»   » ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ ಕನ್ನಡದ ಸಿನಿಮಾ

ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ ಕನ್ನಡದ ಸಿನಿಮಾ

Posted By:
Subscribe to Filmibeat Kannada

ರಥಾವರ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತೊಂದು ವಿಭಿನ್ನ ಚಿತ್ರದ ಜೊತೆ ಸಿನಿಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ತಾರಕಾಸುರ ಸಿನಿಮಾವನ್ನ ನಿರ್ದೇಶನ ಮಾಡಿದ್ದು ಈ ಮೂಲಕ ನವ ನಾಯಕನನ್ನ ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ.

ತಾರಾಕಾಸುರ ಸಿನಿಮಾದಲ್ಲಿ ವೈಭವ್ ನಾಯಕನಾಗಿ ಅಭಿನಯಿಸಿದ್ದು ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಶಿವರಾತ್ರಿ ಹಬ್ಬಕ್ಕೆ ಸಿನಿಮಾದ ಕುಂಬಳಕಾಯಿ ಹೊಡೆಯಲು ಸಿದ್ದತೆ ಮಾಡಿಕೊಂಡಿದ್ದಾರೆ.

ಚಿತ್ರ ಬಿಡುಗಡೆ ಮಾಡುವ ಮುನ್ನವೇ ಬಾಲಿವುಡ್ ನಿಂದ ಚಿತ್ರಕ್ಕೆ ಉತ್ತಮ ಬೇಡಿಕೆ ಬಂದಿದೆ. ತಾರಕಾಸುರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು 1 ಕೋಟಿ 75 ಲಕ್ಷಕ್ಕೆ ಮಾರಾಟವಾಗಿರುವ ಬಗ್ಗೆ ಚಿತ್ರತಂಡ ತಿಳಿಸಿದೆ.

Tarakasura Hindi dubbing rights has been sold for a good price

ತಾರಾಕಾಸುರ ಚಿತ್ರದಲ್ಲಿ ಖಳನಾಯಕನಾಗಿ ಡ್ಯಾನಿ ಸಫಾನಿ ಅಭಿನಯಿಸಿದ್ದಾರೆ. ಕಥೆಯೂ ವಿಭಿನ್ನವಾಗಿದೆ ಇದೇ ಕಾರಣದಿಂದ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮಾದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರೆಯಲ್ಲಿ ಸಿನಿಮಾದ ಹಾಡಿನ ಚಿತ್ರೀಕರಣ ಮಾಡಲು ಸಿದ್ದತೆಗಳನ್ನ ಮಾಡಿಕೊಂಡಿರುವ ಚಿತ್ರತಂಡ ಇನ್ನು ಕೆಲವೇ ದಿನಗಳಲ್ಲಿ ಚಿತ್ರವನ್ನ ತೆರೆಗೆ ತರಲಿದೆ.

English summary
Kannada film Tarakasura Hindi dubbing rights has been sold for a good price .New commer Vibhav has acted the lead role in movie. Rathavara fame Chandrashekhar Bandiappa has directing the movie

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X