ಕರ್ನಾಟಕ ಪೊಲೀಸರ ಜೊತೆ ಕುಣಿಯೋಣ ಬಾರಾ

ಪೊಲೀಸರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಲು ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಏರ್ಪಡಿಸಿರುವ ನಾಗರಿಕ ಕಾರ್ಯಕ್ರಮ ಇದಾಗಿರುತ್ತದೆ. ಈ ಕಾರ್ಯಕ್ರಮವನ್ನು ನ್ಯೂ ಡೈ ಮೆನ್ಸಸ್ ಸಂಸ್ಥೆ (New Dimension) ಆಯೋಜಿಸಿರುತ್ತದೆ.
ಈ ಸಮಾರಂಭವನ್ನು ರಾಜ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಖಾತೆ ಸಚಿವ, ಉಪಮುಖ್ಯಮಂತ್ರಿ ಆರ್. ಅಶೋಕ್ ಅವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಾಗೂ ಸಮಾರಂಭದ ಉದ್ಘಾಟನೆಯನ್ನು ಪೊಲೀಸ್ ಡಿ.ಜಿ.ಪಿ. ಎಲ್. ಪಚಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ರಿಕೆಟ್ ತಾರೆಗಳಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಬ್ರಿಜೇಷ್ ಪಾಟೀಲ್, ಸಿನಿಮಾ ನಟರುಗಳಾದ ರೆಬೆಲ್ ಸ್ಟಾರ್ ಅಂಬರೀಶ್, ಸಾ.ರಾ. ಗೋವಿಂದು, ಶಿವರಾಜ್ ಕುಮಾರ್, ವಿ. ರವಿಚಂದ್ರನ್, ಸುದೀಪ್, ರಾಕ್ ಲೈನ್ ವೆಂಕಟೇಶ್, ಗರುಡಾಚಾರ್ ರವರು ಭಾಗವಹಿಸಲಿದ್ದಾರೆ.
ಕನ್ನಡ ಚಲನಚಿತ್ರ ತಾರೆಯರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿ. ರವಿಚಂದ್ರನ್, ದಿಗಂತ್, ಯಶ್, ಯೋಗೇಶ್, ಪೂಜಾಗಾಂಧಿ, ಐಂದ್ರಿತಾ ರೇ, ರಾಗಿಣಿ, ನೀತೂ, ಸಾಧು ಕೋಕಿಲ ಇನ್ನೂ ಮುಂತಾದ ನಟ-ನಟಿಯರಿಂದ ಸಂಗೀತ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಡಾ. ಸಂಜಯ್ ರವರಿಂದ ನೃತ್ಯಗಳು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ರವರಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಪೊಲೀಸ್ ಹಾಗೂ ಅವರ ಕುಟುಂಬ ವರ್ಗದ ಮನ ಸಂತೋಷಪಡಿಸಲು ಅಭಿಯಾನ-2012 ಸಮಾರಂಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಿನಿಮಾ ತಾರೆಯರು, ಕಲಾವಿದರು ಮತ್ತು ಸಾಂಸ್ಕೃತಿಯ ಲೋಕದ ಪ್ರತಿಷ್ಠಿತ ವ್ಯಕ್ತಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ನೃತ್ಯ, ಹಾಸ್ಯ, ಪ್ರೇಕ್ಷಕರೊಂದಿಗೆ ಸಂವಾದ, ಪೊಲೀಸ್ ಹಿರೋಗಳಿಂದ ತಮ್ಮ ಅನುಭವಗಳ ವಿವರಣೆ, ಪೊಲೀಸ್ ಕಲಾವಿದರಿಂದ ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪೊಲೀಸರ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಖ್ಯಾತ ಗಾಯಕರಿಂದ ಸಂಗೀತ ಮುಂತಾದ ಕಾರ್ಯಕ್ರಮಗಳೀಂದ ಸಮಾರಂಭ ತುಂಬಿರುತ್ತದೆ. ಪೊಲೀಸರು ಪ್ರಸ್ತುತ ಪಡಿಸುವ 'ಆಕ್ಷನ್' (Action) ವಿಶೇಷ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿರುತ್ತದೆ.
ಸಮಾಜ ರಕ್ಷಣೆಯಲ್ಲಿ ಬಿಡುವಿಲ್ಲದೆ ಮಗ್ನರಾಗಿರುವ ಪೊಲೀಸ್ ಸಮುದಾಯವನ್ನು ಗೌರವಿಸಿ, ಪ್ರೋತ್ಸಾಹಿಸುವುದು ಹಾಗೂ ಜನ ಮಾನಸದಲ್ಲಿ ಪೊಲೀಸರ ವರ್ಚಸ್ಸನ್ನು ಹೆಚ್ಚಿಸುವುದು ಅಭಿಮಾನ-2012 ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಇದೇ ಸಂದರ್ಭದಲ್ಲಿ ನಾಗರಿಕರಿಗೆ ಕಾನೂನು-ಶಾಂತಿ-ನಿಯಂತ್ರಣ ಪರಿಪಾಲನೆ ಮತ್ತು ಪೊಲೀಸರೊಂದಿಗೆ ಸಹಕರಿಸುವ ಕುರಿತು ಅರಿವು ಮೂಡಿಸಲಾಗುವುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











