»   » ಸುದೀಪ್ 'ಬಚ್ಚನ್' ತೆಲುಗಿನಲ್ಲಿ ಬಿಡುಗಡೆಗೆ ರೆಡಿ

ಸುದೀಪ್ 'ಬಚ್ಚನ್' ತೆಲುಗಿನಲ್ಲಿ ಬಿಡುಗಡೆಗೆ ರೆಡಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸಿದ್ದ ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಚಿತ್ರ ಇದೀಗ ತೆಲುಗಿನಲ್ಲಿ ಬಿಡುಗಡೆಗೆ ಅಣಿಯಾಗುತ್ತಿದೆ. ಕಳೆದ ಯುಗಾದಿ (ವಿಜಯನಾಮ ಸಂವತ್ಸರ) ಹಬ್ಬದ ದಿನ ಬಿಡುಗಡೆಯಾಗಿದ್ದ ಈ ಚಿತ್ರ ಈಗ ಮತ್ತೊಂದು ಯುಗಾದಿ ಸಮಯಕ್ಕೆ ತೆಲುಗಿನಲ್ಲಿ ರೀಮೇಕ್ ಆಗಿ ಬಿಡುಗಡೆಯಾಗುತ್ತಿದೆ.

ತುಮ್ಮಲಪಲ್ಲಿ ರಾಮಸತ್ಯನಾರಾಯಣ ಎಂಬುವವರು ಕನ್ನಡ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದ್ದು ಬಚ್ಚನ್ ಹೆಸರಿನಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸುದೀಪ್ ಚಿರಪರಿತರಾಗಿದ್ದಾರೆ. [ಬಚ್ಚನ್ ಚಿತ್ರ ವಿಮರ್ಶೆ]


ಇದೀಗ ಅವರು ರಾಜಮೌಳಿ ಅವರ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ 'ಬಾಹುಬಲಿ' ಚಿತ್ರಲ್ಲೂ ಪ್ರಮುಖ ಪಾತ್ರವನ್ನು ಪೋಷಿಸಿದ್ದು ಬಚ್ಚನ್ ಚಿತ್ರವ ಮೇಲೆ ತೆಲುಗಿನಲ್ಲಿ ಭಾರಿ ನಿರೀಕ್ಷೆಗಳಿವೆ. 'ಬಚ್ಚನ್' ಚಿತ್ರದ ಗಮನಾರ್ಹ ಪಾತ್ರದಲ್ಲಿ ತೆಲುಗಿನ ಜಗಪತಿ ಬಾಬು ಅಭಿನಯಿಸಿದ್ದಾರೆ.

ಕೂಲಾಗಿದ್ದಾಗ ಮಾತ್ರ ನಾನು ಜಂಟಲ್ ಮೆನ್ ಕೋಪ ಬಂದಾಗ ನಾನು ಬಾರ್ಸೋ ಬಚ್ಚನ್, ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡ್, ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ ಬಚ್ಚನ್ ಗಿರಿನೇ ತೋರಿಸ್ಬೇಕು...ಈ ರೀತಿಯ ಪಂಚಿಂಗ್ ಡೈಲಾಗ್ಸ್ ಮೂಲಕ ಚಿತ್ರ ಸುದೀಪ್ ಅಭಿಮಾನಿಗಳನ್ನು ರಂಜಿಸಿತ್ತು.

ಇದೀಗ ಇದೇ ರೀತಿಯ ಡೈಲಾಗ್ ಗಳು ತೆಲುಗು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವುದು ಗ್ಯಾರಂಟಿ ಎಂಬ ನಿರೀಕ್ಷೆಯಲ್ಲಿದ್ದಾರೆ ನಿರ್ಮಾಪಕರು. ಕನ್ನಡ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದರು. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.

ಉಳಿದ ಪಾತ್ರವರ್ಗದಲ್ಲಿ ರವಿಶಂಕರ್, ಆಶಿಶ್ ವಿದ್ಯಾರ್ಥಿ, ನಾಜರ್, ಪ್ರದೀಪ್ ರಾವತ್, ಜೈ ಜಗದೀಶ್, ಸುಧಾ ಬೆಳವಾಡಿ, ರಾಮಕೃಷ್ಣ, ಶ್ರೀಧರ್, ಅಚ್ಯುತ ಕುಮಾರ್, ಶ್ರುತಿ, ಡೈಸಿ ಶಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದವರು.

English summary
Kichcha Sudeep's action packed Kannada movie 'Bachchan' gets amazing response in Sandalwood. Now, the Telugu version of the film, which has been titled as same, set to thrill audience in Tollywood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada