Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪವರ್ ಸ್ಟಾರ್' ಜತೆ ಟಾಟಾ 'ಪವರ್' ಯೋಜನೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪವರ್ ಸ್ಟಾರ್' ಚಿತ್ರದ ಜೊತೆ ಟಾಟಾ ಡೊಕೊಮೊ ಪಾಲುದಾರನಾಗಿದೆ. ವಿಶೇಷ ಉತ್ತೇಜನ ಕೊಡುಗೆ ಬಿಡುಗಡೆ, ಕರ್ನಾಟಕದ ಜಿಎಸ್‍ಎಂ ಪ್ರಿಪೇಯ್ಡ್ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಸ್ಟಿಡಿ ಸೌಲಭ್ಯ ನೀಡುವ ಪವರ್ ದರ ಯೋಜನೆ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಟಾಟಾ ಟೆಲಿಸರ್ವೀಸಸ್ ನ ಏಕೀಕೃತ ದೂರಸಂಪರ್ಕ ಬ್ರ್ಯಾಂಡ್ ಟಾಟಾ ಡೊಕೊಮೊ, 14 ರೀಲ್ ಎಂಟರ್ಟೈನ್ಮೆಂಟ್ ಮತ್ತು ಕೊಲ್ಲ ಎಂಟರ್ ಟೈನ್ಮೆಂಟ್ ಬಹು ನಿರೀಕ್ಷಿತ ಚಿತ್ರ 'ಪವರ್ ಸ್ಟಾರ್ 'ಗೆ ಸಂಬಂಧಿಸಿದಂತೆ ಪಾಲುದಾರಿಕೆ ಮಾಡಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹುಭಾಷಾತಾರೆ ತ್ರಿಷಾ ಅಭಿನಯದ ಚಿತ್ರಕ್ಕೆ ಕೆ.ಮಾದೇಶ್ ನಿರ್ದೇಶಕರು.
ಇದೇ ಸಂದರ್ಭದಲ್ಲಿ ಟಾಟಾ ಡೊಕೊಮೊ ವಿಶೇಷ ರಿಚಾರ್ಜ್ ಗಳನ್ನು ತನ್ನ ಜಿಎಸ್‍ಎಂಗ್ರಾಹಕರಿಗೆ ಕರ್ನಾಟಕದಾದ್ಯಂತ ಬಿಡುಗಡೆಗೊಳಿಸಿದೆ. 33 ರೂ. ದರದ ರಿಚಾರ್ಜ್ ಅನ್ನು ಗ್ರಾಹಕರಿಗೆ ಎಲ್ಲ ಎಸ್ಟಿಡಿ ಮೊಬೈಲ್ ಕರೆಗಳನ್ನು 1 ಪೈಸೆ/2 ಸೆಕೆಂಡ್ ದರದಲ್ಲಿ ಮಾಡುವ ಪವರ್ ನೀಡುತ್ತದೆ. ಇದರ ಅವಧಿ 3 ತಿಂಗಳು.
ಟಾಟಾ ಡೊಕೊಮೊ ಕರ್ನಾಟಕದಾದ್ಯಂತ ತನ್ನ ಯೋಜಿತ ಗ್ರಾಹಕರನ್ನು ತಲುಪಲು 360 ಡಿಗ್ರಿ ಪ್ರಚಾರದೊಂದಿಗೆ ಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಟಿವಿ, ರೇಡಿಯೊ, ಬೆಂಗಳೂರು ಮತ್ತು ಕರ್ನಾಟಕದ ಇತರ ನಗರಗಳಲ್ಲಿ, 50,000 ರೀಟೇಲ್ ಮಳಿಗೆಗಳು, ಮೀಟ್ ಅಂಡ್ ಗ್ರೀಟ್ ಸ್ಟಾರ್ಸ್@ಮಾಲ್ಸ್‍ಇನ್ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಈ ಪಾಲುದಾರಿಕೆ ಮೂಲಕ ಪ್ರಚಾರ ನಡೆಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಡೊಕೊಮೊ ಕರ್ನಾಟಕ ವೃತ್ತದ ಮೊಬಿಲಿಟಿ ವಹಿವಾಟು ವಿಭಾಗದ ಮುಖ್ಯಸ್ಥ ರೋಹಿತ್ ಟಂಡನ್, ಪುನೀತ್ ರಾಜ್‍ಕುಮಾರ್ ನಾಯಕನಾಗಿ ಅಭಿನಯಿಸಿರುವ 'ಪವರ್ ಸ್ಟಾರ್ ' ಚಿತ್ರಕ್ಕಾಗಿ 14ರೀಲ್ಸ್ ಎಂಟರ್ಟೈನ್ಮೆಂಟ್ ಜತೆ ಸಹಭಾಗಿತ್ವ ಮಾಡಿಕೊಳ್ಳಲು ಸಂತಸವಾಗುತ್ತಿದೆ.
ಪುನೀತ್ ನಟರಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅತ್ಯಂತ ಪ್ರತಿಭಾನ್ವಿತ ನಟರು. ಅವರ ಚಾರ್ಮ್ ಮತ್ತು ಮಾಸ್ ಅಸ್ತಿತ್ವ ನಮ್ಮ ಬ್ರ್ಯಾಂಡ್ ಗೆ ಸೂಕ್ತವಾಗಿದ್ದು ನಮ್ಮ 1ಪೈಸೆ/2ಸೆಕೆಂಡ್ ಎಸ್ಟಿಡಿ ಮೊಬೈಲ್ ಕರೆ ಕೊಡುಗೆಗೆ ಸೂಕ್ತ ಸಂಪರ್ಕ ಕಲ್ಪಿಸುತ್ತದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಚಿತ್ರದ ನಿರ್ಮಾಪಕ ಪ್ರವೀಣ್ ಟಾಟಾ ಡೊಕೊಮೊದಂಥ ಬೃಹತ್ ಬ್ರ್ಯಾಂಡ್ ಜತೆ ಸಹಭಾಗಿತ್ವ ಮಾಡಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ಕರ್ನಾಟಕದಾದ್ಯಂತ ಸಹ ಪ್ರಚಾರ ನಡೆಸಲಿರುವ ಬ್ರ್ಯಾಂಡ್ ಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಸಂವಹನ ಪಾಲುದಾರನಾಗಿ ಟಾಟಾ ಡೊಕೊಮೊ ನಮ್ಮ ಚಲನಚಿತ್ರವನ್ನು ಕರ್ನಾಟಕದ ಹೆಚ್ಚು ಜನರಿಗೆ ತಲುಪಲು ನಾನಾ ಮಾಧ್ಯಮಗಳ ಪ್ರಚಾರದ ಮೂಲಕ ಸಹಾಯ ಮಾಡುತ್ತದೆ ಎಂದರು.
ಟಾಟಾ ಟೆಲಿಸರ್ವೀಸಸ್ ಕುರಿತು: ಟಾಟಾ ಟೆಲಿಸರ್ವೀಸಸ್, ದೇಶದ ಬೃಹತ್ ಖಾಸಗಿ ದೂರ ಸಂಪರ್ಕ ಸೇವಾ ಪ್ರವರ್ತಕ ಸಂಸ್ಥೆಯಾಗಿದ್ದು ದೇಶದಾದ್ಯಂತ ಸೇವೆ ಹೊಂದಿದೆ. ದೇಶದ 19 ದೂರಸಂಪರ್ಕ ವೃತ್ತಗಳಲ್ಲಿ ಅಸ್ತಿತ್ವ ಹೊಂದಿದೆ. ಕಂಪನಿ ಏಕೀಕೃತ ಬ್ರ್ಯಾಂಡ್ ಟಾಟಾ ಡೊಕೊಮೊದೊಂದಿಗೆ ಸೇವೆ ನೀಡುತ್ತಿದೆ.
4,50,000 ನಗರ ಹಾಗೂ ಹಳ್ಳಿಗಳಲ್ಲಿ ಅಸ್ತಿತ್ವ ಹೊಂದಿದೆ. ಕಂಪನಿ, ಜಪಾನ್ ಮೂಲದ ದೂರಸಂಪರ್ಕ ದಿಗ್ಗಜ ಎನ್ಟಿಟಿಡಿ ಡೊಕೊಮೊ ಸಹಭಾಗಿತ್ವದೊಂದಿಗೆ 2008ರ ನವೆಂಬರ್ ನಲ್ಲಿ ಜಿಎಸ್‍ಎಂ ಸೇವೆಯನ್ನು ಆರಂಭಿಸಿತು. ಟಾಟಾ ಟೆಲಿಸರ್ವೀಸಸ್, ಪ್ರಸ್ತುತ 18 ದೂರ ಸಂಪರ್ಕ ವಲಯಗಳಲ್ಲಿ ಡೊಕೊಮೊ ಬ್ರ್ಯಾಂಡ್ ನಲ್ಲಿ ಜಿಎಸ್‍ಎಂ ಸೇವೆ ಒದಗಿಸುತ್ತಿದೆ. ದೇಶದ ಉಳಿದ ಪ್ರದೇಶಗಳನ್ನು ಶೀಘ್ರದಲ್ಲಿ ಪ್ರವೇಶಿಸಲಿದೆ.
ಇತ್ತೀಚೆಗೆ ರೀಟೇಲ್ ಕ್ಷೇತ್ರದ ಫ್ಯೂಚರ್ ಸಮೂಹದ ಸಹಭಾಗಿತ್ವದೊಂದಿಗೆ ಜಿಎಸ್‍ಎಂ ವಲಯದಲ್ಲಿ ಟಿ24 ವೇದಿಕೆಯನ್ನು ಬಿಡುಗಡೆಗೊಳಿಸಿದೆ. ಮೊಬೈಲ್ ಸೇವೆ, ವೈರ್ ಲೆಸ್ ಡೆಸ್ಕ್ ಟಾಪ್ ಸೇವೆ, ಸಾರ್ವಜನಿಕ ಬೂಥ್ ಮತ್ತು ವೈರ್ ಲೈನ್ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿ ಕುರಿತ ಹೆಚ್ಚಿನ ಮಾಹಿತಿಗೆ