»   » ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!

ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ತರ್ಲೆ ನನ್ಮಕ್ಳು ಅನ್ನೋ ಸಿನಿಮಾ ಶುರುವಾಗಿ ಎರಡು ವರ್ಷ ಆಯ್ತು. ಸಿನಿಮಾ ಬೆಂಗಳೂರಲ್ಲಿ ಸೆನ್ಸಾರ್ ಆಗಿ ಸಿಕ್ಕಾಪಟ್ಟೆ ಕಟ್ಸ್ ಯರ್ರಾಬಿರ್ರಿ ಮ್ಯೂಟ್ಸ್ ಜೊತೆಗೆ ಎ ಸರ್ಟಿಫಿಕೇಟನ್ನೂ ತೊಗೊಂಡಿತ್ತು. ಅದಾದ ನಂತ್ರ ದೆಹಲಿಯ ಟ್ರಿಬ್ಯೂನಲ್ ಮುಂದೆ ಚಿತ್ರ ಮರು ಸೆನ್ಸಾರ್ಗೆ ಕ್ಯೂ ನಿಂತಿತ್ತು.

ಇತ್ತೀಚೆಗೆ ಕೇವಲ ಕೆಲವೇ ಕಟ್ಸ್ ಒಂದೆರೆಡು ಮ್ಯೂಟ್ಸ್ಗಳೊಂದಿಗೆ ಈಸಿಯಾಗಿ ಪಾಸಾಗಿದೆ. ಅಂದಹಾಗೆ ಚಿತ್ರದ ನಿರ್ದೇಶಕ ಪ್ರೇಮ್ ಶಿಷ್ಯ ರಾಕೇಶ್ ನಿಟ್ಟುಸಿರುಬಿಟ್ಟಿದ್ದಾರೆ. ತರ್ಲೆ ನನ್ಮಕ್ಳು ಚಿತ್ರಕ್ಕೆ ಮುಹೂರ್ತ ಇಟ್ಟಿದ್ದು ರಿಯಲ್ ಸ್ಟಾರ್ ಉಪ್ಪಿ, ನವರಸ ನಾಯಕ ಜಗ್ಗೇಶ್. ಈಗ ಈ ಇಬ್ಬರೂ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾಗಿದೆ.[ರವಿಚಂದ್ರನ್ ಕಾಪಿ ಮಾಡಿರುವ 'ತರ್ಲೆ ನನ್ಮಕ್ಳು'ಗೆ ಸೆನ್ಸಾರ್ ತರ್ಲೆ]

ಆದ್ರೆ ತರ್ಲೆ ನನ್ಮಕ್ಳು ಅನ್ನೋ ಮೋಡಿ ಮಾಡೋ ಟೈಟಲ್ನಲ್ಲಿ ಚಿತ್ರ ಬರ್ತಿದೆ ಅಂದ್ರೆ ಅದಕ್ಕೆ ತಕ್ಕದಾದ ಕಥೆ ಇರ್ಬೇಕು. ಇನ್ನು ಜಗ್ಗೇಶ್ ಪುತ್ರ ಅಭಿನಯಿಸಿದ್ದಾರೆ ಅಂದಮೇಲೆ ಚಿತ್ರದ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ. ಆದ್ರೆ ನಿಜ್ವಾಗ್ಲು ಚಿತ್ರದ ಬಗ್ಗೆ ಹೊಸದೇ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿವೆ.

ಈ ಕೆಟ್ಟ ಚಿತ್ರವನ್ನು ನೋಡಿ ನೀವು ಬಯ್ಕೊಳ್ಳೋದು ಗ್ಯಾರಂಟಿ ಅಂತ ಸಾತ್ವಿಕರು ಮಾತಾಡಿಕೊಳ್ತಿದ್ರೆ, ಚಿತ್ರ ಇಷ್ಟು ಲೇಟಾಗೋಕೆ ಬೇರೆ ತರ್ಲೆಗಳು ಕಾರಣ ಅಂತಿದ್ದಾರೆ ನಿರ್ದೇಶಕ ರಾಕೇಶ್. ಏನು ನಿಜವಾದ ಮ್ಯಾಟ್ರು. ನಿಜವಾದ ತರ್ಲೆ ಏನು ಅಂಥ ನೀವೇ ನೋಡ್ತಾ ಹೋಗಿ...

ಸೆನ್ಸಾರ್ ಯಾಕೆ ತಡವಾಯ್ತು

ಚಿತ್ರತಂಡದ ಪ್ರಕಾರ ಸೆನ್ಸಾರ್ ಮಂಡಳಿಯಲ್ಲಿ ಯಾರ್ಯಾರದ್ದೋ ಕಿತಾಪತಿಯಿಂದ ಇಷ್ಟು ಲೇಟಾಯ್ತಂತೆ. ಒಳಗಿರೋರೇ ಯಾರ್ಯಾರೋ ಎಡವಟ್ಟು ಮಾಡಿ ಸಿಕ್ಕಾಪಟ್ಟೆ ಕಟ್ಸ್ ಮ್ಯೂಟ್ಸ್ ಹೇಳಿಸಿದ್ದರಿಂದ ದೆಹಲಿ ಟ್ರಿಬ್ಯೂನಲ್ನಲ್ಲಿ ಮರು ಸೆನ್ಸಾರ್ಗೆ ಹೋಗಬೇಕಾಯ್ತಂತೆ.

ನಿರ್ದೇಶಕರು ಹೇಳಿದ್ದೂ ಸರೀನೇ?

ಹಾಗೆ ನೋಡಿದ್ರೆ ನಿರ್ದೇಶಕರು ಹೇಳ್ತಿರೋದ್ರಲ್ಲೂ ಅರ್ಥವಿದೆ ಅನ್ನಿಸೋದು ಗಾಲಿ, ರೈನ್ ಕೋಟ್ನಂತಹ ಔಟ್ ಅಂಡ್ ಔಟ್ ಡಬ್ಬಲ್ ಮೀನಿಂಗ್ ಸಿನಿಮಾಗಳಿಗೆ ಸುಲಭವಾಗಿ ಸರ್ಟಿಫಿಕೇಟ್ ಕೊಟ್ಟ ಮಂಡಳಿ ಯಾಕೆ ತರ್ಲೆ ನನ್ಮಕ್ಳಿಗೆ ಹೀಗೆ ಮಾಡ್ತು?[ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು]

ಡೌಟಿದ್ರೆ ಟೀಸರ್ ನೋಡಿ

ಇದು ತರ್ಲೆ ನನ್ಮಕ್ಳು ಚಿತ್ರದ ಡೈಲಾಗ್ ಟೀಸರ್. ಇಲ್ಲಿರೋ ಡಬ್ಬಲ್ ಮೀನಿಂಗ್ ಡೈಲಾಗ್ ನೋಡಿದ್ರೆ ಉಪ್ಪಿ-ಜಗ್ಗೇಶ್ ಕೂಡ ಬೆಚ್ಚಿ ಬೀಳ್ತಾರೆ. ಸೋ ಸೆನ್ಸಾರ್ ಮಂಡಳಿ ಮಾಡಿದ್ದೂ ಸರೀನೇ ಅನ್ನಿಸೋದ್ರಲ್ಲೂ ಅರ್ಥವಿದೆ.

ಪ್ರೇಮ್ ಶಿಷ್ಯನ ಚಿತ್ರ

ಇನ್ನು ಯಾವುದೇ ಚಿತ್ರದ ಬಗ್ಗೆ ಗಿಮಿಕ್ ಮಾಡೋದು ಅರ್ಧ ಸತ್ಯ ಹೇಳೀನೂ ದಕ್ಕಿಸಿಕೊಳ್ಳೋದು ನಿರ್ದೇಶಕ ಪ್ರೇಮ್ಗೆ ಮಾತ್ರ ಸಾಧ್ಯ. ಪ್ರೇಮ್ ಶಿಷ್ಯರು ಅಂದಮೇಲೆ ಅವರೂ ಅದನ್ನ ಮಾಡೋದು ಕಾಮನ್ ತಾನೆ ಅಂತಿದ್ದಾರೆ ಗಾಂಧಿನಗರದ ಸಿನಿಪಂಡಿತರು..

ಮುಂದಿನ ತಿಂಗಳು ರಿಲೀಸ್

ಇಷ್ಟೆಲ್ಲಾ ವಿವಾದಗಳಿಂದ ಸುದ್ದಿ ಮಾಡ್ತಿರೋ ತರ್ಲೆ ನನ್ಮಕ್ಳು ಚಿತ್ರ ನವೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಚಿತ್ರದಲ್ಲಿ ಶುಭಾ ಪೂಂಜಾಗೆ ನಾಗಶೇಖರ್, ಜಗ್ಗೇಶ್ ಪುತ್ರ ಯತಿರಾಜ್ಗೆ ನವನಾಯಕಿ ಅಂಜನಾ ದೇಶಪಾಂಡೆ ಜೋಡಿಯಾಗಿದ್ದಾರೆ.

English summary
Kannada comedy flick Tarle Nan Maklu is releasing in November with lots of cuts and mutes. The Kannada cinema knocked the door of Delhi Tribunal as it was not sensored for lot of vulgarity. Now, it is being released with minimum cuts. Shubha Poonja, Nagashekar are in the lead. ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada