For Quick Alerts
  ALLOW NOTIFICATIONS  
  For Daily Alerts

  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ಸೌಜನ್ಯ

  |

  ಕನ್ನಡದ ಕಿರುತೆರೆ ನಟಿ ಸೌಜನ್ಯ ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ನಟಿ ಸೌಜನ್ಯ ವಾಸವಾಗಿದ್ದರು. ಕಳೆದ ಹಲವು ದಿನಗಳಿಂದಲೂ ಇಬ್ಬರು ಒಟ್ಟಿಗೆ ಇದ್ದರು. ಆದರೆ ಇಂದು (ಸೆಪ್ಟೆಂಬರ್ 30) ಬೆಳಗ್ಗೆ ಬಾಯ್‌ಫ್ರೆಂಡ್ ತಿಂಡಿ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸೌಜನ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

  ನಟನಿಂದ ಹಿಂಸೆ, ಆತ್ಮಹತ್ಯೆಗೆ ಯತ್ನಿಸಿದ 'ಮಿಸ್ಟರ್ ಇಂಡಿಯಾ'ನಟನಿಂದ ಹಿಂಸೆ, ಆತ್ಮಹತ್ಯೆಗೆ ಯತ್ನಿಸಿದ 'ಮಿಸ್ಟರ್ ಇಂಡಿಯಾ'

  ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದಾರೆ.

  ಪೊಲೀಸರಿಗೆ ನಟಿ ಸೌಜನ್ಯ ಅವರದ್ದು ಎನ್ನಲಾದ ಡೆತ್‌ನೋಟ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ನಾಲ್ಕು ಪುಟಗಳ ಈ ಡೆತ್‌ನೋಟ್‌ನಲ್ಲಿ 'ನನ್ನ ಸಾವಿಗೆ ನಾನೇ ಕಾರಣ' ಎಂದು ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

  ಆರೋಗ್ಯವಾಗಿ ಬಹಳ ಕಷ್ಟದಲ್ಲಿದ್ದೆ ಎಂದು ಬರೆದಿರುವ ನಟಿ ಸೌಜನ್ಯ ನಿಜಕ್ಕೂ ಆಕೆಗೆ ಏನಾಗಿತ್ತು ಎನ್ನುವ ಬಗ್ಗೆ ತಿಳಿಸಿಲ್ಲ ಎನ್ನಲಾಗಿದೆ. ಇನ್ನು ತಂದೆ, ತಾಯಿ ಹಾಗು ಅಣ್ಣ ನನ್ನನ್ನು ಕ್ಷಮಿಸಿ ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.

  ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದ ಸೌಜನ್ಯ ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರಂತೆ. ಸೀರಿಯಲ್ ಜೊತೆಗೆ ಚೌಕಟ್ಟು ಹಾಗೂ ಫನ್ ಎಂಬ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ ಎಂದು ತಿಳಿದು ಬಂದಿದೆ.

  ಡೆತ್‌ನೋಟ್‌ನಲ್ಲಿ ಏನಿದೆ?
  ''ನನ್ನ ಗೆಲುವಿಗೆ ಸಹಾಯ‌ ಮಾಡಿ ಎಲ್ಲರಿಗೂ ಧನ್ಯವಾದಗಳು. ಜೀವನದಲ್ಲಿ ತುಂಬಾನೆ ಜವಬ್ದಾರಿ ಇತ್ತು. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನಾನು ಮಾತು ಕೊಟ್ಟ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಐ ಲವ್ ಯು ಪಪ್ಪ, ಅಮ್ಮ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಈ ಸ್ಥಿತಿಯಲ್ಲಿ ಮನೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ನನಗೆ ಮುಂದೆ ಒಳ್ಳೆಯ ಭವಿಷ್ಯ ಇತ್ತು ಅನ್ನೋದು ಗೊತ್ತಿದೆ, ಆದರೂ ಪರವಾಗಿಲ್ಲ. ನನ್ನ‌ ಸಾವಿನ ಬಗ್ಗೆ ಹಾಗೂ ಬರೆದಿರುವ ಪತ್ರವನ್ನ ಯಾವುದೇ ಮಾಧ್ಯಮಗಳಿಗೂ ಕೊಡಬೇಡಿ'' ಎಂದು ನಟಿ ಸೌಜನ್ಯ ಮನವಿ ಮಾಡಿದ್ದಾರೆ.

  English summary
  Television Actress Soujanya committed suicide by writing a Death note.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X