For Quick Alerts
  ALLOW NOTIFICATIONS  
  For Daily Alerts

  'ಫಿದಾ' ನಟ ವರುಣ್ ತೇಜ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

  |

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ನಟ ವರುಣ್ ತೇಜ ರಸ್ತೆ ಅಪಘಾತದಿಂದ ಪಾರಾಗಿದ್ದಾರೆ. ಕಳೆದ ರಾತ್ರಿ ವನಪಾರ್ತಿ ಜಿಲ್ಲೆಯ ಕೋತಾಕೋಟ ರಸ್ತೆಯಲ್ಲಿ ವರುಣ್ ತೇಜ ಕಾರು ಅಪಘಾತವಾಗಿದೆ.

  ಅದೃಷ್ಟವಶಾತ್ ಯಾರಿಗೂ ಯಾವ ಅಪಾಯವೂ ಸಂಭವಿಸಿಲ್ಲ. ಕೇವಲ ಕಾರಿನ ಮುಂಭಾಗ ಮಾತ್ರ ಜಖಂ ಆಗಿದೆ. 'ವಾಲ್ಮೀಕಿ' ಸಿನಿಮಾದ ಶೂಟಿಂಗ್ ಮುಗಿಸಿ ವಾಪಸ್ ಬರುವಾಗ ಈ ಅಪಘಾತ ಜರುಗಿದೆ ಎಂಬ ಮಾಹಿತಿ ಸಿಕ್ಕಿದೆ.

  ಈ ಬಗ್ಗೆ ಸ್ವತಃ ವರುಣ್ ತೇಜ ಅವರೇ ಟ್ವೀಟ್ ಮಾಡಿ ''ನನ್ನ ಕಾರು ಅಪಘಾತವಾಗಿದೆ. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯವೂ ಆಗಿಲ್ಲ. ನಮ್ಮ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದ'' ಎಂದಿದ್ದಾರೆ.

  ಅಂದ್ಹಾಗೆ, ವರುಣ್ ತೇಜ ಅವರ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದ್ದು, ಆ ಕಾರಿನಲ್ಲಿ ಮೂರ್ನಾಲ್ಕು ಯುವಕರು ಇದ್ದರು, ಅವರು ಪಾನಮತ್ತರಾಗಿದ್ದರು ಎನ್ನಲಾಗಿದೆ.

  'ಮುಕುಂದ' ಸಿನಿಮಾದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ವರುಣ್ ತೇಜ, ಕಂಚೆ, ಲೋಫರ್, ಮಿಸ್ಟರ್, ಫಿದಾ, ತೋಲಿ ಪ್ರೇಮಾ, ಎಫ್ 2 ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

  Read more about: accident ಅಪಘಾತ
  English summary
  Telugu actor Varun Tej car met with an accident at Kothakota, Wanaparthy Dist. Car was damaged but Varun Tej is safe, nothing to worry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X