For Quick Alerts
  ALLOW NOTIFICATIONS  
  For Daily Alerts

  'ಕೃಷ್ಣ' ಅಜೇಯ್ ರಾವ್ ಮುಂದಿನ ಸಿನಿಮಾ ಯಾವುದು.?

  By Harshitha
  |

  'ರುಕ್ಕು' ಜೊತೆ ಡ್ಯುಯೆಟ್ ಹಾಡಿದ ಬಳಿಕ ಸ್ಯಾಂಡಲ್ ವುಡ್ 'ಕೃಷ್ಣ' ಅಜೇಯ್ ರಾವ್ 'ಅಮರ್ ಅಕ್ಬರ್ ಆಂಟನಿ' ಚಿತ್ರಕ್ಕೆ ಜೈ ಅಂದಿದ್ದರು. ಈಗ ಹೊಸ ಚಿತ್ರವೊಂದಕ್ಕೆ ಅಜೇಯ್ ರಾವ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಆ ಚಿತ್ರ ಯಾವುದು.? ಅಂತ ಕೇಳಿದ್ರೆ, ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಆದ್ರೆ ನಿರ್ದೇಶನ ಮಾಡುವುದು ತೇಜಸ್ ಎಂಬುದು ಮಾತ್ರ ಪಕ್ಕಾ ನ್ಯೂಸ್. [ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

  ಈ ಹಿಂದೆ 'ಲವ್ಲಿ ಸ್ಟಾರ್' ಪ್ರೇಮ್ ಹಾಗೂ ಅಮೂಲ್ಯ ನಟಿಸಿದ್ದ 'ಮಳೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ತೇಜಸ್, ಈಗ ಅಜೇಯ್ ರಾವ್ ಗಾಗಿ ಚಿತ್ರ ನಿರ್ದೇಶನ ಮಾಡಲಿದ್ದಾರೆ.

  ಇನ್ನೂ ಹೆಸರಿಡದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಈಗಾಗಲೇ ಭರದಿಂದ ಸಾಗುತ್ತಿದೆ. ಆಗಸ್ಟ್ ವೇಳೆಗೆ ಶೂಟಿಂಗ್ ಶುರುವಾಗಲಿದೆ. ಅಷ್ಟರೊಳಗೆ 'ಕೃಷ್ಣ'ನ ಗೋಪಿಕೆ ಯಾರು ಎಂಬುದು ಬಹಿರಂಗವಾಗಲಿದೆ.

  English summary
  Kannada Director Tejas of 'Male' fame is all set to direct 'Krishna' Ajay Rao (Ajai Rao) in his next. The movie is yet-to-be-titled and will go on floors by August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X