For Quick Alerts
  ALLOW NOTIFICATIONS  
  For Daily Alerts

  ಮಂಡ್ಯ: ತೆಲುಗು ನಟನ ಸಿನಿಮಾ ಚಿತ್ರೀಕರಣದ ವೇಳೆ ಅವಘಡ, ಸ್ಥಳೀಯರ ಆಕ್ರೋಶ

  |

  ಕರ್ನಾಟಕದ ಪ್ರವಾಸಿ ತಾಣಗಳು, ಮಲೆನಾಡು, ಕರಾವಳಿ ಪ್ರದೇಶಗಳು ನೆರೆ-ಹೊರೆಯ ಚಿತ್ರರಂಗಗಳಿಗೆ ಸಿನಿಮಾ ಚಿತ್ರೀಕರಣಕ್ಕೆ ಮೆಚ್ಚಿನ ತಾಣಗಳು. ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹವೂ ಸಹ ನೆರೆ-ಹೊರೆ ಚಿತ್ರರಂಗಗಳು ಕರ್ನಾಟಕದಲ್ಲಿ ಚಿತ್ರೀಕರಣ ಮಾಡಲು ಉತ್ಸಾಹ ತೋರುತ್ತವೆ.

  ತಮಿಳು, ತೆಲುಗು, ಮಲಯಾಳಂ ಭಾಷೆಯ ಸ್ಟಾರ್ ಸಿನಿಮಾಗಳು ಕರ್ನಾಟಕದಲ್ಲಿ ಈ ಹಿಂದೆಯೂ ಚಿತ್ರೀಕರಣ ಆಗಿವೆ. ಈಗಲೂ ಆಗುತ್ತಿವೆ. ಆದರೆ ಕೆಲವೊಮ್ಮೆ ಚಿತ್ರೀಕರಣದ ಸಮಯದಲ್ಲಿ ಅವಘಡಗಳು ಸಂಭವಿಸಿ ಐತಿಹಾಸಿಕ ಕಟ್ಟಡಗಳಿಗೆ, ರಚನೆಗಳಿಗೆ ಹಾನಿ ಆದ ಪ್ರಸಂಗಗಳೂ ಇವೆ. ಇದೀಗ ಇಂಥಹುದೇ ಪ್ರಸಂಗ ಮಂಡ್ಯದಲ್ಲಿ ನಡೆದಿದೆ.

  ಮಂಡ್ಯದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಆವರಣದಲ್ಲಿ ತೆಲುಗಿನ ಸ್ಟಾರ್ ನಟ ನಾಗಚೈತನ್ಯ ನಟಿಸುತ್ತಿರುವ ಹೊಸ ತೆಲುಗು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಆದರೆ ಈ ವೇಳೆ ಸಂಭವಿಸಿದ ಅವಘಡದಿಂದ ಐತಿಹಾಸಿಕ ಕಲ್ಯಾಣಿಗೆ ಹಾನಿಯಾಗಿದೆ.

  ನಾಗಚೈತನ್ಯ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಕಲ್ಯಾಣಿಯಲ್ಲಿ ಕ್ರೇನ್ ಬಳಸಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಮಳೆಯಾಗಿರುವ ಕಾರಣ ಕಲ್ಯಾಣಿ ಬಳಿ ಕೆಸರಾಗಿದ್ದು, ಕ್ರೇನ್ ಆಯತಪ್ಪಿ ಕಲ್ಯಾಣಿಯ ಒಳಗೆ ಇಳಿದಿದ್ದು ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದೆ.

  ಇದೀಗ ಚಿತ್ರತಂಡವು ಕ್ರೇನ್ ಅನ್ನು ಹೊರಗೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಇದು ಸುಲಭಕ್ಕೆ ಆಗುವ ಕಾರ್ಯವಲ್ಲ. ಕ್ರೇನ್ ಒಳಗೆ ಇಳಿದಿರುವುದರಿಂದ ಈಗಾಗಲೇ ಕಲ್ಯಾಣಿಯ ಕೆಲ ಭಾಗಕ್ಕೆ ಹಾನಿಯಾಗಿದೆ. ಈಗ ಕ್ರೇನ್ ಅನ್ನು ಹೊರಗೆ ತೆಗೆಯುವಾಗ ಮತ್ತಷ್ಟು ಹಾನಿ ಆಗುವ ಸಾಧ್ಯತೆ ಇದೆ.

  ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲು ಸ್ಥಳೀಯರು ಮೊದಲಿಂದಲೂ ವಿರೋಧಿಸುತ್ತಲೇ ಇದ್ದರು. ಈಗ ಚಿತ್ರತಂಡದ ನಿರ್ಲಕ್ಷ್ಯದಿಂದ ಕಲ್ಯಾಣಿಗೆ ಹಾನಿ ಆಗಿರುವುದು ಸ್ಥಳೀಯರನ್ನು ಇನ್ನಷ್ಟು ಕೆರಳಿಸಿದೆ. ಕಲ್ಯಾಣಿಯ ನೀರನ್ನು ಚೆಲುವನಾರಾಯಣಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತಿತ್ತು, ಆದರೆ ಚಿತ್ರೀಕರಣದಿಂದಾಗಿ ಕಲ್ಯಾಣಿಯ ನೀರು ಈಗಾಗಲೇ ಕೊಳಕಾಗಿದೆ. ಈ ಕಲ್ಯಾಣಿಯನ್ನು ಇನ್ಫೋಸಿಸ್ ಫೌಂಡೇಶನ್‌ನವರು ಜೀರ್ಣೋದ್ಧಾರ ಮಾಡಿದ್ದರು. ಆದರೆ ಈಗ ಮತ್ತೆ ಕಲ್ಯಾಣಿಗೆ ಹಾನಿಯಾಗಿದೆ.

  ಮೈಸೂರಿನಲ್ಲಿ ಮಹಾರಾಜ ಕಾಲೇಜು ಆವರಣದಲ್ಲಿ ಮಲಯಾಳಂ ಸಿನಿಮಾ 'ಜನ ಗಣ ಮನ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣದಿಂದ ಕಾಲೇಜು ತರಗತಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಉಪನ್ಯಾಸಕರು ಕೆಲ ದಿನಗಳ ಹಿಂದಷ್ಟೆ ಆರೋಪಿಸಿದ್ದರು. ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಕಳೆದ ಕೆಲ ದಿನಗಳಿಂದಲೂ ಮೈಸೂರಿನ ಮಹಾರಾಜ ಕಾಲೇಜು ಆವರಣ ನಡೆದಿದೆ.

  English summary
  Telugu star actor Naga Chaithanya's new movie shooting going on in Mandya's Melukote Cheluvanarayana Swamy temple. shooting crew accidentally damaged historical pond.
  Monday, November 15, 2021, 17:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X