ ಹೇಗಿದೆ..?

'ತಾರಕ್' ದರ್ಶನ್ ಅವರ ರೆಗ್ಯೂಲರ್ ಫಾರ್ಮೆಟ್ ನಿಂದ ಹೊರತಾದ ಸಿನಿಮಾ. ಆದ್ರೆ, ದರ್ಶನ್ ಅವರನ್ನು ಹೊಸ ರೀತಿಯಲ್ಲಿ ನೋಡ್ಬೇಕು ಎಂದುಕೊಂಡವರಿಗೆ ತಾರಕ್ ರಾಮ್ ಹೆಚ್ಚು ಇಷ್ಟವಾಗ್ತಾನೆ. ಸಿನಿಮಾ ಮುಗಿದು ಹೊರಬಂದಾಗ ' ದರ್ಶನ್ ಡಿಫ್ರೆಂಟ್' ಸಿನಿಮಾ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಬರಿ ಹೊಡಿ, ಬಡಿ, ಹೀರೋಯಿಸಂ, ವಿಲನ್ ಗಳ ಅಬ್ಬರ ನೋಡಿ ತಲೆಕೆಟ್ಟು ಹೋಗಿರುವ ಪ್ರೇಕ್ಷಕರಿಗೆ ಚಿತ್ರ ಬೇರೆ ಅನುಭವ ನೀಡಿದೆ.

English summary
Now Darshan's 'Tarak' is Top Rated Movie on BookMyShow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X