For Quick Alerts
  ALLOW NOTIFICATIONS  
  For Daily Alerts

  ನಟ ಪವನ್ ಕಲ್ಯಾಣ 2ನೇ ವಿಚ್ಛೇದನ 40 ಕೋಟಿಗೆ

  By Srinath
  |

  ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಪತ್ನಿ ರೇಣು ದೇಸಾಯಿ ಜತೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಮತ್ತು ಅದಕ್ಕಾಗಿ ಅವರು 40 ಕೋಟಿ ರೂಪಾಯಿ ತೆರಬೇಕಾಗಿದೆ.

  ತಮ್ಮ ದ್ವಿತೀಯ ಪತ್ನಿ ರೇಣು ದೇಸಾಯಿಗೆ ಸೋಡಾ ಚೀಟಿ ನೀಡಲು ಮುಂದಾಗಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ರಷ್ಯಾದ ದರಾ ಮಾರ್ಕ್ಸ್ ಎಂಬ ಬೆಡಗಿಯ ಹಿಂದೆ ಸುತ್ತುತ್ತಿದ್ದಾರೆ ಎನ್ನಲಾಗಿದೆ.

  ರೇಣು ದೇಸಾಯಿ ಸಹ ಚಿತ್ರ ನಟಿಯಾಗಿದ್ದು, ಸದ್ಯಕ್ಕೆ ಪೂನಾದಲ್ಲಿ ತನ್ನ ಪೋಷಕರೊಂದಿಗೆ ನೆಲೆಸಿದ್ದಾರೆ. ರೇಣು ಜತೆಗಿನ ದಾಂಪತ್ಯಕ್ಕೆ ತೆರೆ ಎಳೆಯಲು 40 ಕೋಟಿ ರೂಪಾಯಿ ನೀಡುವುದಾಗಿ ನಟ ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದಾರೆ.

  ಅಂದಹಾಗೆ ನಟ ಪವನ್ ತಮ್ಮ ಮೊದಲ ಪತ್ನಿ ನಂದಿನಿ 2008ರ ಆಗಸ್ಟ್ ತಿಂಗಳಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಂತರ, 2009ರ ಜನವರಿ 8ರಂದು ನಟ ಪವನ್ ಅವರು ರೇಣು ದೇಸಾಯಿ ಜತೆ ತಮ್ಮ ಮನೆಯಲ್ಲಿ ಆರ್ಯ ಸಮಾಜ ಸಂಪ್ರದಾಯದಂತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

  ಆದರೆ 18 ತಿಂಗಳಲ್ಲೇ ದಾಂಪತ್ಯ ಅಪಥ್ಯವಾಯಿತು. ನಟ ಪವನ್ ಕಲ್ಯಾಣ್ ಬಾಳಲ್ಲಿ ದರಾ ಮಾರ್ಕ್ಸ್ ಎಂಬ ಚೆಲುವೆ ಎಂಟ್ರಿ ಹಾಕಿದ್ದರು. ಅಲ್ಲಿಂದಾಚೆಗೆ ರೇಣು ದೇಸಾಯಿ ಅವರು ತಮ್ಮ ಪತಿ ಪವನ್ ಕಲ್ಯಾಣ್ ರಿಂದ ದೂರವಾದರು. ಇತ್ತ ಪವನ್, ದರಾ ಮಾರ್ಕ್ಸ್ ಜತೆ ತಮ್ಮ ಬಂಜಾರಾ ಹಿಲ್ಸ್ ಮನೆಯಲ್ಲಿ ದಾಂಪತ್ಯ ಹೂಡಿದರು.

  ಪವನ್ ಅಣ್ಣ, ಮೆಗಾಸ್ಟಾರ್ ಚಿರಂಜೀವಿ ಅವರು ತನ್ನ ತಮ್ಮನ ದಾಂಪತ್ಯವನ್ನು ಉಳಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ ದಂಪತಿ ಅದಾಗಲೇ ಬಹು ದೂರ ಸಾಗಿದ್ದರು. ರೇಣು ದೇಸಾಯಿ, ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜಾರ ನಿಶ್ಚಿತಾರ್ಥ ಮತ್ತು ಮದುವೆಗೂ ಬರಲಿಲ್ಲ.

  ಯಾರೀ ಪವರ್ ಸ್ಟಾರ್ ಪವನ್ ಕಲ್ಯಾಣ್: ತೆಲುಗು ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ. ತಿಲೊ ಪ್ರೇಮ, ತಮ್ಮುಡು, ಬದ್ರಿ, ಖುಷಿ, ಜಲ್ಸಾದಂತಹ ಹಿಟ್ ಚಿತ್ರಗಳನ್ನು ಪವನ್ ನೀಡಿದ್ದಾರೆ. ವೆಂಕಟ್ ರಾವ್ ಮತ್ತು ಅಂಜನಾ ದೇವಿ ದಂಪತಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ತಂದೆ-ತಾಯಿ. ಆಂಧ್ರದ ಮೋಗಲ್ತೂರುನಲ್ಲಿ 1965ರಲ್ಲಿ ನಟ ಪವನ್ ಜನನ.

  English summary
  Telugu Star Pawan Kalyan divorce Darah Marks Rs 40 crore. Power star Pawan Kalyan his second wife Renu Desai have opted for an out-of-court divorce settlement and he is said to have agreed to pay Rs 40 crore to the former actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X