»   » ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಲ್ಲಿ ನಟಿ ತೇಜಸ್ವಿನಿ

ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಲ್ಲಿ ನಟಿ ತೇಜಸ್ವಿನಿ

Posted By:
Subscribe to Filmibeat Kannada

'ಗಜ', 'ಗೂಳಿಹಟ್ಟಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ 'ಲಂಗ ದಾವಣಿ ತೊಟ್ಟ ಗೌರಮ್ಮ'ನ ಪಾತ್ರ ನಿರ್ವಹಿಸಿದ್ದ ನಟಿ ತೇಜಸ್ವಿನಿ ಪ್ರಕಾಶ್ ಈಗ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ತೆರೆ ಮೇಲೆ ಮಿಂಚಲು ತುದಿಗಾಲಲ್ಲಿ ನಿಂತಿದ್ದಾರೆ.

ಹೌದು, ಮಾರ್ಡನ್ ಲುಕ್ ನಲ್ಲಿ ನಟಿ ತೇಜಸ್ವಿನಿ ಪ್ರಕಾಶ್ ಕಾಣಿಸಿಕೊಂಡಿರುವ 'ನಿತ್ಯ ಜೊತೆ ಸತ್ಯ' ಸಿನಿಮಾ ಇದೇ ವಾರ ರಿಲೀಸ್ ಆಗಲಿದೆ.

tejaswini-prakash-starrer-nitya-jote-satya-releasing-on-march-25th

'ನಿತ್ಯ ಜೊತೆ ಸತ್ಯ' ಲವ್ ಸ್ಟೋರಿ ಆಗಿದ್ದರೂ ನಾಯಕಿ ಪ್ರಧಾನ ಸಿನಿಮಾ. ನಿರ್ದೇಶಕ ಶ್ರೀನಾಗ್ ಕಥೆ ಹೇಳಿದ ಕೂಡಲೆ ಓಕೆ ಅಂತ 'ನಿತ್ಯ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ತೇಜಸ್ವಿನಿಗೆ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಂಬಿಕೆ ಇದೆ.

ಇದುವರೆಗೂ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ತೇಜಸ್ವಿನಿಗೆ 'ನಿತ್ಯ ಜೊತೆ ಸತ್ಯ' ಸಿನಿಮಾ ಹೊಸ ಇಮೇಜ್ ನೀಡುವ ಭರವಸೆ ವ್ಯಕ್ತಪಡಿಸುತ್ತಾರೆ.

tejaswini-prakash-starrer-nitya-jote-satya-releasing-on-march-25th

ಅಂದ್ಹಾಗೆ, 'ನಿತ್ಯ ಜೊತೆ ಸತ್ಯ' ಚಿತ್ರಕ್ಕೆ ಮನೀಶ್ ಬಾಬು ನಾಯಕ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಯಶಸ್ಸಿಗಾಗಿ ಹಾತೊರೆಯುತ್ತಿರುವ ನಟಿ ತೇಜಸ್ವಿನಿ ಅಭಿನಯದ 'ನಿತ್ಯ ಜೊತೆ ಸತ್ಯ' ಮಾರ್ಚ್ 25 ರಂದು ತೆರೆಗೆ ಬರಲಿದೆ. ನೋಡಲು ನೀವು ರೆಡಿಯಾಗಿ.

English summary
Kannada Actress Tejaswini Prakash starrer 'Nitya Jote Satya' is all set to release on March 25th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada