»   » ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಮತ್ತೋರ್ವ ನಟನ ಎಂಟ್ರಿ.!

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಮತ್ತೋರ್ವ ನಟನ ಎಂಟ್ರಿ.!

Posted By:
Subscribe to Filmibeat Kannada

ತೆಲುಗು ಸಿನಿಲೋಕದ ದಿಗ್ಗಜ, ಅಭಿಮಾನಿಗಳ ಪಾಲಿನ ಮೆಗಾಸ್ಟಾರ್ ಚಿರಂಜೀವಿಯ ಅವರ ಕುಟುಂಬದ ಹಲವು ಸದಸ್ಯರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಚಿರು ಫ್ಯಾಮಿಲಿಯಿಂದ ಮತ್ತೋರ್ವ ನಟ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ, ಚಿರಂಜೀವಿ, ಸಹೋದರರಾದ ಪವನ್ ಕಲ್ಯಾಣ್, ನಾಗೇಂದ್ರ ಬಾಬು ಮತ್ತು ನಾಗೇಂದ್ರ ಬಾಬು ಪುತ್ರ ವರುಣ್ ತೇಜ, ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ಚಿರು ಸಹೋದರಿ ಮಗನಾದ ಸಾಯಿ ಧರಮ್ ತೇಜ, ಮತ್ತು ಅಲ್ಲು ಅರ್ಜುನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಈಗ ಚಿರಂಜೀವಿಯ ಅಳಿಯನ ಸರದಿ. ಹೌದು, ಮೆಗಾಸ್ಟಾರ್ ಅಳಿಯ ಕಲ್ಯಾಣ್ ಬಣ್ಣ ಹಚ್ಚುತ್ತಿದ್ದಾರೆ. ಯಾವಾಗ ಎಂದು ತಿಳಿಯಲು ಮುಂದೆ ಓದಿ......

ಚಿರು ಅಳಿಯ ಚಿತ್ರರಂಗಕ್ಕೆ.!

ಚಿರಂಜೀವಿ ಅವರ ಕಿರಿ ಮಗಳು ಶ್ರೀಜಾ ಅವರ ಪತಿ ಕಲ್ಯಾಣ್ ಈಗ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಕಳೆದ ವರ್ಷವಷ್ಟೇ ಶ್ರೀಜಾ ಮತ್ತು ಕಲ್ಯಾಣ್ ಮದುವೆಯಾಗಿದ್ದರು.

ಚಿರು ಬೆಂಬಲವಿದೆ

ಚಿರಂಜೀವಿ ಅವರ ಅಳಿಯ ಸಿನಿಮಾದಲ್ಲಿ ಅಭಿನಯಿಸಲು ಮೆಗಾಸ್ಟಾರ್ ಸಂಪೂರ್ಣ ಬೆಂಬಲವಿದೆ. ಹೀಗಾಗಿ, ಸ್ವತಃ ಚಿರಂಜೀವಿಯೇ ಕಲ್ಯಾಣ್ ಗೆ ಟ್ರೈನಿಂಗ್ ಕೊಡಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮೂರು ತಿಂಗಳು ತರಬೇತಿ

ಅಂದ್ಹಾಗೆ, ಕಲ್ಯಾಣ್ ಅವರು ಮೂರು ತಿಂಗಳು ವಿಶಾಖಪಟ್ಟಣದಲ್ಲಿ ತರಬೇತಿ ಪಡೆಯುತ್ತಿದ್ದಾರಂತೆ. ವಾಯ್ಸ್, ಎಕ್ಸ್ ಪ್ರೆಶನ್, ಡೈಲಾಗ್, ಹೀಗೆ ಎಲ್ಲ ಅಂಶಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದ್ದಾರಂತೆ.

'ಸ್ಟಾರ್ ಮೇಕರ್' ಸತ್ಯರಿಂದ ಟ್ರೈನಿಂಗ್

ಪವನ್ ಕಲ್ಯಾಣ್, ರವಿತೇಜ, ಜಯಂ ರವಿ, ವರುಣ್ ತೇಜ್ ಸೇರಿದಂತೆ ತೆಲುಗಿನಲ್ಲಿ ಹಲವು ನಟರಿಗೆ ತರಬೇತಿ ಕೊಟ್ಟಿರುವ ಸತ್ಯಾನಂದ್ ಅವರ ಬಳಿ, ಕಲ್ಯಾಣ್ ಅವರು ನಟನೆ ತರಬೇತಿ ಪಡೆಯಲಿದ್ದಾರಂತೆ.

ಮೆಗಾಸ್ಟಾರ್ ಫ್ಯಾಮಿಲಿ

ಚಿರಂಜೀವಿ, ಪವನ್ ಕಲ್ಯಾಣ್, ನಾಗೇಂದ್ರ ಬಾಬು, ವರುಣ್ ತೇಜ, ಸಾಯಿ ಧರಮ್ ತೇಜ, ಅಲ್ಲು ಅರವಿಂದ್, ಅಲ್ಲು ಅರ್ಜುನ್, ಅಲ್ಲು ಸಿರಿಶ್, ನಿಹರಿಕಾ ಕೊಂಡೇಲಾ ಸೇರಿದಂತೆ ಹಲವರು ಕಲಾವಿದರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

English summary
Kalyan, who married chiranjeevi’s daughter Sreeja last year, has undergone a three-month acting course in Vizag.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada