For Quick Alerts
  ALLOW NOTIFICATIONS  
  For Daily Alerts

  ಪ್ರಾಣಾಪಾಯದಿಂದ ಪಾರಾದ 'ಲೆಜೆಂಡ್' ಬಾಲಯ್ಯ

  By ಸೋನು
  |

  ಟಾಲಿವುಡ್ ನ ಖ್ಯಾತ ನಟ ಕಮ್ ರಾಜಕೀಯ ವ್ಯಕ್ತಿ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣ ಮಾಡುತ್ತಿದ್ದ ಸಫಾರಿ ಕಾರು ಬಾಗೇಪಲ್ಲಿ ಬಳಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಗಾಯಗೊಂಡ ನಟ ಬಾಲಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಟ ಬಾಲಕೃಷ್ಣ ಅವರು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪರಗೋಡು ಎಂಬಲ್ಲಿ ಕಾರಿನ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿದೆ.[ಮೈಸೂರು ಬಳಿ ದ್ವಿಚಕ್ರ ವಾಹನಕ್ಕೆ ಜಗ್ಗೇಶ್ ಕಾರು ಡಿಕ್ಕಿ]

  ಕೆಲವು ಮುಖ್ಯವಾದ ಕೆಲಸದ ಪರವಾಗಿ ಬೆಂಗಳೂರಿಗೆ ಆಗಮಿಸಿದ್ದ ನಟ ಬಾಲಕೃಷ್ಣ ಅವರು ಕೆಲಸ ಮುಗಿದ ತಕ್ಷಣ ಹೈದರಾಬಾದ್ ವಿಮಾನ ಹಿಡಿಯಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಾವೇ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇಂತಹ ಅವಘಡ ಸಂಭವಿಸಿದೆ.[ಕಾರು ಅಪಘಾತ: ನಟಿ ಉಮಾಶ್ರೀ ಪಾರು]

  ಕಾರಿನ ಹಿಂದಿನ ಟೈರ್ ಒಡೆದು ಕಾರು ಸಂಫೂರ್ಣ ಬ್ಯಾಲೆನ್ಸ್ ತಪ್ಪಿದಾಗ ನಟ ಬಾಲಕೃಷ್ಣ ಅವರು ಎದುರುಗಡೆ ಬರುತ್ತಿರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರೋಡ್ ಪಕ್ಕದಲ್ಲಿರುವ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರಣ ಈ ಅಪಘಾತ ನಡೆದಿದೆ. ಬಾಲಯ್ಯ ಅವರ ಕಾರು ಮಾತ್ರ ಸಂಫೂರ್ಣ ನಜ್ಜು-ಗುಜ್ಜಾಗಿದೆ.

  ಈ ಘಟನೆಯಲ್ಲಿ ನಟ ಬಾಲಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ನಟ ಚೇತರಿಸಿಕೊಂಡಿದ್ದು, ಅವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

  ಈಗಾಗಲೇ ಘಟನಾ ಸ್ಥಳಕ್ಕೆ ಆಗಮಿಸಿರುವ ಬಾಗೇಪಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  English summary
  Telugu Actor Nandamuri Balakrishna has had an accident. He has a narrow escape when the car he was traveling hit the road divider in route to Bangalore. The mishap occurred near Bhagepally.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X