'ವಿಲನ್' ಬಳಗದ ಆಸೆಗೆ ತಣ್ಣೀರೆರಚಿದ ತೆಲುಗು ಹುಡುಗಿ.!
ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರ ಒಂದೊಂದೆ ವಿಷ್ಯಗಳಿಗೆ ಸುದ್ದಿ ಮಾಡುತ್ತಲೇ ಇದೆ. ಸಿನಿಮಾ ಅನೌನ್ಸ್ ಆದಾಗನಿಂದಲೂ ಪ್ರತಿಯೊಂದು ಹಂತದಲ್ಲೂ ನಿರೀಕ್ಷೆ, ಕುತೂಹಲವನ್ನ ಹೆಚ್ಚಿಸುತ್ತಿದೆ. ಸದ್ಯ, ಬ್ಯಾಂಕಾಕ್ ನಲ್ಲಿ 'ದಿ ವಿಲನ್' ಚಿತ್ರೀಕರಣ ಮಾಡುತ್ತಿದೆ. ಆದ್ರೆ, ಇತ್ತ ಸ್ಯಾಂಡಲ್ ವುಡ್ ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಎಲ್ಲರಿಗೂ ಗೊತ್ತಿರುವಾಗೆ, ಲಂಡನ್ ಬ್ಯೂಟಿ ಆಮಿ ಜಾಕ್ಸನ್ 'ವಿಲನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಮಿ ಜೊತೆಯಲ್ಲಿ ಮತ್ಯಾವ ನಟಿ ತೆರೆ ಹಂಚಿಕೊಳ್ಳಬಹುದು ಎಂಬ ಕಾತುರ ಅಭಿಮಾನಿಗಳನ್ನ ಕಾಡುತ್ತಿರುವಾಗಲೇ, ತೆಲುಗು ಹುಡುಗಿಯೊಬ್ಬಳು 'ವಿಲನ್'ಗಾಗಿ ಕನ್ನಡಕ್ಕೆ ಬರ್ತಿದ್ದಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ, ವಿಲನ್ ಅಡ್ಡಾಗೆ ಬರ್ತಾರೆ ಅಂತ ಹೇಳಲಾಗ್ತಿರುವ ಆ ತೆಲುಗು ಪಿಲ್ಲ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ....

'ವಿಲನ್' ಚಿತ್ರಕ್ಕೆ ತೆಲುಗು ಪಿಲ್ಲ ಎಂಟ್ರಿ!
ಸುದೀಪ್ ಮತ್ತು ಶಿವಣ್ಣ ಜೋಡಿಯ 'ವಿಲನ್' ಚಿತ್ರಕ್ಕೆ ತೆಲುಗಿನ ಸುಂದರಿ ಲಾವಣ್ಯ ತ್ರಿಪಾಠಿ ಮತ್ತೋರ್ವ ನಾಯಕಿ ಆಗಿ ಕಾಣಸಿಕೊಳ್ಳಲಿದ್ದಾರಂತೆ. ಇಂತಹ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಲಾವಣ್ಯ ಬರುವುದು ಪಕ್ಕಾನ?
ಲಾವಣ್ಯ ಕನ್ನಡದಲ್ಲಿ ಅಭಿನಯಿಸುವುದು ನಿಜಾನ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ, ವಿಲನ್ ಚಿತ್ರತಂಡ ಈ ಬಗ್ಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದ್ರೆ, 'ದಿ ವಿಲನ್' ಹಾಗೂ ಲಾವಣ್ಯ ತ್ರಿಪಾಠಿ ಅವರ ವಿಕಿಪೀಡಿಯಗಳಲ್ಲಿ 'ವಿಲನ್' ಚಿತ್ರದಲ್ಲಿ ಲಾವಣ್ಯ ನಟಿಸುತ್ತಿರುವ ಬಗ್ಗೆ ಉಲ್ಲೇಖವಾಗಿದೆ. ಇದು ಎಷ್ಟರ ಮಟ್ಟಿಗೆ ನಿಜಾ?

'ವಿಲನ್'ಗೆ ನೋ ಎಂದ ಲಾವಣ್ಯ
ಇತ್ತ ಸ್ಯಾಂಡಲ್ ವುಡ್ ಹಾಗೂ ಅತ್ತ ಟಾಲಿವುಡ್ ಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ತಿಳಿದ ಲಾವಣ್ಯ ''ಇದು ಸುಳ್ಳು ಸುದ್ದಿ'' ಎಂದು ಟ್ವೀಟ್ ಮಾಡುವ ಮೂಲಕ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

'ಲಾವಣ್ಯ ತ್ರಿಪಾಠಿ' ಬಗ್ಗೆ....
ಮೂಲತಃ ಮಾಡೆಲ್ ಆಗಿದ್ದ ಲಾವಣ್ಯ ತ್ರಿಪಾಠಿ 2012 ರಲ್ಲಿ ನವೀನ್ ಚಂದ್ರ ಅಭಿನಯದ 'ಅಂದಲಾ ರಾಕ್ಷಿಸಿ' ಚಿತ್ರದ ಮೂಲಕ ವೃತ್ತಿಬದುಕು ಆರಂಭಿಸಿದರು. ನಂತರ 'ಭಲೇ ಭಲೇ ಮಗಾಡಿವೋಯ್', 'ಸೋಗ್ಗಾಡೆ ಚಿನ್ನಿನಾಯನ', 'ಶ್ರೀರಸ್ತು ಶುಭಮಸ್ತು', 'ಮಿಸ್ಟರ್', 'ರಾಧ' ಅಂತಹ ಚಿತ್ರಗಳಲ್ಲಿ ನಾಯಕಿ ಆಗಿ ಕಾಣಿಸಿಕೊಂಡ್ರು.


Click it and Unblock the Notifications











