ತೆಲುಗು ರಿಯಲ್ ಸ್ಟಾರ್ ಶ್ರೀಹರಿ ಹಠಾತ್ ನಿಧನ

ಕನ್ನಡದ ಕೋ ಕೋ, ಓ ಪ್ರೇಮವೇ ಹಾಗೂ ಒಂದಾಗೋಣ ಬಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿದ್ದ ಜಂಜೀರ್ ಚಿತ್ರದಲ್ಲೂ ಪ್ರಮುಖ ಪಾತ್ರ ಪೋಷಿಸಿದ್ದರು. ಅವರ ಪೂರ್ಣ ಹೆಸರು ರಘುಮುದ್ರಿ ಶ್ರೀಹರಿ.
ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಹರಿ ನಿಧನರಾಗಿರುವುದು ಚಿತ್ರರಂಗವನ್ನು ದಿಗ್ಭ್ರಮೆಗೆ ಗುರಿಮಾಡಿದೆ. ಬಹುಭಾಷಾ ನಟನನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗ ನಿಜಕ್ಕೂ ಒಬ್ಬ ಪ್ರತಿಭಾವಂತ ನಟನನ್ನು ಕಳೆದುಕೊಂಡಂತಾಗಿದೆ.
ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಟಾಲಿವುಡ್ ನಲ್ಲಿ ಶೇರ್ ಖಾನ್ ಎಂದೇ ಖ್ಯಾತರಾಗಿದ್ದ ಶ್ರೀಹರಿ ಅವರ ಪತ್ನಿ ಡಿಸ್ಕೋ ಶಾಂತಿ. ಅವರಿಗೆ ಇಬ್ಬರು ಗಂಡು ಮಕ್ಕಳೂ ಹಾಗೂ ಒಬ್ಬ ಪುತ್ರಿ ಇದ್ದಾರೆ.
1964, ಆಗಸ್ಟ್ 15ರಂದು ಹೈದರಾಬಾದಿನಲ್ಲಿ ಜನಿಸಿದ ಶ್ರೀಹರಿ ಇದುವರೆಗೂ 97 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಫೈಟರ್ ಆಗಿ, ಪೋಷಕ ನಟನಾಗಿ, ಕಡೆಗೆ ಹೀರೋ ಆಗಿ ಅವರು ಚಿತ್ರರಂಗದಲ್ಲಿ ಹಂತಹಂತವಾಗಿ ಉನ್ನತ ಮಟ್ಟಕ್ಕೆ ಏರಿದವರು. (ಏಜೆನ್ಸೀಸ್)


Click it and Unblock the Notifications











