»   » ಮತ್ತೆ ಕನ್ನಡದತ್ತ ಮುಖ ಮಾಡಿದ ತೆಲುಗಿನ ಖ್ಯಾತ ಖಳನಟ

ಮತ್ತೆ ಕನ್ನಡದತ್ತ ಮುಖ ಮಾಡಿದ ತೆಲುಗಿನ ಖ್ಯಾತ ಖಳನಟ

Posted By:
Subscribe to Filmibeat Kannada

ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರು ತಮಿಳು, ತೆಲುಗು, ಮಲಯಾಳಂ ಕನ್ನಡ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹೀರೋ ಶೇಡ್ ಬಿಟ್ಟು ವಿಲನ್ ಶೇಡ್ ನಲ್ಲಿಯೇ ಹೆಚ್ಚಾಗಿ ಖ್ಯಾತಿ ಪಡೆದಿದ್ದಾರೆ.

ತೆಲುಗು ನಟ ಬಾಲಕೃಷ್ಣ ಅವರ 'ಲೆಜೆಂಡ್' ಚಿತ್ರದಲ್ಲಿ ಖಳನಟನಾಗಿ ಮಿಂಚಿದ ನಂತರ ಹಲವಾರು ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿಯೇ ಅಭಿನಯಿಸಿ ಕ್ಲಿಕ್ ಆದರು.[ಬಚ್ಚನ್ ಚಿತ್ರ ವಿಮರ್ಶೆ: ಹಂಡ್ರಡ್ ಡೇಸ್ ಗ್ಯಾರಂಟಿ]

Telugu Actor Jagapathi Babu returns to Kannada movie

ಅದೇ ನಟ ಇದೀಗ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆ 'ಬಚ್ಚನ್' ಚಿತ್ರದಲ್ಲಿ ಮಿಂಚಿದ ನಂತರ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಪಡೆದುಕೊಂಡು ಸ್ಯಾಂಡಲ್ ವುಡ್ ನಲ್ಲಿ ವಿಜೃಂಭಿಸಲಿದ್ದಾರೆ.

ಅದರ ಬೆನ್ನಲ್ಲೇ ಮತ್ತೊಂದು ಹೊಸ ಕನ್ನಡ ಚಿತ್ರದಲ್ಲಿ ಮಿಂಚಲಿದ್ದು, 'ಜೆಸ್ಸಿ' [ವಿಮರ್ಶೆ; 'ಜೆಸ್ಸಿ' ಸುಂದರ, ಅಷ್ಟೇ ಭಯಾನಕ ಪ್ರೇಮ ಕಾವ್ಯ!] ಖ್ಯಾತಿಯ ನಟ ಧನಂಜಯ್ ಅವರ ಐತಿಹಾಸಿಕ ಕಥೆಯಾಧರಿತ 'ವಿಜಯಾದಿತ್ಯ' ಎಂಬ ಚಿತ್ರದಲ್ಲಿ ಖಳ ನಟನಾಗಿ ಶ್ರೀಮಂತ ಉದ್ಯಮಿಯ ಪಾತ್ರ ಮಾಡಲಿದ್ದಾರೆ.

Telugu Actor Jagapathi Babu returns to Kannada movie

ನಿರ್ದೇಶಕ ನಿರ್ಭಯ್ ಚಕ್ರವರ್ತಿ ಆಕ್ಷನ್-ಕಟ್ ಹೇಳುತ್ತಿರುವ 'ವಿಜಯಾದಿತ್ಯ' ಚಿತ್ರದ ಫೋಟೋ ಶೂಟ್ ಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಜಗಪತಿ ಬಾಬು ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.[ನಿಖಿಲ್ 'ಜಾಗ್ವಾರ್'ನಲ್ಲಿ ತೆಲುಗಿನ ಜಗಪತಿ ಬಾಬು ಮಿಂಚಿಂಗು]

Telugu Actor Jagapathi Babu returns to Kannada movie

"ನಿರ್ಭಯ್ ಪರಿಚಯ ನನಗಿರಲಿಲ್ಲ, ನನ್ನ ಗೆಳೆಯನ ಮೂಲಕ ಪರಿಚಯವಾಗಿದ್ದು. ಆದರೆ ಅವರನ್ನು ಭೇಟಿ ಮಾಡಿದ ತಕ್ಷಣ ನಮ್ಮಿಬ್ಬರ ಆಪ್ತತೆ ಬೆಳೆದು ಅವರ ಸಿನಿಮಾದಲ್ಲಿ ನಾನೇ ನಟಿಸಬೇಕೆಂದು ಕೋರಿಕೊಂಡ ಕಾರಣ ನಾನು ಈ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡೆ' ಎನ್ನುತ್ತಾರೆ ಜಗಪತಿ ಬಾಬು.

Telugu Actor Jagapathi Babu returns to Kannada movie

ಐತಿಹಾಸಿಕ ಕಥೆಯುಳ್ಳ ಕನ್ನಡದ 'ವಿಜಯಾದಿತ್ಯ' ಸಿನಿಮಾ ತೆಲುಗಿನ 'ಬಾಹುಬಲಿ'ಯಷ್ಟೇ ಮಹತ್ವವನ್ನು ಹೊಂದಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಿ ಶೂಟಿಂಗ್ ಆರಂಭಿಸಲಿದೆ. ಚಿತ್ರದಲ್ಲಿ ಧನಂಜಯ್ ಅವರಿಗೆ ನಾಯಕಿ ನಟಿಯಾಗಿ ಪಾರುಲ್ ಯಾದವ್ ಅವರು ಕಾಣಿಸಿಕೊಳ್ಳಲಿದ್ದಾರೆ.

English summary
Telugu Actor Jagapathi Babu who made his Kannada film debut with Sudeep's 'Bachchan', is back. The actor has been roped in to play a pivotal character in the Kannada movie 'Vijayaditya'. Kannada actor Dananjay, Kannada Actress Parul Yadav in the lead role. The movie is directed by Nirbhay Chakravarthi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada