ರಿಷಿಕೇಶದಲ್ಲಿ ಶವವಾಗಿ ಪತ್ತೆಯಾದ ಬಾಲನಟ ತೇಜ

ರಿಷಿಕೇಶದಲ್ಲಿನ ಸಾಯಿಘಾಟ್ ಬಳಿ ಆತನ ಮೃತದೇಹ ಪತ್ತೆಯಾಗಿದೆ. ಪಂಜಾಬ್ ನ ಅಮೃತಸರದ ಮಿರಿಪಿರಿ ಅಕಾಡೆಮಿಯಲ್ಲಿ ತೇಜ ಪಿಯುಸಿ ಮೊದಲನೇ ವರ್ಷ ಓದುತ್ತಿದ್ದಾರೆ. ಮಾರ್ಚ್ 5ರಂದು ಕಾಲೇಜಿನ 25 ಮಂದಿ ತಂಡದೊಂದಿಗೆ ರಿಷಿಕೇಶ್ ಗೆ ಪ್ರವಾಸಕ್ಕೆಂದು ಹೋಗಿದ್ದರು.
ಆ ಸಂದರ್ಭದಲ್ಲಿ ಅವರು ಗಂಗಾನದಿಯಲ್ಲಿ ಕಾಣೆಯಾಗಿದ್ದರು. ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ. ಕಡೆಗೆ ಇಂದು (ಮಾ.12) ತೇಜ ಮೃತದೇಹ ಪತ್ತೆಯಾಗಿದೆ. ಶವಪರೀಕ್ಷೆ ಬಳಿಕ ಆತನ ದೇಹವನ್ನು ಹೈದರಾಬಾದಿನಲ್ಲಿರುವ ಪೋಷಕರ ಕೈಗೆ ಒಪ್ಪಿಸಲಾಗುತ್ತದೆ.
ತೆಲುಗಿನ ಮುರಾರಿ, ಕಥಾನಾಯಕುಡು ಹಾಗೂ ರಾಮದಂಡು ಚಿತ್ರಗಳಲ್ಲಿ ತೇಜ ಅಭಿನಯಿಸಿದ್ದಾರೆ. ಇವರ ತಂದೆ ಎನ್ ಶ್ರೀಧರ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ನಟನಾಗಬೇಕು ಎಂದು ಕನಸು ಕಂಡಿದ್ದ ತೇಜ ಹಠಾತ್ ನಿಧನದಿಂದ ಪೋಷಕರ ಅಳಲು ಮುಗಿಲು ಮುಟ್ಟಿದೆ.
ಚಿರಂಜೀವಿ ಅಭಿನಯದ 'ಇಂದ್ರ' ಚಿತ್ರದಲ್ಲಿ ಬಾಲನಟನಾಗಿ ತೊಡೆತಟ್ಟಿದ್ದ ತೇಜ ಅವರ ಅಮೋಘ ಅಭಿನಯ ಇನ್ನೂ ಪ್ರೇಕ್ಷಕರ ಕಣ್ಣಿಗೆ ಕಟ್ಟಿದಂತಿದೆ. ಛೇ ಹೀಗಾಗಬಾರದಿತ್ತು. ವಿಧಿಯಾಟ ಎಂಥ ಘೋರ ಅಲ್ಲವೆ?


Click it and Unblock the Notifications











