»   » ಮೊದಲ ದಿನವೇ ದಾಖಲೆಗಳನ್ನ ಚಿಂದಿ ಉಡಾಯಿಸಿದ 'ತಾರಕ್' ಟೀಸರ್

ಮೊದಲ ದಿನವೇ ದಾಖಲೆಗಳನ್ನ ಚಿಂದಿ ಉಡಾಯಿಸಿದ 'ತಾರಕ್' ಟೀಸರ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟೀಸರ್ ನಿನ್ನೆ ಸೆಪ್ಟಂಬರ್ ಬಿಡುಗಡೆಯಾಗಿತ್ತು. ರಿಲೀಸ್ ಆದ ಕ್ಷಣದಿಂದಲೇ 'ತಾರಕ್' ಟೀಸರ್ ವೀಕ್ಷಕರ ಸಂಖ್ಯೆ ರಾಕೆಟ್ ರೀತಿಯಲ್ಲಿ ಹೆಚ್ಚಾಗುತ್ತಿತ್ತು. ಇದರ ಪರಿಣಾಮ ಮೊದಲ ದಿನ 'ತಾರಕ್' ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್ ಆಗಿದೆ.

ಹೌದು, ದರ್ಶನ್ ಅವರ ಸ್ಟೈಲಿಶ್ ಪೋಸ್ಟರ್ ಗಳಿಂದ ಗಮನ ಸೆಳೆದಿದ್ದ 'ತಾರಕ್', ಟೀಸರ್ ಮೂಲಕ ನಿರೀಕ್ಷೆ ಬೆಟ್ಟದಷ್ಟು ಮಾಡಿದೆ. ದರ್ಶನ್ ಲುಕ್, ಗೆಟಪ್, ಫೈಟ್ಸ್, ಸಾಂಗ್ ಹೀಗೆ ಒಂದು ನಿಮಿಷದ ಟೀಸರ್ ನಲ್ಲಿ 'ಡಿ-ಬಾಸ್' ಅಬ್ಬರಿಸಿದ್ದಾರೆ.

ಹಾಗಿದ್ರೆ, ಯ್ಯೂಟ್ಯೂಬ್ ನಲ್ಲಿ 'ತಾರಕ್' ಟೀಸರ್ ಹವಾ ಹೇಗಿದೆ ಅಂತ ನೋಡೋಣ ಬನ್ನಿ. ಮುಂದೆ ಓದಿ.....

30 ನಿಮಿಷದಲ್ಲಿ 30 ಸಾವಿರ

'ತಾರಕ್' ಟೀಸರ್ ಬಿಡುಗಡೆಯಾದ ಕೇವಲ 30ನಿಮಿಷದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನರು ಯ್ಯೂಟ್ಯೂಬ್ ನಲ್ಲಿ ಟೀಸರ್ ನೋಡಿದ್ದರು. ನಂತರ 60 ನಿಮಿಷದಲ್ಲಿ 60 ಸಾವಿರ ವೀಕ್ಷಕರು ನೋಡಿದರು. ಹೀಗೆ, ಗಂಟೆ ಗಂಟೆಗೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದ ದರ್ಶನ್ 'ತಾರಕ್' ಟೀಸರ್

ನಂಬರ್.1 ಟ್ರೆಂಡಿಂಗ್

ಈ ಹಿಂದಿನ ಎಲ್ಲ ವಿಡಿಯೋಗಳನ್ನ ಹಿಂದಿಕ್ಕಿದ 'ತಾರಕ್' ಟೀಸರ್, ಯ್ಯೂಟ್ಯೂಬ್ ನಲ್ಲಿ ನಂಬರ್ ವನ್ ನಂಬರ್.1 ಟ್ರೆಂಡಿಂಗ್ ಆಗಿತ್ತು.

ಎನ್.ಟಿ.ಆರ್ ಟೀಸರ್ ಹಿಂದಿಕ್ಕಿದ 'ತಾರಕ್'

ಜ್ಯೂನಿಯರ್ ಎನ್.ಟಿ.ಆರ್ ಅಭಿನಯದ 'ಜೈಲವಕುಶ' ಟೀಸರ್ ನ್ನ ಹಿಂದಿಕ್ಕಿ 'ತಾರಕ್' ನಂಬರ್ ವನ್ ಸ್ಥಾನ ಪಡೆದುಕೊಂಡಿತ್ತು. 'ತಾರಕ್' ಬಿಡುಗಡೆಯಾಗುವವರೆಗೂ ಯ್ಯೂಟ್ಯೂಬ್ ನಲ್ಲಿ 'ಜೈಲವಕುಶ' ಟೀಸರ್ ನಂಬರ್.1 ಟ್ರೆಂಡಿಂಗ್ ನಲ್ಲಿತ್ತು.

ಸದ್ಯ 'ತಾರಕ್' ವೀಕ್ಷಕರ ಸಂಖ್ಯೆ

'ತಾರಕ್' ಚಿತ್ರದ ಟೀಸರ್ ಬಿಡುಗಡೆಯಾದ 18 ಗಂಟೆಗಳಲ್ಲಿ ಸುಮಾರು 3.25 ಲಕ್ಷ ವೀಕ್ಷಕರ ಹೊಂದಿದೆ. ಪ್ರಸ್ತುತ ಈಗ ಯ್ಯೂಟ್ಯೂಬ್ ನಲ್ಲಿ ನಂಬರ್ 2 ಸ್ಥಾನ ಕಾಯ್ದುಕೊಂಡಿದೆ.

'ತಾರಕ್' ರಿಯಲ್ ಹೀರೋಗಳ ಬಗ್ಗೆ ಖುಷಿಯಾದ ದರ್ಶನ್ ಹೇಳಿದ್ದೇನು?

'ತಾರಕ್' ಚಿತ್ರದ ಬಗ್ಗೆ......

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಹಿರಿಯ ನಟ ದೇವರಾಜ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಅವರ ಸಂಗೀತ 'ತಾರಕ್' ಚಿತ್ರಕ್ಕಿದೆ. ದಸರಾ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ತಾರಕ್ ಸಿನಿಮಾ ಬರಲಿದೆ.

English summary
Challenging Star Darshan starrer 'Tarak' teaser top 2nd trending in Youtube. The movie is directed by Milana Prakash features Shanvi Srivastava, Sruthi Hariharan in the female lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada