»   » ಅಭಿಮಾನಿಗಳನ್ನು ಪೇಚಿಗೆ ಸಿಲುಕಿಸಿದ ಐಂದ್ರಿತಾ ರೇ ಹುಟ್ಟುಹಬ್ಬ

ಅಭಿಮಾನಿಗಳನ್ನು ಪೇಚಿಗೆ ಸಿಲುಕಿಸಿದ ಐಂದ್ರಿತಾ ರೇ ಹುಟ್ಟುಹಬ್ಬ

Posted By:
Subscribe to Filmibeat Kannada

'ಪತಂಗವಾಗಿ ನಾ ಹಾರಬಲ್ಲೆ' ಅಂತ ಪ್ರಜ್ವಲ್ ದೇವರಾಜ್ ಅವರ ಜೊತೆ 'ಮೆರವಣಿಗೆ' ಚಿತ್ರದಲ್ಲಿ ಮಿಂಚಿದ್ದ ನಟಿ ಐಂದ್ರಿತಾ ರೇ ಅವರಿಗೆ ಇಂದು ಬೆಳ್ಳಂಬೆಳಗ್ಗೆಯಿಂದಲೇ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿತ್ತು.

ಆದರೆ ಧನ್ಯವಾದ ತಿಳಿಸಬೇಕಾಗಿದ್ದ ಬರ್ತ್ ಡೇ ಬೇಬಿ ಆಂಡಿ ಮಾತ್ರ ಅಯ್ಯೋ ದೇವರೇ..! ನನ್ನ ಹುಟ್ಟುಹಬ್ಬ ಇವತ್ತಲ್ಲ ಯಾರು ಹೇಳಿದ್ದು ನಿಮಗೆ ಅಂತ ಖುದ್ದು ಅವರೇ ಪೇಚಿಗೆ ಸಿಲುಕಿದ್ದು ಮಾತ್ರವಲ್ಲದೇ, ವಿವರಣೆ ಕೂಡ ನೀಡಿದ್ದಾರೆ.[ಸ್ಲೊವೇನಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಏನು ಕೆಲಸ?]

Thank You: But its not my birthday Today: Aindrita Ray

ನನ್ನ ಹುಟ್ಟುಹಬ್ಬ ಇವತ್ತಲ್ಲಾ ಎಂದು ಸಾರೀ ಸಾರೀ ಹೇಳಿ ಸುಸ್ತಾದ 'ಮನಸಾರೆ', 'ಜಂಗ್ಲಿ' ಖ್ಯಾತಿಯ ನಟಿ ಐಂದ್ರಿತಾ ರೇ ಅವರು ಕೊನೆಗೆ ತಮ್ಮ ಟ್ವಿಟ್ಟರ್ ನಲ್ಲಿ 'ನನ್ನ ಹುಟ್ಟುಹಬ್ಬ ಇವತ್ತಲ್ಲಾ', ಎಂದು ಟ್ವೀಟ್ ಮಾಡುವ ಮೂಲಕ ಕ್ಲಾರಿಫಿಕೇಶನ್ ನೀಡಿದ್ದಾರೆ.

"ಅದೇನೋ ಗೊತ್ತಿಲ್ಲ.. ಪ್ರತೀ ಬಾರಿ ಎಲ್ಲರೂ ನನ್ನ ಹುಟ್ಟುಹಬ್ಬವನ್ನು ಕನ್ ಫ್ಯೂಶನ್ ಮಾಡಿಕೊಳ್ಳುತ್ತಾರೆ. ಇವತ್ತು ನನ್ನ ಹುಟ್ಟುಹಬ್ಬ ಅಲ್ಲವೇ ಅಲ್ಲ. ನನ್ನ ಹುಟ್ಟುಹಬ್ಬ ಇರೋದು ಏಪ್ರಿಲ್ 16ಕ್ಕೆ. ಆದರೂ ಇಷ್ಟೆಲ್ಲಾ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು' ಎಂದು ಕ್ಯೂಟ್ ಆಂಡಿ, ಅಷ್ಟೇ ಕ್ಯೂಟ್ ಆಗಿ ಟ್ವೀಟ್ ಮಾಡಿದ್ದಾರೆ.['ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್]

ಅಷ್ಟಕ್ಕೂ ಈ ಅನಾಹುತಕ್ಕೆ ಕಾರಣವಾಗಿದ್ದು ಮಾತ್ರ ವಿಕಿಪೀಡಿಯ. ಖುದ್ದು ನಟಿ ಐಂದ್ರಿತಾ ಹಾಗೂ ಅವರ ಅಭಿಮಾನಿಗಳನ್ನು ಪೇಚಿಗೆ ಸಿಲುಕಿಸಿ ಫೂಲ್ ಮಾಡಿದ ವಿಕಿಪೀಡಿಯ ಮಾತ್ರ ಕಿಸಕ್ಕನೆ ನಕ್ಕು ಸುಮ್ಮನಾಗಿರಬಹುದಲ್ವೇ.[ಐಂದ್ರಿತಾಗೆ ಕನ್ನಡ ಕಲಿಸಲು ಪಣ ತೊಟ್ಟ ನವರಸ ನಾಯಕ]

ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಅಪರೂಪವಾಗಿರುವ ಐಂದ್ರಿತಾ ರೇ ಅವರ ಹಲವಾರು ಭಾವ-ಭಂಗಿ ನೋಡಲು ಈ ಗ್ಯಾಲರಿಯತ್ತ ಒಮ್ಮೆ ಕಣ್ಣಾಡಿಸಿ...

-
-
-
-
-
-
-
-
-
-
-
-
-
-
-
-
-
-
-
-
-
English summary
Kannada Actress Aindrita Ray was flooded with birthday wishes on April 4th. as it was mentioned so an her Wikipedia page. The Actress posted this not her Twitter page where she clarified that her birthday is on April 16th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada