twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ'ದಿಂದ ಕದ್ದ ಮಾಲನ್ನು ತೆಗೆದುಹಾಕಿದ ಅಮೆಜಾನ್‌ಗೆ ಧನ್ಯವಾದ ಎಂದು ಸಂಭ್ರಮಿಸಿದ ಥೈಕ್ಕುಡಂ ಬ್ರಿಡ್ಜ್!

    |

    ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಕಾಂತಾರ ಇತ್ತೀಚೆಗಷ್ಟೇ 400 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆಯಿತು. ಕರ್ನಾಟಕದ ಮಣ್ಣಿನ ಕತೆಯನ್ನು ಪರಭಾಷಾ ಸಿನಿ ಪ್ರೇಕ್ಷಕರೂ ಸಹ ಮೆಚ್ಚಿಕೊಂಡರು. ಕಾಂತಾರ ಚಿತ್ರ ಮೊದಲಿಗೆ ಕನ್ನಡ ಭಾಷೆಯ ಚಿತ್ರವಾಗಿ ಬಿಡುಗಡೆಗೊಂಡು ನಂತರ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡ ಕಾರಣ ಇತರೆ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು. ಕನ್ನಡದ ರೀತಿಯೇ ಬೇರೆ ಭಾಷೆಗಳಲ್ಲಿಯೂ ಕಾಂತಾರ ಕೋಟಿ ಕೋಟಿ ಬಾಚಿತು.

    ಕಾಂತಾರ ಚಿತ್ರ ಎಷ್ಟು ಫೇಮ್ ಪಡೆದುಕೊಂಡಿತೋ ಅಷ್ಟೇ ಮಟ್ಟಕ್ಕೆ ಚಿತ್ರದ ಕ್ಲೈಮಾಕ್ಸ್ ಗೀತೆ 'ವರಾಹ ರೂಪಂ' ಸಹ ಜನಪ್ರಿಯತೆ ಗಳಿಸಿತ್ತು. ಎಲ್ಲಿ ನೋಡಿದರೂ ಸಹ ಈ ಹಾಡು ಸದ್ದು ಮಾಡುತ್ತಿತ್ತು. ಸಾಮಾಜಿಕ ಜಾಲತಾಣದ ರೀಲ್ಸ್‌ಗಳ ತುಂಬಾ ವೈರಲ್ ಆಗಿದ್ದ ಈ ಹಾಡನ್ನು ಪರಭಾಷಾ ಸಿನಿ ರಸಿಕರೂ ಸಹ ಮೆಚ್ಚಿಕೊಂಡಿದ್ದರು. ಹೀಗೆ ವೈರಲ್ ಆದ ಹಾಡಿನ ಬಗ್ಗೆ ಟ್ರೋಲ್ ಕೂಡ ಆರಂಭವಾಗಿತ್ತು. ಈ ಹಾಡಿಗೆ ಬಳಸಲಾಗಿರುವ ಟ್ಯೂನ್ ಮಲಯಾಳಂನ 'ನವರಸಮ್' ಹಾಡಿನದ್ದು ಎಂದು ಟ್ರೋಲ್ ಮಾಡಲಾಗಿತ್ತು.

    ಇನ್ನು ಟ್ರೋಲ್ ಹೆಚ್ಚಾದ ನಂತರ ಮಧ್ಯ ಪ್ರವೇಶಿಸಿದ ಥೈಕ್ಕುಡಂ ಬ್ರಿಡ್ಜ್ ಹಾಗೂ ಮಾತೃಭೂಮಿ ಕಪ್ಪ ಟಿವಿ ಇದು ನಮ್ಮ ನವರಸಮ್ ಹಾಡಿನ ಕಾಪಿ ಎಂದು ಕೇಸ್ ದಾಖಲಿಸಿದವು. ಕೃತಿಚೌರ್ಯವಾಗಿರುವ ಹಾಡು ಎಂದು ತೀರ್ಮಾನಿಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯಗಳು ಕಾಂತಾರ ಚಿತ್ರದಿಂದ ಹಾಗೂ ಎಲ್ಲಾ ಆಡಿಯೊ ಪ್ಲಾಟ್‌ಫಾರ್ಮ್‌ಗಳಿಂದಲೂ ವರಾಹ ರೂಪಂ ಹಾಡನ್ನು ತೆಗೆದು ಹಾಕಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ಕಾಂತಾರ ಚಿತ್ರದಿಂದ ಈ ಹಾಡನ್ನು ತೆಗೆದು ಹಾಕಲೇ ಇಲ್ಲ ಹಾಗೂ ಚಿತ್ರ ಐವತ್ತು ದಿನಗಳನ್ನು ಸಹ ಪೂರೈಸಿತ್ತು. ಹೀಗಾಗಿ ವರಾಹ ರೂಪಂ ಕಾಪಿ ಅಲ್ಲ ಎಂದೇ ಮಾತನಾಡಿಕೊಂಡಿದ್ದ ಪ್ರೇಕ್ಷಕರಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರ ಶಾಕ್ ನೀಡಿದೆ. ಚಿತ್ರದಲ್ಲಿ ವರಾಹ ರೂಪಂ ಹಾಡಿನ ರಾಗ ಸಂಯೋಜನೆಯನ್ನೇ ಬದಲಾಯಿಸಲಾಗಿದೆ.

    ಅಮೆಜಾನ್‌ಗೆ ಥೈಕ್ಕುಡಂ ಬ್ರಿಡ್ಜ್ ಧನ್ಯವಾದ

    ಅಮೆಜಾನ್‌ಗೆ ಥೈಕ್ಕುಡಂ ಬ್ರಿಡ್ಜ್ ಧನ್ಯವಾದ

    ಕಾಂತಾರ ಚಿತ್ರದಲ್ಲಿ ನಮ್ಮ ಹಾಡಿನ ರಾಗವನ್ನು ಬಳಸಿಕೊಂಡಿರುವುದು ತಪ್ಪಲ್ಲ, ನಮಗೆ ಒಂದು ಸಣ್ಣ ಕ್ರೆಡಿಟ್ ಕೊಟ್ಟಿದ್ದರೆ ನಾವು ಯಾವುದೇ ತಕರಾರು ತೆಗೆಯುತ್ತಿರಲಿಲ್ಲ ಎಂದು ತಿಳಿಸಿದ್ದ ಥೈಕ್ಕುಡಂ ಬ್ರಿಡ್ಜ್ ಹೊಂಬಾಳೆ ಫಿಲ್ಮ್ಸ್ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಕೆಂಡ ಕಾರಿತ್ತು. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ಚಿತ್ರದಲ್ಲಿ ವರಾಹ ರೂಪಂ ಹಾಡಿನ ರಾಗವನ್ನು ಬದಲಿಸುವುದರ ಕುರಿತು ಟ್ವೀಟ್ ಮಾಡುವ ಮೂಲಕ ಥೈಕ್ಕುಡಂ ಬ್ರಿಡ್ಜ್ ಸಂಭ್ರಮಿಸಿದೆ. ನವರಸಮ್ ಹಾಡನ್ನು ಕಾಪಿ ಮಾಡಿ ಸಂಯೋಜಿಸಲಾಗಿದ್ದ ವರಾಹ ರೂಪಂ ಹಾಡನ್ನು ತೆಗೆದುಹಾಕಿದ ಅಮೆಜಾನ್‌ ಪ್ರೈಮ್ ವಿಡಿಯೊಗೆ ಧನ್ಯವಾದಗಳು, ನ್ಯಾಯ ಸಿಕ್ಕಿತು ಎಂದು ಥೈಕ್ಕುಡಂ ಬ್ರಿಡ್ಜ್ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

    ಥೈಕ್ಕುಡಂಗೆ ಹಿಡಿ ಶಾಪ ಹಾಕಿದ ನೆಟ್ಟಿಗರು

    ಥೈಕ್ಕುಡಂಗೆ ಹಿಡಿ ಶಾಪ ಹಾಕಿದ ನೆಟ್ಟಿಗರು

    ಇನ್ನು ಹಿಡಿದ ಹಠ ಬಿಡದೇ ವರಾಹ ರೂಪಂ ಮೇಲೆ ಕೃತಿ ಚೌರ್ಯದ ಕೇಸ್ ಹಾಕಿ ಚಿತ್ರದಿಂದ ಹಾಡನ್ನೇ ತೆಗೆದುಹಾಕುವಂತೆ ಮಾಡಿದ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಸಂಸ್ಥೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಖ್ಯಾತಿಗಾಗಿ ಒಂದೊಳ್ಳೆ ಅನುಭವ ನೀಡುವ ಚಿತ್ರವನ್ನೇ ಹಾಳು ಮಾಡಿ ಬಿಟ್ರಲ್ಲ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಹಿಡಿ ಶಾಪ ಹಾಕಿದ್ದಾರೆ.

    ಕಾಪಿ ಎಂಬುದು ಸತ್ಯ!

    ಕಾಪಿ ಎಂಬುದು ಸತ್ಯ!

    ಇನ್ನು ವರಾಹ ರೂಪಂ ಹಾಡಿನ ರಾಗ ನವರಸಮ್ ಹಾಡಿನ ಕಾಪಿ ಎಂಬುದು ನಿಜ ಎಂಬ ವಿಚಾರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಿಂದ ತಿಳಿದುಬಂದಿದೆ. ಚಿತ್ರವನ್ನು ವೀಕ್ಷಿಸಿದ ಸಿನಿ ರಸಿಕರು ಹಾಡಿನ ರಾಗ ಬದಲಾಗಿರುವ ಕಾರಣ ಚಿತ್ರದ ಕ್ಲೆಮ್ಯಾಕ್ಸ್ ಮೊದಲಿನಷ್ಟು ಪ್ರಭಾವ ಬೀರುವುದಿಲ್ಲ, ಸಪ್ಪೆಯಾಗಿದೆ ಎಂಬ ಅಭಿಪ್ರಾಯಗಳನ್ನು ನಿರಾಸೆಗೊಳಗಾದ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

    English summary
    Thaikudam bridge thanked amazon prime for removed plagiarised varaha roopam song in kantara.Read on
    Thursday, November 24, 2022, 13:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X