For Quick Alerts
  ALLOW NOTIFICATIONS  
  For Daily Alerts

  ನಮ್ಮನ್ನೇ ಹೊಡೆದುಹಾಕಿ ಮುಂದೆ ಹೋದ್ರು; ಫಿಲ್ಮ್‌ಫೇರ್‌ನಲ್ಲೂ 'ಕಾಂತಾರ' ಹೊಗಳಿದ ತೆಲುಗು ನಟ ನಾನಿ!

  |

  ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಇಡೀ ಭಾರತ ತಿರುಗಿ ನೋಡುವಂತ ಚಿತ್ರಗಳನ್ನು ಕನ್ನಡ ಚಿತ್ರರಂಗ ನಿರ್ಮಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆಜಿಎಫ್, ಗರುಡ ಗಮನ ವೃಷಭ ವಾಹನ ರೀತಿಯ ಚಿತ್ರಗಳು ಕಳೆದ ವರ್ಷ ಇತರೆ ಚಿತ್ರರಂಗದ ಅಭಿಮಾನಿಗಳು ಕನ್ನಡ ಚಿತ್ರವನ್ನು ಹೊಗಳುವ ಹಾಗೆ ಮಾಡಿದ್ದವು. ಈ ವರ್ಷವೂ ಸಹ ಅಂತಹ ಚಿತ್ರಗಳನ್ನು ಕನ್ನಡ ಚಿತ್ರರಂಗ ನಿರ್ಮಿಸುತ್ತಿದ್ದು, ಈ ವರ್ಷ ಮೊದಲಿಗೆ ಕೆಜಿಎಫ್ ಚಾಪ್ಟರ್ 2 ಮೂಲಕ ಬಾಕ್ಸ್ ಆಫೀಸ್ ನಡುಗಿಸಿದ್ದ ಹೊಂಬಾಳೆ ಫಿಲ್ಮ್ಸ್ ಕಾಂತಾರ ಮೂಲಕ ಮತ್ತೊಮ್ಮೆ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದೆ.

  ಈ ವರ್ಷ ಕಾಂತಾರ ಮಾತ್ರವಲ್ಲದೇ ಜೇಮ್ಸ್, ಚಾರ್ಲಿ ಹಾಗೂ ವಿಕ್ರಾಂತ್ ರೋಣ ಸಿನಿಮಾಗಳೂ ಸಹ ನೂರು ಕೋಟಿ ಕ್ಲಬ್ ಸೇರುವ ಮೂಲಕ ಅಬ್ಬರಿಸಿದ್ದವು. ಇನ್ನು ಕಾಂತಾರ ಚಿತ್ರ ಸದ್ಯ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದ್ದು, ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡು ಇದೀಗ ಪ್ಯಾನ್ ಇಂಡಿಯಾ ಬೇಡಿಕೆ ಬೇರೆ ಚಿತ್ರರಂಗದ ವೀಕ್ಷಕರಿಂದ ಬಂದ ಕಾರಣ ಪ್ಯಾನ್ ಇಂಡಿಯಾ ಬಿಡುಗಡೆಗೆ ಸಜ್ಜಾಗಿದೆ.

  ಹೌದು, ಕಾಂತಾರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿದ್ದು, ಸದ್ಯ ಸಿನಿ ರಸಿಕರು ಈ ಚಿತ್ರದ ಬಗ್ಗೆ ಚರ್ಚಿಸುತ್ತಿರುವಷ್ಟು ಬೇರೆ ಯಾವುದೇ ಚಿತ್ರದ ಕುರಿತೂ ಸಹ ಚರ್ಚಿಸುತ್ತಿಲ್ಲ ಎನ್ನಬಹುದು. ಹೀಗೆ ಅಬ್ಬರಿಸುತ್ತಿರುವ ಕಾಂತಾರ ಚಿತ್ರದ ಕುರಿತು ಬೇರೆ ಚಿತ್ರರಂಗದ ಸಿನಿ ಪ್ರೇಮಿಗಳು ಹಾಗೂ ವಿಮರ್ಶಕರು ಮಾತ್ರವಲ್ಲದೇ ಇತರೆ ಭಾಷೆಯ ಸ್ಟಾರ್‌ಗಳೂ ಸಹ ಮಾತನಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ. ಹೌದು, ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದ ನಾನಿ ವೇದಿಕೆ ಮೇಲೆಯೇ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.

  ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ನಾನಿ

  ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ನಾನಿ

  ಬೆಂಗಳೂರಿನಲ್ಲಿ ನಿನ್ನೆ ( ಅಕ್ಟೋಬರ್ 9 ) 67ನೇ ಫಿಲ್ಮ್‌ಫೇರ್ ಸೌತ್ ಅವಾರ್ಡ್ ಕಾರ್ಯಕ್ರಮದಲ್ಲಿ ತೆಲುಗು ನಟ ನಾನಿ ತಮ್ಮ ಅಭಿನಯದ 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕಾಗಿ ಅತ್ಯುತ್ತಮ ನಟ ( ಕ್ರಿಟಿಕ್ಸ್ ) ಪ್ರಶಸ್ತಿಯನ್ನು ಪಡೆದರು. ನಟಿ ಟಬು ನಾನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು.

  ಏನ್ ಸಿನಿಮಾಗಳನ್ನು ತೆಗೆಯುತ್ತಿದ್ದಾರೆ ಈ ನಡುಗೆ ಕನ್ನಡದಲ್ಲಿ

  ಏನ್ ಸಿನಿಮಾಗಳನ್ನು ತೆಗೆಯುತ್ತಿದ್ದಾರೆ ಈ ನಡುಗೆ ಕನ್ನಡದಲ್ಲಿ

  ಇನ್ನು ಈ ಪ್ರಶಸ್ತಿಯನ್ನು ಗೆದ್ದ ನಂತರ ಮಾತನಾಡಿದ ನಾನಿ ಫಿಲ್ಮ್‌ಫೇರ್ ಬೆಂಗಳೂರಿನಲ್ಲಿ ನಡೆಯುತ್ತಿರುವುದರ ಕುರಿತು ಮಾತನಾಡಿದರು. 'ಏನ್ ಸಿನಿಮಾಗಳನ್ನು ತೆಗೆಯುತ್ತಿದ್ದಾರೆ ಕನ್ನಡದಲ್ಲಿ ಈ ಮಧ್ಯ, ಕನ್ನಡ ಸಿನಿಮಾ ಬಗ್ಗೆ ಇಂಡಿಯಾ ಪೂರ್ತಿ ಮಾತನಾಡಿಕೊಳ್ತಿದೆ, ಎಲ್ಲಿ ಹೋದರೂ ಸಹ ಈ ವರ್ಷ ಕನ್ನಡ ಚಿತ್ರಗಳ ಬಗ್ಗೆ ಮಾತನಾಡ್ತಿದ್ದಾರೆ ಎಂಬುದು ಹೆಮ್ಮೆಯಾಗ್ತಿದೆ. ಪಕ್ಕದ ರಾಜ್ಯ ಮಾತ್ರ ಅಲ್ಲ ನಮ್ಮನ್ನೂ ಕೂಡ ಹೊಡೆದುಹಾಕಿ ಮುಂದೆ ಹೋಗಿದ್ದಾರೆ ಎಂದು ಮಾತನಾಡಿಕೊಳ್ತಾ ಇದ್ದಾರೆ' ಎಂದು ನಾನಿ ಹೊಗಳಿದರು.

  ಕಾಂತಾರ ಹೊಗಳಿದ ನಾನಿ

  ಕಾಂತಾರ ಹೊಗಳಿದ ನಾನಿ

  ಹೀಗೆ ನಾನಿ ಕನ್ನಡ ಚಿತ್ರ ಮತ್ತು ಕನ್ನಡ ಚಿತ್ರರಂಗಗಳ ಬಗ್ಗೆ ಹೊಗಳುವ ಮಧ್ಯ ಇತ್ತೀಚೆಗೆ ಬಿಡುಗಡೆಗೊಂಡ ಕಾಂತಾರ ಬಗ್ಗೆ ಕೂಡ ಮಾತನಾಡಿದರು. ಇತ್ತೀಚೆಗೆ ಕನ್ನಡ ಚಿತ್ರಗಳು ದೇಶಾದ್ಯಂತ ಸದ್ದು ಮಾಡುತ್ತಿವೆ, ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಸಾಕಷ್ಟು ಕೇಳಿದ್ದೇನೆ ಸಿನಿಮಾ ಅದಿರಿಹೋಗುವಷ್ಟು ಸದ್ದು ಮಾಡ್ತಿದೆ ಅಂತೆ ಎಂದರು.

  English summary
  Telugu actor Nani praised Kannada movie Kantara on filmfare stage. Read on
  Monday, October 10, 2022, 20:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X