TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
'ಪೈಲ್ವಾನ್' ಟೀಸರ್ ನೋಡಿ 'ವಾಹ್' ಎಂದ ಇಬ್ಬರು ತೆಲುಗು ನಿರ್ದೇಶಕರು
ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಕುಸ್ತಿ ಟೀಸರ್ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.
ಪೈಲ್ವಾನ್ ಟೀಸರ್ ನೋಡಿದ ಕಿಚ್ಚನ ಬಳಗ ಅಂತೂ ಸಂಕ್ರಾಂತಿ ಸಂಭ್ರಮವನ್ನ ಮತ್ತಷ್ಟು ಜೋರು ಮಾಡಿದೆ. ಪೈಲ್ವಾನ್ ಚಿತ್ರಕ್ಕಾಗಿ ಭಾರಿ ತಯಾರಿ ನಡೆಸುತ್ತಿದ್ದ ಸುದೀಪ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಇನ್ನು ಪೈಲ್ವಾನ್ ಟೀಸರ್ ನೋಡಿ ಇಬ್ಬರು ತೆಲುಗಿನ ಖ್ಯಾತ ನಿರ್ದೇಶಕರು ಫಿದಾ ಆಗಿದ್ದಾರೆ. ಅಷ್ಟಕ್ಕೂ, ಆ ಟಾಲಿವುಡ್ ಡೈರೆಕ್ಟರ್ಸ್ ಯಾರು? ಮುಂದೆ ಓದಿ....
'ಪೈಲ್ವಾನ್' ನೋಡಿ ಪೂರಿ ಏನಂದ್ರು
''ಕಿಚ್ಚ ಸುದೀಪ್ ಸರ್, ನಿಮ್ಮ ಪೈಲ್ವಾನ್ ಟೀಸರ್ ಸೂಪರ್. ತುಂಬಾ ಪ್ರಾಮಿಸಿಂಗ್ ಆಗಿದೆ'' ಎಂದು ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಟ್ವೀಟ್ ಮಾಡಿದ್ದಾರೆ.
ವರ್ಮಾ ಕ್ಲೀನ್ ಬೋಲ್ಡ್
ತೆಲುಗಿನ ಮತ್ತೊಬ್ಬ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ '' ವಾಹ್ ವಾಹ್ ವಾಹ್....ಪೈಲ್ವಾನ್ ಗಳಿಗೆಲ್ಲಾ ಸುಲ್ತಾನ್ ಆಗಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಕಿಲ್ಲಿಂಗ್ ಆಗಿದೆ'' ಎಂದಿದ್ದಾರೆ.
ಆರ್.ಜಿ.ವಿ ಥ್ಯಾಂಕ್ಸ್
ಇನ್ನು ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್, ''ನನ್ನನ್ನು ಹೊರಗಿನ ಜಗತ್ತಿಗೆ ಪರಿಚಯ ಮಾಡಿದ್ದು ನೀವು. ಅದಕ್ಕಾಗಿ ನಾನು ಅಭಾರಿಯಾಗಿರುತ್ತೇನೆ. ಅದಕ್ಕೆ ಧನ್ಯವಾದ ಹಾಗೂ ಈ ಟ್ವೀಟ್ ಗಾಗಿ ವಿಶೇಷ ಧನ್ಯವಾದ'' ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಬಗ್ಗೆ ವರ್ಮಾ ಸಂತಸ
''ನಿಮ್ಮಂತ ಸೂಪರ್ ಪ್ರತಿಭೆಯನ್ನ ಹುಡುಕಿದ ನಾನೇ ತುಂಬಾ ಲಕ್ಕಿ. ಪೈಲ್ವಾನ್ ಟೀಸರ್ ಮೂಲಕ ನಿಮ್ಮ ಪ್ರಚಂಡ ವ್ಯಕ್ತಿತ್ವದ ಪ್ರದರ್ಶನವಾಗಿದೆ'' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.