For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ಹಬ್ಬದಿಂದ 'ತರ್ಲೆ ನನ್ ಮಕ್ಳು' ಹವಾ ಶುರು

  By Harshitha
  |

  ಸದ್ಯ ಗಾಂಧಿನಗರದ ತುಂಬೆಲ್ಲಾ ಸೌಂಡ್ ಮಾಡ್ತಿರೋರು 'ತರ್ಲೆ ನನ್ಮಕ್ಳು'. ತರ್ಲೆ ಅಂದ ಕೂಡಲೆ ನಿಮಗೆ ನವರಸ ನಾಯಕ ಜಗ್ಗೇಶ್ ನೆನಪಾಗಬಹುದು. ಆದ್ರೆ, ಈ ಚಿತ್ರದಲ್ಲಿ ಜಗ್ಗೇಶ್ ಬದಲು ತರ್ಲೆ ಗ್ರೂಪ್ ಗೆ ಲೀಡರ್ ಆಗಿರುವವರು ಜಗ್ಗೇಶ್ ಪುತ್ರ ಯತಿರಾಜ್.

  ಟೈಟಲ್ ನಿಂದಾಗಿ ಹಲವು ದಿನಗಳಿಂದ ಸುದ್ದಿಯಲ್ಲೇ ಇರುವ 'ತರ್ಲೆ ನನ್ಮಕ್ಳು' ಚಿತ್ರ ಜನವರಿ 15 ರಂದು ಬಿಡುಗಡೆ ಆಗಲಿದೆ. ಯರ್ರಾಬಿರ್ರಿ ಕತ್ರಿ ಪ್ರಯೋಗ ಮಾಡಿದ ನಂತ್ರ 'ತರ್ಲೆ ನನ್ಮಕ್ಳು' ಚಿತ್ರ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ನಿಮ್ಮಲ್ಲರ ಮುಂದೆ ಬರೋಕೆ ರೆಡಿಯಾಗಿದೆ. [ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು]

  ಹೇಳಿ ಕೇಳಿ ಚಿತ್ರದ ಹೆಸರೇ 'ತರ್ಲೆ ನನ್ಮಕ್ಳು'. ಅಂದ್ಮೇಲೆ ಇಡೀ ಚಿತ್ರದಲ್ಲಿ ತರ್ಲೆ ಇದ್ದಿದ್ದೆ. ಗಾಂಧಿನಗರದ ದಿಗ್ಗಜರ ಕಾಲೆಳೆದಿರುವ 'ತರ್ಲೆ ನನ್ಮಕ್ಳು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು 'ಜೋಗಿ' ಪ್ರೇಮ್ ಗರಡಿಯಲ್ಲಿ ಪಳಗಿರುವ ನವ ಪ್ರತಿಭೆ ರಾಕೇಶ್. [ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!]

  ಅಂದ್ಹಾಗೆ, ತರ್ಲೆ ಟೀಮ್ ನಲ್ಲಿ ಯತಿರಾಜ್ ಜೊತೆ ನಾಗಶೇಖರ್ ಮತ್ತು ಶುಭಾ ಪುಂಜ ಕೂಡ ಇದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತರ್ಲೆಗಳ ಆಟ ಶುರುವಾಗಲಿದೆ. ನೋಡಿ ಎಂಜಾಯ್ ಮಾಡುವುದು ನಿಮಗೆ ಬಿಟ್ಟಿದ್ದು.

  English summary
  Kannada Actor Yathiraj and Nagashekar starrer 'Tharle Nan Maklu' is all set to release on January 15th. Rakesh has directed this movie.
  Saturday, January 9, 2016, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X