»   » ನಟಿ-ಶಾಸಕಿ ರೋಜಾ ಮಾತಿಗೆ ತಿರುಗೇಟು ನೀಡಿದ ಶ್ರೀರೆಡ್ಡಿ

ನಟಿ-ಶಾಸಕಿ ರೋಜಾ ಮಾತಿಗೆ ತಿರುಗೇಟು ನೀಡಿದ ಶ್ರೀರೆಡ್ಡಿ

Posted By:
Subscribe to Filmibeat Kannada

ಕಳೆದ ಒಂದೂವರೆ ತಿಂಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ವಿರುದ್ಧ ಬಹಿರಂಗ ಪ್ರತಿಭಟನೆ ನಡೆಯುತ್ತಿದೆ. ನಟಿ ಶ್ರೀರೆಡ್ಡಿ ಅಂತೂ ಸಿನಿರಂಗದ ಅನೇಕ ದಿಗ್ಗಜರ ಹೆಸರನ್ನ ಇದರಲ್ಲಿ ಸಿಲುಕಿಸಿದ್ದಾರೆ.

ಇತ್ತೀಚಿಗಷ್ಟೆ ನಟ ರಾಜಶೇಖರ್ ಮತ್ನಿ ಜೀವಿತಾ ಅವರ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. ಹಾಸ್ಟೆಲ್ ಯುವತಿಯರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವು ನಟಿಯರು ಕಿಡಿಕಾರಿದ್ದರು. ಇಷ್ಟೆಲ್ಲ ಬೆಳವಣಿಗೆ ಬಗ್ಗೆ ನಟಿ ಹಾಗೂ ಶಾಸಕಿ ರೋಜಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ 'ಮೆಗಾಫ್ಯಾಮಿಲಿ': ನಮ್ಮ ತಂಟೆಗೆ ಬಂದ್ರೆ ಹುಷಾರ್.!

ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ, ರಾಜಶೇಖರ್ ಮತ್ತು ಜೀವಿತಾ ಅವರ ಮೇಲಿನ ಆರೋಪ ಸುಳ್ಳು ಎಂದು ಸಮರ್ಥಿಸಿಕೊಂಡಿದ್ದರು. ಇದಕ್ಕೆ ತಿರಗೇಟು ನೀಡಿರುವ ಶ್ರೀರೆಡ್ಡಿ ಫೇಸ್ ಬುಕ್ ನಲ್ಲಿ ರೋಜಾಗೆ ಕಾಲೆಳೆದಿದ್ದಾರೆ. ಮುಂದೆ ಓದಿ......

ರೋಜಾ ಯಾರಿಗೂ ಇಷ್ಟವಾಗಿಲ್ಲ ಅನಿಸುತ್ತೆ

ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದ ರೋಜಾಗೆ ನಟಿ ಶ್ರೀರೆಡ್ಡಿ ಟಾಂಗ್ ನೀಡಿದ್ದಾರೆ. ಬಹುಶಃ ''ರೋಜಾ ಅವರು ಯಾರಿಗೂ ಇಷ್ಟವಾಗಿಲ್ಲ ಅನಿಸುತ್ತೆ. ಅದಕ್ಕೆ ಅವರನ್ನ ಯಾರೂ ಕೆಣಕಿಲ್ಲ'' ಎಂದು ಕಾಲೆದಿರುವ ನಟಿ ಫೇಸ್ ಬುಕ್ ನಲ್ಲಿ ಕಿಡಿಕಾರಿದ್ದಾರೆ.

ನಿಮ್ಮನ್ನ ಯಾರೂ ಕೆಣಕಿಲ್ವಾ

''ರೋಜಾ ಅವರು ಚೆನ್ನಾಗಿಯೇ ಸಂದರ್ಶನ ಕೊಡ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ವಾ.? ಇವರು ಇಂಡಸ್ಟ್ರಿಗೆ ಬಂದು 27 ವರ್ಷ ಆಗಿದೆ. ಇವರನ್ನ ಯಾರೂ ಕೆಣಕಿಲ್ವಂತೆ. ವಾರೇ ವಾಹ್. ಬಹುಶಃ ನೀವು ಯಾರಿಗೂ ಇಷ್ಟವಾಗಿಲ್ಲ ಅನಿಸುತ್ತೆ. ಇಂಡಸ್ಟ್ರಿ ಮೇಲೆ ಕಸ ಹಾಕಿದ್ದೀನಾ ತಾಯಿ. ಸ್ವಲ್ಪ ದಿನ ಇರಿ, ಇಡೀ ಇಂಡಸ್ಟ್ರಿಯ ರಿಪೋರ್ಟ್ ಸಿದ್ಧವಾಗ್ತಿದೆ. ನನ್ನ ಹತ್ರ ಬೇಡಮ್ಮ'' ಎಂದು ಸ್ಟೇಟಸ್ ಹಾಕಿ nagbaby ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ತಮ್ಮ ಮೇಲಿನ ಆರೋಪದ ಬಗ್ಗೆ ನಟ ರಾಜಶೇಖರ್ ಪತ್ನಿ ಜೀವಿತಾ ಸ್ಪಷ್ಟನೆ

ರೋಜಾ ಏನು ಹೇಳಿದ್ರು.?

''ಡಾ ರಾಜ್ ಶೇಖರ್ ಅವರು ಬಹಳ ಒಳ್ಳೆಯ ವ್ಯಕ್ತಿ. ನನಗೆ ವೈಕ್ತಿಕವಾಗಿ ಅವರು ಗೊತ್ತು. ನನ್ ಪತಿ ಸೆಲ್ವಮಣಿ ಅವರು ಕೂಡ ತುಂಬಾ ಹತ್ತಿರದ ಸ್ನೇಹಿತರು. ನಾನು ಎರಡು ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದೇನೆ. ಜೀವಿತಾ ಅವರಿಲ್ಲದೇ ಅವರ ಹೊರಗಡೆ ಬರುತ್ತಿರಲಿಲ್ಲ. ಮತ್ತು ಮಕ್ಕಳನ್ನ ಕೂಡ ಕರೆದುಕೊಂಡು ಬರುವುದಿಲ್ಲ'' ಎಂದು ಶ್ರೀರೆಡ್ಡಿ ಆರೋಪಕ್ಕೆ ಟಾಂಗ್ ನೀಡಿದ್ದರು.

ಮಹೇಶ್ ಬಾಬು ಕುಟುಂಬದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರೀರೆಡ್ಡಿ

ನಟ-ನಟಿಯರನ್ನ ಬಿಡದ ಶ್ರೀರೆಡ್ಡಿ

ವೈಯಕ್ತಿಕವಾಗಿ ಒಬ್ಬೊಬ್ಬರ ಮೇಲೆಯೇ ಶ್ರೀರೆಡ್ಡಿ ಆರೋಪ ಮಾಡ್ತಿದ್ದಾರೆ. ಇದರಿಂದ ಆರೋಪ ಎದುರಿಸುತ್ತಿರುವ ಕಲಾವಿದರು ಶ್ರೀರೆಡ್ಡಿಗೆ ಕಡಿವಾಣ ಹಾಕಲು ತಯಾರಾಗುತ್ತಿದ್ದಾರೆ. ಕಲಾವಿದರ ಸಂಘವೂ ಈ ಬಗ್ಗೆ ಚಿಂತಿಸುತ್ತಿದೆ. ಆದ್ರೆ, ಶ್ರಿರೆಡ್ಡಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಂದೆ ಮತ್ಯಾವ ನಟ-ನಟಿಯರ ಬಗ್ಗೆ ಸ್ಫೋಟಕ ವಿಷ್ಯಗಳು ಹೊರಬರುತ್ತೋ ಕಾದುನೋಡೋಣ.

ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ

English summary
Recently, YSRCP MLA and actress Roja opened up about casting couch in Telugu Film Industry and supported Jeevitha and Dr. Rajasekhar. now sri reddy lashes out at Roja over Casting Couch Controversy.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X