For Quick Alerts
  ALLOW NOTIFICATIONS  
  For Daily Alerts

  50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್

  By Suneetha
  |

  'ವಿಕ್ಟರಿ', ಮತ್ತು 'ರನ್ನ'ದಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ನಂದ ಕಿಶೋರ್ ಅವರ ಸೋದರ ತರುಣ್ ಸುದೀರ್ ಅವರು ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ ಬಹು ತಾರಾಗಣ ಇರುವ 'ಚೌಕ' ಚಿತ್ರದ ಶೂಟಿಂಗ್ ಭರಭರನೇ ಸಾಗುತ್ತಿದೆ.

  ಅಂದಹಾಗೆ 'ಚೌಕ' ಚಿತ್ರಕ್ಕೆ ಬರೋಬ್ಬರಿ ಟಾಪ್ 25 ತಂತ್ರಜ್ಞರು ಕೆಲಸ ಮಾಡುತ್ತಿರುವುದು ಭಾರತೀಯ ಚಿತ್ರರಂಗ ಕ್ಷೇತ್ರದಲ್ಲಿ ಇದೇ ಮೊದಲು. ಒಂದೇ ಚಿತ್ರಕ್ಕೆ ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ಐವರು ಸಂಗೀತ ನಿರ್ದೇಶಕರು, ಐವರು ಕಲಾ ನಿರ್ದೇಶಕರು ಸೇರಿದಂತೆ ಐವರು ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.[ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ]

  ಪರದೆ ಮೇಲಿನ ಹೀರೋಗಳಂತೆ ಇವರೆಲ್ಲಾ ಪರದೆ ಹಿಂದಿನ ಹೀರೋಗಳಾಗಿ ಕೆಲಸ ಮಾಡಲಿದ್ದಾರೆ ಎಂದು ನಿರ್ದೇಶಕ ತರುಣ್ ಸುಧೀರ್ ಅವರು ಹೇಳಿದ್ದಾರೆ. ನಟ ಕಮ್ ನಿರ್ದೇಶಕ 'ಕುಳ್ಳ' ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಹಲವಾರು ವಿಶೇಷಗಳಿವೆ.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

  ಬಹು ತಾರಾಗಣ ಇರುವ 'ಚೌಕ' ಚಿತ್ರದ ವಿಶೇಷತೆಗಳ ಸಂಪೂರ್ಣ ಮಾಹಿತಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸುತ್ತಾರೆ

  ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸುತ್ತಾರೆ

  'ಚೌಕ' ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ್, ದೂದ್ ಪೇಡಾ ದಿಗಂತ್, ವಿಜಯ ರಾಘವೇಂದ್ರ, ಮತ್ತು ವಿಶೇಷ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ. ನಟಿ ಭಾವನ, ನಟಿ ಪ್ರಿಯಾಮಣಿ, ನಟಿ ದೀಪಾ ಸನ್ನಿಧಿ, ಮತ್ತು ಐಂದ್ರಿತಾ ರೇ ಅವರು ಇವರಿಗೆ ನಾಯಕಿಯರಾಗಿ ಮಿಂಚಲಿದ್ದಾರೆ.

  5 ಛಾಯಾಗ್ರಾಹಕರು

  5 ಛಾಯಾಗ್ರಾಹಕರು

  'ಚೌಕ' ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ಛಾಯಾಗ್ರಾಹಕರಾದ ಸತ್ಯ ಹೆಗ್ಡೆ, ಎಸ್ ಕೃಷ್ಣ, ಶೇಖರ್ ಚಂದ್ರ, ಸಂತೋಷ್ ರೈ ಪಾತಾಜೆ, ಮತ್ತು ಸುಧಾಕರ್ ಎಸ್ ರಾಜ್ ಮುಂತಾದವರು ವಿವಿಧ ವಾತಾವರಣ ನೋಡಿಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಲಿದ್ದಾರೆ.

  5 ಸಂಗೀತ ನಿರ್ದೇಶಕರು

  5 ಸಂಗೀತ ನಿರ್ದೇಶಕರು

  ನಿರ್ದೇಶಕ ತರುಣ್ ಅವರು ತಮ್ಮ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಗುರು ಕಿರಣ್, ವಿ ಹರಿಕೃಷ್ಣ, ಅರ್ಜುನ್ ಜನ್ಯ, ಅನೂಪ್ ಸೀಳಿನ್ ಮತ್ತು ವಿ.ಶ್ರೀಧರ್ ಅವರನ್ನು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ಅವರು ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿದ್ದಾರೆ.

  5 ಸಂಭಾಷಣೆಕಾರರು

  5 ಸಂಭಾಷಣೆಕಾರರು

  ಈ ಐವರು ನಟರಿಗಾಗಿ ಐವರು ಸಂಭಾಷಣೆಕಾರರು ಸಂಭಾಷಣೆ ಬರೆಯುತ್ತಿದ್ದಾರೆ. ವಿಜಯ ರಾಘವೇಂದ್ರ ಅವರಿಗಾಗಿ ಎಪಿ ಅರ್ಜುನ್, ದಿಗಂತ್ ಅವರಿಗೆ ಸಿಂಪಲ್ ಸುನಿ, ಪ್ರಜ್ವಲ್ ದೇವರಾಜ್ ಅವರಿಗೆ ಅನಿಲ್ ಕುಮಾರ್, ಲವ್ಲಿ ಸ್ಟಾರ್ ಪ್ರೇಮ್ ಗೆ ಎವಿ ಚಿಂತನ್ ಅವರು ಸಂಭಾಷಣೆ ಬರೆಯುತ್ತಿದ್ದಾರೆ.

  ಕಲಾ ನಿರ್ದೇಶಕರು

  ಕಲಾ ನಿರ್ದೇಶಕರು

  ಚಿತ್ರಕ್ಕಾಗಿ ಐವರು ಕಲಾ ನಿರ್ದೇಶಕರು ಕೆಲಸ ಮಾಡಲಿದ್ದಾರೆ. ನಟ ಅರುಣ್ ಸಾಗರ್, ಮೋಹನ್ ಬಿ.ಕೆರೆ, ರವಿ ಸಂತೆ ಹೈಕ್ಲು, ಶಿವಕುಮಾರ್ ಮತ್ತು ಹೊಸಮನೆ ಮೂರ್ತಿ ಕಲಾ ನಿರ್ದೇಶಕರು ಕೆಲಸ ಮಾಡುತ್ತಾರೆ. ಅಲ್ಲದೇ ಕೆ.ಎಂ ಪ್ರಕಾಶ್ ಅವರು ಚಿತ್ರವನ್ನು ಎಡಿಟ್ ಮಾಡಲಿದ್ದಾರೆ.

  ದ್ವಾರಕೀಶ್ ಅವರ 50ನೇ ಚಿತ್ರ

  ದ್ವಾರಕೀಶ್ ಅವರ 50ನೇ ಚಿತ್ರ

  'ಚೌಕ' ಸಿನಿಮಾ ಕುಳ್ಳ ದ್ವಾರಕೀಶ್ ಅವರ ಕನಸಿನ ಚಿತ್ರದ ಜೊತೆಗೆ, ದ್ವಾರಕೀಶ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಮೂಡಿಬರುತ್ತಿರುವ 50ನೇ ಚಿತ್ರವಾಗಿದ್ದು, ಈಗಾಗಲೇ ಸುಮಾರು 80ರಷ್ಟು ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿದೆ.

  English summary
  Debutant director Tarun Sudhir has roped in 25 technicians for the film. Kannada Actor Prem Kumar, Kannada Actor Vijay Raghavendra, Actor Prajwal Devaraj in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X