For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ ಅಬ್ಬರಿಸಿದ ತೆಲುಗು ಗಬ್ಬರ್ ಸಿಂಗ್

  By Rajendra
  |

  ಪರಭಾಷಾ ಚಿತ್ರಗಳಿಗೆ ಕರ್ನಾಟಕ ಸ್ವರ್ಗವಿದ್ದಂತೆ. ನಮ್ಮ ಕನ್ನಡ ಚಿತ್ರಗಳು ಇಲ್ಲಸಲ್ಲದ ವಿವಾದಗಳಲ್ಲಿ ಸಿಕ್ಕಿ ಅತ್ತ ಚಿತ್ರಮಂದಿರ ಸಿಗದಂತೆ ಮಾಡಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಪರಭಾಷಾ ಚಿತ್ರಗಳು ಮಾತ್ರ ಬಾಕ್ಸಾಫೀಸನ್ನು ಕೊಳ್ಳೆಹೊಡೆಯುತ್ತಿವೆ.

  ಚಿರಂಜೀವಿ 'ತಮ್ಮುಡು' ಪವನ್ ಕಲ್ಯಾಣ್ ಹಾಗೂ ಕಮಲ್ ಹಾಸನ್ 'ಮಗಳ್' ಶ್ರುತಿ ಹಾಸನ್ ಅಭಿನಯದ 'ಗಬ್ಬರ್ ಸಿಂಗ್' ಕರ್ನಾಟಕದಲ್ಲಿ ಕನಕವರ್ಷ ಸುರಿಸಿದೆ. ಕೋಲಾರ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಗಬ್ಬರ್ ಸಿಂಗ್ ಬಾಕ್ಸಾಫೀಸಲ್ಲಿ ಅಬ್ಬರಿಸಿದ್ದಾನೆ.

  ಬೆಂಗಳೂರಿನಲ್ಲಿ 33 ಚಿತ್ರಮಂದಿರಗಳಲ್ಲಿ ಹಾಗೂ ರಾಜ್ಯದಾದ್ಯಂತ 50 ಚಿತ್ರಮಂದಿರಗಳಲ್ಲಿ ಗಬ್ಬರ್ ಸಿಂಗ್ ತೆರೆಕಂಡಿದ್ದು ಎಲ್ಲ ಕಡೆಯಿಂದಲೂ ಬಾಕ್ಸಾಫೀಸ್ ರಿಪೋರ್ಟ್ ಚೆನ್ನಾಗಿದೆ. ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಗಬ್ಬರ್ ಸಿಂಗ್ ಮೊದಲ ವಾರದ ಕಲೆಕ್ಷನ್ಸ್ ರು.2.70 ಕೋಟಿ.

  ಆಂಧ್ರ ಹೊರತುಪಡಿಸಿದರೆ ದೇಶದಲ್ಲೇ ಗಬ್ಬರ್ ಸಿಂಗ್ ಕಲೆಕ್ಷನ್ ರು.2 ಕೋಟಿ ಮೀರುವುದಿಲ್ಲ. ಆದರೆ ಆಂಧ್ರದಲ್ಲಿ ಮಾತ್ರ ಗಬ್ಬರ್ ಸಿಂಗ್ ರು.42.55 ಕೋಟಿ ಕಡಿದು ಗುಡ್ಡೆಹಾಕಿದೆ. ಬಾಕ್ಸಾಫೀಸಲ್ಲಿ ಇದೊಂದು ನೂತನ ದಾಖಲೆ ಎನ್ನಬೇಕು. ಥತ್ ತೇರಿ ಕನ್ನಡ ಚಿತ್ರಗಳು ಈ ರೀತಿ ಆಗೋದು ಯಾವಾಗ ಗುರು. (ಏಜೆನ್ಸೀಸ್)

  English summary
  Telugu actor Pawan Kalyan's latest film Gabbar Singh rocks all over Karnataka. The movie has raked in Rs 2.7 crore from the collection centres in Karnataka. ಕರ್ನಾಟಕದಲ್ಲಿ ಅಬ್ಬರಿಸಿದ ತೆಲುಗು ಗಬ್ಬರ್ ಸಿಂಗ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X